ಏಂಜಲೀನಾ ಜೋಲಿ-ಬ್ರಾಡ್ ಪಿಟ್ ಡಿವೋರ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Divorce

ಲಾಸ್ ಏಂಜಲೀಸ್ ಸೆ.21 : ಹಾಲಿವುಡ್ ನಟಿ, ಚಿತ್ರ ನಿರ್ಮಾಪಕಿ ಏಂಜಲೀನಾ ಜೋಲಿ, ಪತಿ ಹಾಲಿವುಡ್ ನಟ ಬ್ರಾಡ್ ಪಿಟ್ ಜೊತಗಿನ ತಮ್ಮ 2 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳಲು ಮುಂದಾಗಿದ್ದಾರೆ. ತಮ್ಮ ದಾಂಪತ್ಯದಲ್ಲಿ ಮೂಡಿರುವ ಕಾರಣ ವಿಚ್ಛೇದನ ನೀಡಬೇಕೆಂದು ಅವರು ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಪಿಟ್ ಮಕ್ಕಳ ಜೊತೆ ನಡೆದುಕೊಳ್ಳುತ್ತಿರುವ ರೀತಿ ಏಂಜಲೀನಾಗೆ ಸರಿ ಬರ್ತಾ ಇರಲಿಲ್ಲ ಎನ್ನಲಾಗಿದೆ. 41 ವರ್ಷದ ಏಂಜಲೀನಾ ಸೋಮವಾರ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸಿದ್ದಾಳೆ. ಆಗಾಗ ಮಕ್ಕಳನ್ನು ಬಂದು ನೋಡಿಕೊಂಡು ಹೋಗಲು ಪಿಟ್ ಗೆ ಅನುಮತಿ ನೀಡುವಂತೆಯೂ ಕೋರಿದ್ದಾಳೆ.

ಸೆಪ್ಟೆಂಬರ್ 15,2016 ರಂದು ತಾವಿಬ್ಬರು ಬೇರೆ ಉಳಿಯಲು ಶುರುಮಾಡಿದ್ದೇವೆಂದು ಏಂಜಲೀನಾ ಅರ್ಜಿಯಲ್ಲಿ ತಿಳಿಸಿದ್ದಾಳೆ.ಸುಮಾರು ಹತ್ತು ವರ್ಷಗಳ ಕಾಲ ಸಂಬಂಧದಲ್ಲಿದ್ದ ಜೋಡಿ, 2014ರ ಆಗಸ್ಟ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಪಿಟ್ ಗೆ ಇದು ಎರಡನೇ ಮದುವೆಯಾಗಿತ್ತು. 52 ವರ್ಷದ ಪಿಟ್ ಗೆ ಆರು ಮಕ್ಕಳಿದ್ದಾರೆ. ಮಾಧ್ಯಮಗಳಲ್ಲಿ ಪಿಟ್ ಹಾಗೂ ಏಂಜಲೀನಾ ವಿವಾದದ ಬಗ್ಗೆ ಸುದ್ದಿಯಾದಾಗ ಏಂಜಲೀನಾ ಅದನ್ನು ತಿರಸ್ಕರಿಸಿದ್ದಳು.

► Follow us on –  Facebook / Twitter  / Google+

Facebook Comments

Sri Raghav

Admin