ಐಎಸ್ ಉಗ್ರರ ಕಪಿಮುಷ್ಟಿಯಲ್ಲಿ ಸಿಲುಕಿ 78,000 ನಾಗರಿಕರ ನರಕ ಯಾತನೆ..!

ಈ ಸುದ್ದಿಯನ್ನು ಶೇರ್ ಮಾಡಿ

ISIS-Terrorist--01

ಬಾಗ್ದಾದ್, ಅ.4-ಕ್ರೂರ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರ ಹಿಡಿತದಲ್ಲಿರುವ ಉತ್ತರ ಇರಾಕ್‍ನ ಹವಿಜಾ ಪಟ್ಟಣದಲ್ಲಿ ಸಿಲುಕಿರುವ 78,000 ನಾಗರಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಇದೇ ವೇಳೆ ಪಟ್ಟಣವನ್ನು ಮತ್ತೆ ವಶಪಡಿಸಿಕೊಳ್ಳಲು ಸೇನಾ ಕಾರ್ಯಾಚರಣೆ ತೀವ್ರಗೊಂಡಿದೆ.  ಇರಾಕ್‍ನ ಎರಡನೇ ಅತಿದೊಡ್ಡ ನಗರವಾದ ಮೊಸುಲ್‍ನನ್ನು ದೀರ್ಘಕಾಲ ಹೋರಾಟದ ಬಳಿಕ ಮತ್ತೆ ವಶಪಡಿಸಿಕೊಂಡ ಇರಾಕ್ ಯೋಧರಿಗೆ ಹವಿಜಾ ಪಟ್ಟಣ ಮತ್ತೊಂದು ಸವಾಲಾಗಿ ಪರಿಣಮಿಸಿದೆ.

ಈ ಪ್ರಾಂತ್ಯವು 2014ರಿಂದ ಇಸ್ಲಾಮಿಕ್ ಸ್ಟೇಟ್ ಉಗ್ರರ ಹಿಡಿತದಲ್ಲಿದೆ. ಪಟ್ಟಣದಿಂದ ಹೊರ ಬರಲಾರದೆ ಪುರುಷರು, ಮಹಿಳೆಯರು, ಮಕ್ಕಳು ಮತ್ತು ವೃದ್ದರು ನರಳುತ್ತಿದ್ದಾರೆ. ಉಗ್ರರ ಕಪಿಮುಷ್ಟಿಯಲ್ಲಿ ಸಿಲುಕಿ ನರಳುತ್ತಿರುವ 78,000 ನಾಗರಿಕರನ್ನು ಸುರಕ್ಷಿತವಾಗಿ ಪಾರು ಮಾಡಲು ಸೆ.21ರಿಂದ ಇರಾಕ್ ಕಾರ್ಯಾಚರಣೆ ಆರಂಭಿಸಿದೆ.

Facebook Comments

Sri Raghav

Admin