ಐಎಸ್ ಕರಪತ್ರ ವಿತರಣೆ : ಗೋವಾದಲ್ಲಿ ಕಾಸರಗೋಡಿನ ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ISIS-02

ಪಣಜಿ, ಜ.3-ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆಗೆ ಬೆಂಬಲ ಸೂಚಿಸುವ ಕನ್ನಡದ ಕರಪತ್ರಗಳನ್ನು ಹಂಚುತ್ತಿದ್ದ ಕೇರಳ-ಕರ್ನಾಟಕ ಗಡಿ ಜಿಲ್ಲೆ ಕಾಸರಗೋಡುವಿನ ಇಬ್ಬರನ್ನು ಪೊಲೀಸರು ಗೋವಾ ರಾಜಧಾನಿ ಪಣಜಿಯಲ್ಲಿ ಬಂಧಿಸಿದ್ದಾರೆ. ಬಂಧಿತರನ್ನು ಯು. ಇಲಿಯಾಸ್ (34) ಮತ್ತು ಅಬ್ದುಲ್ ನಸೀರ್ (24) ಎಂದು ಗುರುತಿಸಲಾಗಿದೆ.
ಮಂಗಳೂರಿನಲ್ಲಿ ಜ.9 ರಿಂದ 16ರವರೆಗೆ ನಡೆಯಲಿರುವ ಸಲಾಫಿ ಮುಸ್ಲಿಮರ ಸಮಾವೇಶಕ್ಕಾಗಿ ಪ್ರಚಾರ ಮಾಡುವ ಉದ್ದೇಶದಿಂದ ಇವರು ಪಣಜಿಯ ದೋನಾ ಪೌಲಾ ಪ್ರದೇಶದಲ್ಲಿ ಕರಪತ್ರಗಳನ್ನು ಹಂಚುತ್ತಿದ್ದರು.

ಐಎಸ್ ಲಾಂಛನ ಮತ್ತು ಐಎಸ್‍ಐಎಸ್ ಶೈತಾನ್ ಎಂಬ ಶೀರ್ಷಿಕೆಯ ಕನ್ನಡ ಭಾಷೆಯ ಕರಪತ್ರಗಳನ್ನು ಹಂಚಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಮೇರೆಗೆ ಪೊಲೀಸರು ಇವರನ್ನು ಸೆರೆ ಹಿಡಿದರು.  ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಜಾಲದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin