ಏರೋ ಇಂಡಿಯಾಗೆ ಕ್ಷಣಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

AirShow-5

ಬೆಂಗಳೂರು, ಫೆ.13 – ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳು ನಾಳೆಯಿಂದ ಆರಂಭಗೊಳ್ಳಲಿರುವ ಏರೋ ಇಂಡಿಯಾ 2017ರಲ್ಲಿ ಅನಾವರಣಗೊಳ್ಳಲಿದೆ.
ಈಗಾಗಲೇ 800ಕ್ಕೂ ಹೆಚ್ಚು ದೇಶ-ವಿದೇಶ ಕಂಪೆನಿಗಳು ಇತ್ತೀಚೆಗೆ ಅಭಿವೃದ್ಧಿಪಡಿಸಲಾದ ವೈಮಾನಿಕ ಕ್ಷೇತ್ರದ ಆಧುನಿಕ ಸಲಕರಣೆಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಅದರ ಮೂಲಕ ಏಷ್ಯಾ ಸೇರಿದಂತೆ ಐರೋಪ್ಯ ಖಂಡದ ಪ್ರಮುಖ ರಾಷ್ಟ್ರಗಳನ್ನು ಆಕರ್ಷಿಸುತ್ತಿದೆ. ಪ್ರಮುಖವಾಗಿ ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಾಗರಿಕ ವಿಮಾನ ಯಾನ ಸೇವೆ ಪರಿಗಣಿಸಿ ಬೋಯಿಂಗ್ ಮತ್ತು ಏರ್‍ಬಸ್ ಕಂಪೆನಿಗಳು ದರದಲ್ಲಿ ಹಲವು ರಿಯಾಯಿತಿಗಳನ್ನು ನೀಡಿ ವಿಮಾನಯಾನ ಕಂಪೆನಿಗಳನ್ನು ಆಕರ್ಷಿಸಲು ಮುಂದಾಗುತ್ತಿದೆ.

ಇದಲ್ಲದೆ, ಸಮರ ವಿಮಾನದಲ್ಲೂ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ರಷ್ಯಾ, ಫ್ರಾನ್ಸ್, ಅಮೆರಿಕದ ಜೆಟ್‍ಗಳನ್ನು ಖರೀದಿಸಲು ಮುಂದಾಗುತ್ತಿದೆ. ಇದರ ನಡುವೆ ಸ್ಥಳೀಯರನ್ನು ಆಕರ್ಷಿಸುವ ಲೋಹದ ಹಕ್ಕಿಗಳ ಪ್ರದರ್ಶನಕ್ಕೂ ವೇದಿಕೆ ಸಜ್ಜುಗೊಂಡಿದೆ.  ನಾಳೆ ಬೆಳಗ್ಗೆ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ವಿಮಾನಯಾನ ಸಚಿವ ಜಗಪತಿ ಬಾಬು ಸೇರಿದಂತೆ ವಾಯುಪಡೆಯ ಮುಖ್ಯಸ್ಥರು ಆಗಮಿಸಲಿದ್ದಾರೆ. 150ಕ್ಕೂ ಹೆಚ್ಚು ರಾಷ್ಟ್ರಗಳಿಂದ ರಕ್ಷಣಾ ವಲಯದ ನಿಯೋಗವೂ ಕೂಡ ಐದು ದಿನಗಳ ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin