ಏರ್ ಇಂಡಿಯಾ ಸಿಬ್ಬಂದಿಗೆ 25 ಬಾರಿ ಚಪ್ಪಲಿಯಿಂದ ಹೊಡೆದ ಶಿವಸೇನೆ ಗುಂಡಾ ಸಂಸದ

ಈ ಸುದ್ದಿಯನ್ನು ಶೇರ್ ಮಾಡಿ

Raveendra

ಪುಣೆ/ನವದೆಹಲಿ, ಮಾ.23– ಕ್ಷುಲ್ಲಕ ಕಾರಣಕ್ಕಾಗಿ ಶಿವಸೇನೆ ಸಂಸದ ರವೀಂದ್ರ ಗಾಯಕ್‍ವಾಡ್ ಏರ್ ಇಂಡಿಯಾ ಸಿಬ್ಬಂದಿ ಒಬ್ಬರಿಗೆ 25ಬಾರಿ ಚಪ್ಪಲಿಯಿಂದ ಥಳಿಸಿದಲ್ಲದೆ ತನ್ನ ಗೂಂಡಾಗಿರಿಯನ್ನು ಸಮರ್ಥಿಸಿಕೊಂಡು ದರ್ಪ ಮೆರೆದಿದ್ದಾರೆ.   ಪುಣೆ-ದೆಹಲಿ ಮಾರ್ಗದ ಏರ್ ಇಂಡಿಯಾ ವಿಮಾನದಲ್ಲಿ ಸೀಟು ಬದಲಾವನೆ ಮಾಡಿದ ಕಾರಣಕ್ಕಾಗಿ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಗಾಯಕ್‍ವಾಡ್ ಅವರಿಗೆ 25 ಬಾರಿ ಚಪ್ಪಲಿಯಿಂದ ಥಳಿಸಿದ್ದಾರೆ.   ಈ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಸಂಸದರು ಆತ ತಪ್ಪು ಮಾಡಿರುವ ಕಾರಣಕ್ಕಾಗಿ ತಾವು 25 ಬಾರಿ ಭಾರಿಸಿದ್ದಾಗಿ ದರ್ಪದ ಹೇಳಿಕೆಯನ್ನೂ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin