ಐಎಎಫ್ ಹೆಲಿಕಾಪ್ಟರ್ ಪತನ, ಪ್ರಾಣಾಪಾಯದಿಂದ ಪಾರಾದ ಪೈಲೆಟ್‍ಗಳು

ಈ ಸುದ್ದಿಯನ್ನು ಶೇರ್ ಮಾಡಿ

IAF--01

ನವದೆಹಲಿ, ಮಾ.15-ಭಾರತೀಯ ವಾಯು ಪಡೆಯ(ಐಎಎಫ್) ಚೇತಕ್ ಹೆಲಿಕಾಪ್ಟರ್ ಇಂದು ಬೆಳಗ್ಗೆ ಅಲಹಾಬಾದ್‍ನ ಬಮ್‍ರೌಲಿಯಲ್ಲಿ ಪತನಗೊಂಡಿದ್ದು, ಇಬ್ಬರು ಪೈಲೆಟ್‍ಗಳು ಪಾರಾಗಿದ್ದಾರೆ.   ತರಬೇತಿ ವೇಳೆ ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡುವಾಗ ಉರುಳಿ ಬಿತ್ತು ಎಂದು ಐಎಎಫ್ ಮೂಲಗಳು ತಿಳಿಸಿವೆ. ಘಟನೆ ಬಗ್ಗೆ ಕೋರ್ಟ್ ಆಫ್ ಎಂಕ್ವೈರಿಗೆ (ಸಿಒಐ) ವಾಯು ಪಡೆ ಆದೇಶಿಸಿದೆ.

ಇಬ್ಬರು ಪೈಲೆಟ್‍ಗಳು ತರಬೇತಿ ಪಡೆಯುತ್ತಿದ್ದ ಚೇತಕ್ ಹೆಲಿಕಾಪ್ಟರ್‍ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ತುರ್ತು ಭೂಸ್ಪರ್ಶ ಮಾಡುವಾಗ ಅದು ಪತನಗೊಂಡಿತು. ಪೈಲೆಟ್‍ಗಳು ತಕ್ಷಣ ಹೊರ ಜಿಗಿದು ಪಾರಾಗಿದ್ದಾರೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

[ ರಾಜ್ಯ ಬಜೆಟ್ 2017-18  (Live Updates) ]


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin