ಐಎಸ್‌ಐಎಸ್ ಉಗ್ರರ ವಿರುದ್ಧ ಬಿಗ್ ಬಾಂಬ್ ಪ್ರಯೋಗಿಸಿದ ದೊಡ್ಡಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

Bomb--01

ಕಾಬೂಲ್, ಏ.13 : ಐಎಸ್‌ಐಎಸ್ ಸಮರ ಸಾರಿರುವ ಅಮೇರಿಕ ಬಾಂಬ ಗಾಲ ತಾಯಿ ಎಂದೇ ಕರೆಯಲಾಗುವ ಶಕ್ತಿಶಾಲಿಯಾದ ಜಿಬಿಯು-43 ಎಂಬ ಬಾಂಬ್ ನ್ನು ಹಾಕಿದೆ.   ಫ್ಘಾನಿಸ್ತಾನ- ಪಾಕಿಸ್ತಾನದ ಗಡಿಭಾಗದಲ್ಲಿರುವ ಗುಹೆಗಳಲ್ಲಿ ಅಡಗಿರುವ ಉಗ್ರರ ಅಡಗುದಾಣ, ಗುಹೆಗಳು ಮತ್ತು ಮನೆಗಳನ್ನು ಟಾರ್ಗೆಟ್ ಮಾಡಿ ಈ ಬಾಂಬ್ ಪ್ರಯೋಗಿಸಲಾಗಿದೆ. 21, 600 ಪೌಂಡ್ ಭಾರದ ನಾನ್ ನ್ಯೂಕ್ಲಿಯರ್ ಬಾಂಬನ್ನು ಎಂಸಿ 130 ಏರ್ ಕ್ರಾಫ್ಟ್ ನಿಂದ ಕೆಳಗೆ ಹಾಕಲಾಯಿತು.

ಈ ಬಾಂಬ್ ಸುಮಾರು 32 ಕಿಲೋಮೀರ್ ವ್ಯಾಪ್ತಿಯಲ್ಲಿ ಬರುವ ಎಲ್ಲವನ್ನು ಸರ್ವನಾಶ ಮಾಡುವ ಶಕ್ತಿಯುಳ್ಳದ್ದಾಗಿದೆ. MOAB ಅಥವಾ Mother of all bombs ಎಂದು ಕರೆಯಲ್ಪಡುವ ಈ ಭಾರಿ ಗಾತ್ರ ಬಾಂಬನ್ನು ಇದೇ ಮೊದಲ ಬಾರಿಗೆ ಅಮೆರಿಕ ಪ್ರಯೋಗಿಸಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರ ನೆಲೆಗಳಾದ ಸುರಂಗ ಮಾರ್ಗಗಳನ್ನು ಧ್ವಂಸಗೊಳಿಸಲು ಇದನ್ನು ಬಳಸಿದ್ದಾರೆ ಎಂಬ ಮಾಹಿತಿಯಿದೆ.

ಯಾವಾಗ ಐಎಸ್‌ಐಎಸ್ ಉಗ್ರರ ಮೇಲೆ ದಾಳಿ ನಡೆಸಿದಾಗಲೂ ಈ ಉಗ್ರರು ಕಡಿದಾದ ಈ ಪರ್ವತ ಪ್ರದೇಶದ ಗುಹೆಗಳಲ್ಲಿ ಅಡಗಿ ಕುಳಿತುಬಿಡುತ್ತಿದುದರಿಂದ ಅವರನ್ನು ಹಿಡಿಯಲು ಅಥವಾ ಅವರ ಮೇಲೆ ದಾಳಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿಯೇ, ಈ ಬಾರಿ ಶಕ್ತಿ ಶಾಲಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ.

ಬಾಂಬ್ ನ ಸಾಮರ್ಥ್ಯ : 

GBU-43/B Massive Ordnance Air Blast

The GBU-43/B Massive Ordnance Air Blast is a large-yield conventional bomb, developed for the United States military by Albert L. Weimorts, Jr. of the Air Force Research Laboratory.
Weight: 10,300 kg (22,600 lb)
Blast yield: 11 tons TNT
Used by: United States Air Force, Royal Air Force
Filling weight: 8,500 kg (18,700 lb)
Designer: Air Force Research Laboratory
Produced: 2003
Filling: H-6

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin