ಐಎಸ್ ಉಗ್ರರ ಭಯ ನಮಗಿಲ್ಲ, ನಮ್ಮಲ್ಲಿ ದೇಶಭಕ್ತ ಮುಸ್ಲಿಮರಿದ್ದಾರೆ : ರಾಜನಾಥ್‍ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Rajanath Singh 01

ಹೈದರಾಬಾದ್, ನ.28- ಭಾರತದಲ್ಲಿ ದೇಶಭಕ್ತ ಮುಸ್ಲಿಂ ಬಾಂಧವರು ನೆಲೆಸಿರುವುದರಿಂದ ನಮಗೆ ಐಸೀಸ್ ಉಗ್ರರ ದುಷ್ಕøತ್ಯ ತಡೆಯುವುದು ದೊಡ್ಡ ಸಮಸ್ಯೆ ಅಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಡಿಜಿಪಿ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿರುವ ಅವರು, ನೆರೆರಾಷ್ಟ್ರ ಪಾಕಿಸ್ತಾನ ಸಾಕಷ್ಟು ಪಿತೂರಿಗಳನ್ನು ಮಾಡುತ್ತಿದೆ. ಆದರೆ, ರಾಷ್ಟ್ರದಲ್ಲಿ ದೇಶಭಕ್ತ ಇಸ್ಲಾಂ ಅನುಯಾಯಿಗಳಿದ್ದು, ಐಸೀಸ್ ಉಗ್ರ ಸಂಘಟನೆ ದೇಶಕ್ಕೆ ದೊಡ್ಡ ಬೆದರಿಕೆ ಎನಿಸುವುದಿಲ್ಲ ಎಂದು ಹೇಳಿದ್ದಾರೆ. ಭಾರತದ ವಿರುದ್ಧ ಉಗ್ರ ಚಟುವಟಿಕೆಗಳನ್ನು ನಡೆಸಲು ಜನರಿಗೆ ನೆರೆರಾಷ್ಟ್ರ ಕುಮ್ಮಕ್ಕು ನೀಡುತ್ತಿದೆ. ಉಗ್ರರಿಗೆ ಬೆಂಬಲವನ್ನು ನೀಡಿ, ಅವರಿಗೆ ತರಬೇತಿ ನೀಡಿ ದಾಳಿ ನಡೆಸಲು ಭಾರತದೊಳಗೆ ಕಳುಹಿತ್ತಿರುವುದು ನಮಗೆ ಗೊತ್ತಿರುವ ವಿಚಾರ ಆದರೆ, ಈ ಎಲ್ಲಾ ಪ್ರಯತ್ನಗಳ ನಡುವೆಯೂ ಭಾರತ ಸುರಕ್ಷಿತವಾಗಿದೆ.

ರಾಜ್ಯ ಹಾಗೂ ಕೇಂದ್ರದ ಸೇನಾ ಪಡೆಗಳ ಉತ್ತಮ ಹೊಂದಾಣಿಕೆಯಿಂದಾಗಿ ಉಗ್ರ ಸಂಘಟನೆಗಳ ಕಡೆಗೆ ಸೆಳೆತಕ್ಕೊಳಗಾಗಿರುವ ಯುವಕರು ಸಂಘಟನೆಗಳಿಗೆ ಸೇರ್ಪಡೆಗೊಳ್ಳಲು ಹಾಗೂ ದೇಶದ ಮೇಲೆ ದಾಳಿ ನಡೆಸಲು ಸಾಧ್ಯವಾಗುತ್ತಿಲ್ಲ. ಉಗ್ರ ಸಂಘಟನೆ ಕಡೆಗೆ ಈ ವರೆಗೂ 67 ಯುವಕರು ಆಕರ್ಷಣೆಗೊಳಗಾಗಿದ್ದಾರೆ. ಐಸೀಸ್ ಉಗ್ರ ಸಂಘಟನೆ ಕುರಿತಂತೆ ಇಂದು ವಿಶ್ವವೇ ತಲೆಕೆಡಿಸಿಕೊಂಡಿದೆ. ಭಾರತಕ್ಕೂ ಇದು ದೊಡ್ಡ ಸವಾಲಾಗಿದೆ ಎಂದು ತಿಳಿಸಿದ್ದಾರೆ.

 ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin