ಏರ್-ಕೂಲರ್‍ಗಳ ತಯಾರಿಕಾ ಘಟಕದಲ್ಲಿ ಅಗ್ನಿ ದುರಂತ : 6 ಮಂದಿ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Fire-Hydarabad--01

ಹೈದರಾಬಾದ್, ಫೆ.22-ಹವಾನಿಯಂತ್ರಿತ ಸಾಧನಗಳ (ಏರ್-ಕೂಲರ್‍ಗಳು) ತಯಾರಿಕಾ ಘಟಕದಲ್ಲಿ ಬೆಂಕಿ ದುರಂತಕ್ಕೆ ಕನಿಷ್ಠ ಆರು ಮಂದಿ ಜೀವಂತ ದಹನಗೊಂಡಿರುವ ದಾರುಣ ಘಟನೆ ಹೈದರಾಬಾದ್‍ನಲ್ಲಿ ಇಂದು ಮುಂಜಾನೆ ಸಂಭವಿಸಿದೆ.   ಹೈದರಾಬಾದ್‍ನ ರಾಜೇಂದ್ರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅತ್ತಾಪುರ್‍ನ ಐರನ್ ಶೀಟ್‍ಗಳನ್ನು ತಯಾರಿಸುವ ಏ-1 ಏರ್‍ಕೂಲರ್ಸ್ ಎಂಬ ಹೆಸರಿನ ಸಣ್ಣ ಘಟಕದಲ್ಲಿ ಇಂದು ಮುಂಜಾನೆ 5 ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಘಟಕದಲ್ಲಿ ಮಲಗಿದ್ದ ಒಡಿಶಾ, ಛತ್ತೀಸ್‍ಗಢ ಮತ್ತು ಬಿಹಾರ ಮೂಲದ ಆರು ಕಾರ್ಮಿಕರು ಬೆಂಕಿಗಾಹುತಿಯಾಗಿದ್ದಾರೆ.

ಏರ್-ಕೂಲರ್‍ನ ಶಾರ್ಟ್ ಸಕ್ರ್ಯೂಟ್ ಈ ದುರ್ಘಟನೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ರಾಜೇಂದ್ರನಗರ ಸಹಾಯಕ ಪೊಲೀಸ್ ಆಯುಕ್ತ ಗಂಗಿ ರೆಡ್ಡಿ ಹೇಳಿದ್ದಾರೆ.   ನತದೃಷ್ಟ ಕಾರ್ಮಿಕರು ಎಚ್ಚೆತ್ತುಕೊಳ್ಳುವುದಕ್ಕೆ ಮುನ್ನವೇ ಇಡೀ ಘಟಕವನ್ನು ಬೆಂಕಿ ಆವರಿಸಿತು. ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ನಾಲ್ಕು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದರು. ನಂತರ ಸುಟ್ಟು ಕರಕಲಾದ ಆವಶೇಷಗಳನ್ನು ತೆರವುಗೊಳಿಸಿ ನೋಡಿದಾಗ ಆರು ಕಾರ್ಮಿಕರು ಸಜೀವ ದಹನಗೊಂಡಿದ್ದರು.   ಈ ಘಟನೆ ಸಂಬಂಧ ಘಟಕದ ಮಾಲೀಕ ಪ್ರಮೋದ್ ಕುಮಾರ್‍ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin