ಏರ್ಪೋರ್ಟ್’ನಲ್ಲಿ ಕೂದಲೆಳೆಯಲ್ಲಿ ಅಂತರದಲ್ಲಿ ತಪ್ಪಿದ ವಿಮಾನಗಳ ಮುಖಾಮುಖಿ ಡಿಕ್ಕಿ..!

ಈ ಸುದ್ದಿಯನ್ನು ಶೇರ್ ಮಾಡಿ

Airport

ನವದೆಹಲಿ, ಡಿ.27-ದೇಶದ ವಿವಿಧೆಡೆ ವಿಮಾನ ಅಚಾತುರ್ಯಗಳು ಮರುಕಳಿಸುತ್ತಲವೇ ಇವೆ. ರನ್‍ವೇನಲ್ಲಿ ಎರಡು ವಿಮಾಣಗಳ ಮುಖಾಮುಖಿ ಡಿಕ್ಕಿ ಅಪಘಾತ ಸ್ವಲ್ಪದರಲ್ಲೇ ತಪ್ಪಿದ್ದು, 200ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಲಖನೌನಿಂದ ಆಗಷ್ಟೇ ಭೂಸ್ಫರ್ಶ ಮಾಡಿದ್ದ ಇಂಡಿಗೋ ವಿಮಾನ ಮತ್ತು ರನ್‍ವೇನಲ್ಲಿ ಮೇಲಕ್ಕೇರಬೇಕಿದ್ದ ಸ್ಪೈಸ್ ಜೆಟ್ ಫ್ಲೈಟ್ ಪರಸ್ಪರ ಡಿಕ್ಕಿಯಾಗುವ ದುರಂತ ಪವಾಡ ಸದೃಶ ತಪ್ಪಿದೆ.
ರನ್‍ವೇನಲ್ಲಿ ಚಲಿಸುತ್ತಿದ್ದ ಇಂಡಿಗೋ ಮತ್ತು ಸ್ಪೈಸ್‍ಜೆಟ್ ವಿಮಾನಗಳು ಎದುರು ಬದುರು ಬಂದು ಮುಖಾಮುಖಿಯಾಗುವ ಅನಾಹುತ ಸ್ವಲ್ಪದರಲ್ಲೇ ತಪ್ಪಿತು. ಎರಡೂ ವಿಮಾನಗಳಲ್ಲಿದ್ದ ಪ್ರಯಾಣಿಕರು ಸುರಕ್ಷಿತಗಾಗಿದ್ದಾರೆ ಎಂದು ವಿಮಾನನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ವಾಯು ಸಂಚಾರ ನಿಯಂತ್ರಣ ಗೋಪುರದ ತಪ್ಪು ಸಂವಹನ ಇದಕ್ಕೆ ಕಾರಣ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.   ಈ ಘಟನೆ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶ ನೀಡಿದ್ದು, ವಿಚಾರಣೆ ಮುಂದುವರಿದಿದೆ.   ಗೋವಾ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್‍ವೇಸ್ ವಿಮಾನವು ರನ್‍ವೇನಿಂದ 360 ಡಿಗ್ರಿ ಕೋನಕ್ಕೆ ತಿರುಗಿ ಮುಗ್ಗರಿಸಿದ ಸ್ವಲ್ಪ ಹೊತ್ತಿನಲ್ಲೇ ದೆಹಲಿಯಲ್ಲಿ ಐಜಿ ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ರನ್‍ವೇನಲ್ಲಿ ಈ ಘಟನೆ ಸಂಭವಿಸಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin