ಐಎಸ್ ಉಗ್ರರ ಒತ್ತೆಯಲ್ಲಿದ್ದ ಇಬ್ಬರು ಭಾರತೀಯರ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ISI

ನವದೆಹಲಿ, ಸೆ. 15-ಲಿಬಿಯಾದಲ್ಲಿ ಕಳೆದ 14 ತಿಂಗಳುಗಳಿಂದ ಐಎಸ್ ಉಗ್ರರ ಒತ್ತೆಯಾಳಾಗಿದ್ದ ಇಬ್ಬರು ಭಾರತೀಯರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.   ಲಿಬಿಯಾದಲ್ಲಿ ಜುಲೈ 29, 2015ರಿಂದ ಒತ್ತೆಯಾಳಾಗಿದ್ದ ಟಿ. ಗೋಪಾಲಕೃಷ್ಣ (ಆಂಧ್ರಪ್ರದೇಶ) ಮತ್ತು ಸಿ. ಬಲರಾಂಕಿಶನ್ (ತೆಲಂಗಾಣ) ಅವರನ್ನು ರಕ್ಷಿಸಲಾಗಿದೆ ಎಂದು ಸುಷ್ಮಾ ಇಂದು ಟ್ವೀಟ್ ಮಾಡಿದ್ದಾರೆ.   ಲಿಬಿಯಾದ ಸಿರ್‍ಟೆ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದ ಇವರನ್ನು ಕಳೆದ ವರ್ಷ ಜುಲೈನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಅಪಹರಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin