ಏರ್‍ಪೋರ್ಟ್ ಬಳಿ ಹಾರಾಡಿದ ಡ್ರೋಣ್, ಮುಂಬೈನಲ್ಲಿ ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

Drone-01

ಮುಂಬೈ, ಅ.19- ದೇಶದ ವಾಣಿಜ್ಯ ನಗರಿ ಮೇಲೆ ಭಯೋತ್ಪಾದಕರು ಮಾನವರಹಿತ ವಿಮಾನಗಳಿಂದ ದಾಳಿ ನಡೆಸಲಿದ್ದಾರೆ ಎಂಬ ಆತಂಕದ ವರದಿಗಳ ಬೆನ್ನಲ್ಲೇ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಡ್ರೋಣ್ ಹಾರಾಟ ಕಂಡುಬಂದ ಕಾರಣ ಮುಂಬೈನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಡೆಹ್ರಾಡೂನ್‍ನಿಂದ ಬರುತ್ತಿದ್ದ ಇಂಡಿಗೋ ಏರ್‍ಲೈನ್ಸ್ 6ಇ-755 ವಿಮಾನದ ಪೈಲೆಟ್ ಆಶೀಶ್ ರಂಜನ್ ತಾವು ಶಂಕಾಸ್ಪದ ರೀತಿಯಲ್ಲಿ ಡ್ರೋಣ್ ಹಾರುತ್ತಿದುದನ್ನು ನೋಡಿದ್ದಾಗಿ ತಿಳಿಸಿದ ಹಿನ್ನೆಲೆಯಲ್ಲಿ ತೀವ್ರ ಶೋಧ ನಡೆಯುತ್ತಿದೆ.
ಛತ್ರಪತಿ ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ನಲ್ಲಿ ತಾವು ನಿನ್ನೆ ರಾತ್ರಿ 7.30ರ ವೇಳೆ ಭೂಸ್ಪರ್ಶ ಮಾಡುವ ಸಂದರ್ಭದಲ್ಲಿ ವಿಮಾನದಿಂದ ಸುಮಾರು 100 ಮೀಟರ್ ಕೆಳಗೆ ನೀಲಿ ಮತ್ತು ಗುಲಾಬಿ ಬಣ್ಣದ ಡ್ರೋಣ್ ಹಾರುತ್ತಿದ್ದ ದೃಶ್ಯ ಕಂಡುಬಂದಿತು ಎಂದು ರಂಜನ್ ವಿಮಾನನಿಲ್ದಾಣದ ಏರಿಯಾ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು.

ಈ ಮಾಹಿತಿ ಗುಪ್ತಚರ ಸಂಸ್ಥೆ, ಭಯೋತ್ಪಾದನೆ ನಿಗ್ರಹ ದಳ. ವಿಶೇಷ ಪೊಲೀಸ್ ದಳ ಮತ್ತು ಅಪರಾಧ ತನಿಖಾ ದಳಕ್ಕೆ ರವಾನೆಯಾಯಿತು. ಮುಂಬೈನಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಡ್ರೋಣ್ ಬಗ್ಗೆ ಹೆಚ್ಚಿನ ವಿವರ ಕಲೆ ಹಾಕಲಾಗುತ್ತಿದೆ.  ಭಯೋತ್ಪಾದಕರ ದಾಳಿ ಭೀತಿ ಹಿನ್ನೆಲೆಯಲ್ಲಿ ಡ್ರೋಣ್‍ಗಳು, ದೂರ ನಿಯಂತ್ರಿತ ವಿಮಾನಗಳು, ಪ್ಯಾರಾಗ್ಲೈಡರ್‍ಗಳು ಮತ್ತು ಬೆಲೂನ್‍ಗಳ ಹಾರಾಟವನ್ನು ನಗರದ ವಾಯುಪ್ರದೇಶದಲ್ಲಿ ನಿಷೇಧಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin