ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಸತ್ಯಾಂಶ ನಮಗೂ ಗೊತ್ತಾಗಬೇಕಿದೆ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Parameshwa-r

ಬೆಂಗಳೂರು, ಮೇ 22-ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಪ್ರಕರಣದ ಸತ್ಯಾಂಶ ನಮಗೂ ಗೊತ್ತಾಗಬೇಕಾಗಿದೆ. ಅದಕ್ಕಾಗಿ ಯಾವುದೇ ತನಿಖೆ ನಡೆಸಲು ನಾವು ಸಹಕಾರ ಕೊಡಲು ಸಿದ್ದರಿದ್ದೇವೆ. ಈಗಾಗಲೇ ಇದನ್ನು ಸ್ಪಷ್ಟಪಡಿಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು.
ಕುಮಾರ ಕೃಪಾ ಅತಿಥಿ ಗೃಹದಲ್ಲಿ ಕಾಂಗ್ರೆಸ್ ಮುಖಂಡರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು ಅಧಿಕಾರಿಯ ಸಾವಿನ ವಿಷಯದಲ್ಲಿ ರಾಜಕೀಯವಾಗಿ ಗೂಬೆ ಕೂರಿಸುವ ಪ್ರಯತ್ನವನ್ನು ಮಾಡುತ್ತಿವೆ.ಈ ಸಾವಿನ ಸತ್ಯಾಂಶ ನಮಗೂ ಗೊತ್ತಾಗಬೇಕಿದೆ. ಯಾವುದೇ ಗಂಭೀರ ತನಿಖೆ ನಡೆಸಲಿ. ನಾವು ಸಹಕಾರ ನೀಡುತ್ತೇವೆ. ಸಿಬಿಐ ತನಿಖೆ ನಡೆಸಲಿ ಎಂದು ಬಿಜೆಪಿಯವರು ಉತ್ತರಪ್ರದೇಶ ಸರ್ಕಾರವನ್ನು ಒತ್ತಾಯಿಸಲಿ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin