ಐಎಸ್ ಉಗ್ರರು ಅಪಹರಿಸಿದ್ದ 39 ಭಾರತೀಯರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Sushma-Swaraj--01242524

ನವದೆಹಲಿ, ಮಾ.20-ವಿಶ್ವದ ಅತ್ಯಂತ ಭಯಾನಕ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳಿಂದ ಇರಾಕ್‍ನ ಮೊಸುಲ್ ನಗರದಿಂದ ಕಳೆದ 3 ವರ್ಷಗಳ ಹಿಂದೆ ಅಪಹೃತರಾಗಿದ್ದ 39 ಭಾರತೀಯರು ಹತ್ಯೆಯಾಗಿದ್ದಾರೆ. ರಾಜ್ಯಸಭೆಯಲ್ಲಿಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ.

2014ರಲ್ಲಿ ಪಂಜಾಬ್‍ನ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಇರಾಕ್‍ನ ಅತಿ ದೊಡ್ಡ ಪಟ್ಟಣ ಮೊಸುಲ್‍ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆ ಪಟ್ಟಣದಲ್ಲಿ ಭುಗಿಲೆದ್ದ ಹಿಂಸಾಚಾರ ಮತ್ತು ಸಂಘರ್ಷದ ನಂತರ 39 ಕಾರ್ಮಿಕರು ನಾಪತ್ತೆಯಾಗಿದ್ದರು. ಇವರನ್ನು ಐಎಸ್ ಉಗ್ರರು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು. ಇವರ ಸುಳಿವು ಪತ್ತೆಗಾಗಿ ಭಾರತ ನಿರಂತರ ಪ್ರಯತ್ನ ಮುಂದುವರೆಸಿತ್ತು. ಈಗ 39 ಅಪಹೃತ ಕಾರ್ಮಿಕರು ಹತ್ಯೆಯಾಗಿರುವುದಕ್ಕೆ ಸಾಕ್ಷಿ ಲಭಿಸಿದೆ.

Facebook Comments

Sri Raghav

Admin