ಏ.1ರಿಂದ ಪ್ರತಿ ಯೂನಿಟ್‍ಗೆ 40 ಪೈಸೆ ವಿದ್ಯುತ್ ದರ ಏರಿಕೆ…!

ಈ ಸುದ್ದಿಯನ್ನು ಶೇರ್ ಮಾಡಿ

Electricity--------01

ಬೆಂಗಳೂರು,ಮಾ.27-ನಾಲ್ಕು ದಶಕಗಳ ನಂತರ ಭೀಕರ ಬರಗಾಲಕ್ಕೆ ತುತ್ತಾಗಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿಗಾಗಿ ಪರದಾಡುತ್ತಿರುವ ಬೆನ್ನಲ್ಲೇ ಸರ್ಕಾರ ಜನರಿಗೆ ವಿದ್ಯುತ್ ಶಾಕ್ ಕೊಡಲು ಮುಂದಾಗಿದೆ.   ಏಪ್ರಿಲ್ 1ರಿಂದ ರಾಜ್ಯದ ಎಲ್ಲ ವಿದ್ಯುತ್ ಕಂಪನಿಗಳಲ್ಲಿ ಪ್ರತಿ ಯೂನಿಟ್‍ಗೆ 40 ಪೈಸೆ ದರ ಹೆಚ್ಚಳ ಮಾಡಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‍ಸಿ) ತೀರ್ಮಾನಿಸಿದೆ.   ಈಗಾಗಲೇ ಬಿಸಿಲಿನ ಝಳದಿಂದ ತತ್ತರಿಸಿ ಹೋಗಿರುವ ರಾಜ್ಯದ ಜನತೆಗೆ ವಿದ್ಯುತ್ ದರ ಹೆಚ್ಚಳವಾಗುವುದರೊಂದಿಗೆ ಕೆಇಆರ್‍ಸಿ ಗಾಯದ ಮೇಲೆ ಬರೆ ಎಳೆಯಲು ಸಜ್ಜಾಗಿದೆ.

ನಿರ್ವಹಣೆ, ವಿದ್ಯುತ್ ಬೇಡಿಕೆ ಹೆಚ್ಚಳ ಸೇರಿದಂತೆ ಮತ್ತಿತರ ಕಾರಣಗಳಿಂದ ವಿದ್ಯುತ್ ಹೆಚ್ಚಳ ಮಾಡಬೇಕೆಂದು ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ಕಂಪನಿಗಳು ಕೆಲ ತಿಂಗಳ ಹಿಂದೆಯೇ ಕೆಇಆರ್‍ಸಿಗೆ ಪ್ರಸ್ತಾವನೆ ಸಲ್ಲಿಸಿತು.   ಆದರೆ ಈ ಬಾರಿ ರಾಜ್ಯದಲ್ಲಿ 140ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರಗಾಲ ಆವರಿಸಿರುವ ಕಾರಣ ದರ ಹೆಚ್ಚಳ ಮಾಡಿದರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಅಳಕು ಸರ್ಕಾರಕ್ಕಿದೆ.  ದರ ಏರಿಕೆ ಮಾಡದಿದ್ದರೆ ಈ ಕಂಪನಿಗಳು ನಷ್ಟಕ್ಕೆ ಸಿಲುಕುತ್ತದೆ. ಇದರಿಂದ ನಿರ್ವಹಣೆ ಮಾಡಲು ಸಾಧ್ಯವೇ ಇಲ್ಲ ಎಂದು ಕೆಇಆರ್‍ಸಿ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿತ್ತು. ಕೆಲ ದಿನಗಳ ಹಿಂದೆ ಕೆಇಆರ್‍ಸಿ ಅಧ್ಯಕ್ಷರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ದರ ಹೆಚ್ಚಳ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಪ್ರತಿ ಯೂನಿಟ್‍ಗೆ ಒಂದು ರೂ. ಹೆಚ್ಚಳ ಮಾಡಬೇಕು. ಬೆಸ್ಕಾಂ ಹೊರತುಪಡಿಸಿದರೆ ಉಳಿದ ಕಂಪನಿಗಳು ನಷ್ಟದ ಹಾದಿಯಲ್ಲಿವೆ. ಹೀಗಾದರೆ ನಿರ್ವಹಣೆ ಕಷ್ಟಸಾಧ್ಯವಾಗುತ್ತದೆ ಎಂದು ಹೇಳಿದ್ದರು.   ದರ ಹೆಚ್ಚಳ ಮಾಡುವ ಮುನ್ನ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಣೆ ಮಾಡಬೇಕೆಂದು ಸರ್ಕಾರ ಕೆಆರ್‍ಸಿಇಗೆ ಸೂಚನೆ ಕೊಟ್ಟಿತ್ತು. ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿರುವ ಆಯೋಗ ಒಂದು ಯೂನಿಟ್‍ಗೆ 40 ಪೈಸೆ ಏರಿಕೆ ಮಾಡಲು ತೀರ್ಮಾನಿಸಿದ್ದು, ನೂತನ ದರ ಏಪ್ರಿಲ್ 1ರಿಂದಲೇ ಜಾರಿಗೆಯಾಗಲಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೊಗ(ಕೆಇಆರ್‍ಸಿಇ)ದ ಎಲ್ಲ ಎಸ್ಕಾಂಗಳು, ಪ್ರತಿ ಯೂನಿಟ್ಗೆ 1.48 ರೂ. ಏರಿಕೆ ಮಾಡಬೇಕು ಎಂದು ಮನವಿ ಸಲ್ಲಿಸಿದೆ.

ಈ ಬಗ್ಗೆ ಈಗಾಗಲೆ ಎಲ್ಲ ಕಡೆಯಲ್ಲೂ ಸಾರ್ವಜನಿಕ ಅದಾಲತ್ ನಡೆಸಲಾಗಿದೆ. ವಿದ್ಯುತï ಬೆಲೆ ಏರಿಕೆ ಮಾಡಲೇಬೇಕು ಎಂದು ಎಸ್ಕಾಂಗಳು ಪಟ್ಟು ಹಿಡಿದಿದ್ದರೆ, ಬರಗಾಲವಿರುವ ಕಾರಣ ಗ್ರಾಹಕರ ಮೆಲೆ ಮತ್ತೆ ಬೆಲೆ ಏರಿಕೆ ಹೊರೆ ಹೊರಿಸಬೇಡಿ ಎಂದು ರೈತರು, ಸಂಘ-ಸಂಸ್ಥೆಗಳು, ಗ್ರಾಹಕರು ಒತ್ತಾಯಿಸಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಸುತ್ತು ವಿದ್ಯುತ್ ಪ್ರಸರಣ ನಿಗಮದ ಜತೆ ಚರ್ಚೆ, ಸಭೆ ನಡೆಸಿದೆ. ಆದರೆ ಹೆಚ್ಚಳ ಅನಿವಾರ್ಯ ಎಂಬ ಮಾತು ಕೇಳಿ ಬರುತ್ತಿದೆ.   ಕೆಪಿಟಿಸಿಎಲ್ ಹಾಗೂ ಸಾರ್ವಜನಿಕರು ಈ ಎರಡೂ ಕಡೆ ಅಹವಾಲು ಆಲಿಸಿರುವ ಕೆಇಆರ್‍ಸಿ ಮಾಸಂತ್ಯದೊಳಗಾಗಿ ತನ್ನ ತೀರ್ಪು ಪ್ರಕಟಿಸಲಿದೆ. ಲಭ್ಯ ಮಾಹಿತಿ ಪ್ರಕಾರ ಪ್ರತಿ ಯೂನಿಟ್‍ಗೆ 40 ಪೈಸೆ ಅಂದಾಜಿನಲ್ಲಿ ಏರಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin