ಏ.1ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

ಈ ಸುದ್ದಿಯನ್ನು ಶೇರ್ ಮಾಡಿ

Lorry-Straik

ಬೆಂಗಳೂರು, ಮಾ.24– ಮೂರನೆ ವ್ಯಕ್ತಿ (ಥರ್ಡ್ ಪಾರ್ಟಿ ಪ್ರೀಮಿಯಂ)ಯ ಇನ್ಸುರೆನ್ಸ್ ಪ್ರೀಮಿಯಂ ಮೊತ್ತವನ್ನು ಶೇ.50ರಷ್ಟು ಹೆಚ್ಚಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಏ.1ರಿಂದ ದೇಶಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಆಲ್ ಇಂಡಿಯಾ ಕಾನ್‍ಫೆಡರೇಷನ್ ಆಫ್ ಗೂಡ್ಸ್ ವೆಹಿಕಲ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಚನ್ನಾರೆಡ್ಡಿ ಮಾತನಾಡಿ, ಇತ್ತೀಚೆಗೆ ಟಿಪಿಪಿ ವಾಣಿಜ್ಯ ವಾಹನ ವಿಮಾ ಮೊತ್ತವನ್ನು ಶೇ.50ರಷ್ಟು ಹೆಚ್ಚಿಸುವಂತೆ ವಿಮಾ ಕಂಪೆನಿಗಳು ಮಾಡಿರುವ ಮನವಿಗೆ ಐಆರ್‍ಡಿಎಐ (ಇನ್ಸುರೆನ್ಸ್ ರೆಗ್ಯುಲೇಟರಿ ಡೆವಲಪ್‍ಮೆಂಟ್ ಅಥಾರಟಿ ಆಫ್ ಇಂಡಿಯಾ) ಸಂಸ್ಥೆಯು ಪರಿಶೀಲಿಸಿ ಏ.1ರಿಂದ ಜಾರಿಗೆ ಬರುವಂತೆ ಶೇ.50ರಷ್ಟು ಪ್ರೀಮಿಯಂಅನ್ನು ಹೆಚ್ಚಿಸಲು ತೀರ್ಮಾನಿಸಿದೆ.

ಇದು ಖಂಡಿತ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದೇಶದಲ್ಲಿ ಲಾರಿ, ಟ್ಯಾಕ್ಸಿ, ಟೆಂಪೋ ಗೂಡ್ಸ್ ಗಾಡಿಗಳು ಸೇರಿದಂತೆ 1.95 ಕೋಟಿ ವಾಣಿಜ್ಯ ವಾಹನಗಳಿವೆ. ಏಕಾಏಕಿ ವಿಮಾ ಪ್ರೀಮಿಯಂ ದರವನ್ನು ದುಪ್ಪಟ್ಟುಗೊಳಿಸಿದರೆ ನಮಗೆ ಆರ್ಥಿಕವಾಗಿ ಅತಿ ಹೆಚ್ಚು ಹೊರೆ ಬೀಳುತ್ತದೆ ಎಂದು ತಿಳಿಸಿದರು.
ನಾವು ಐಆರ್‍ಡಿಎಐ ಸಂಸ್ಥೆಗೆ ಈ ಮೊದಲೇ ಮನವಿ ಮಾಡಿ ಟಿಪಿಪಿ ಪ್ರೀಮಿಯಂಅನ್ನು ನಿಗದಿಪಡಿಸಲು ಆಯಾಯ ಕಂಪೆನಿಗಳ ವಿವೇಚನೆಗೆ ಬಿಡಬೇಕು. ಇದರಿಂದ ಇಂತಹ ಏರಿಕೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ತಿಳಿಸಿದ್ದೆವು. ಆದರೂ ಐಆರ್‍ಡಿಎಐ ಸಂಸ್ಥೆಯು ನಮ್ಮ ಮನವಿಯನ್ನು ತಳ್ಳಿಹಾಕಿದೆ. ಶೇ.50ರಷ್ಟು ಟಿಪಿಪಿ ವಾಣಿಜ್ಯ ವಾಹನ ವಿಮಾ ಮೊತ್ತ ಹೆಚ್ಚಿಸಲು ನಿರ್ಧರಿಸಿದೆ. ಹಾಗಾಗಿ ಏ.1 ರಿಂದ ದೇಶಾದ್ಯಂತ ಅನಿರ್ದಿಷ್ಟಾವಧಿ ಲಾರಿ ಹಾಗೂ ವಾಣಿಜ್ಯ ವಾಹನಗಳ ಸಂಚಾರ ನಿಲ್ಲಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಬೆಂಗಳೂರು ನಗರ ಕಾರ್ಯದರ್ಶಿ ಶ್ರೀನಿವಾಸ್ ಸುಂದರ್, ರಾಜ್ಯ ಲಾರಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ, ಬೆಂಗಳೂರು ನಗರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚಾಂದ್‍ಪಾಷ, ಯಶವಂತಪುರ ಲಾರಿ ಓನರ್ಸ್ ಸಂಘದ ಉಪಾಧ್ಯಕ್ಷ ಮೋಹನ್, ಎಂ.ಪೆರಿಯಸ್ವಾಮಿ, ರಾಮಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin