ಐಎಸ್ ಭಯೋತ್ಪಾದಕರಿಂದ ರಷ್ಯಾ ಅಧಿಕಾರಿಯ ಶಿರಚ್ಛೇದ

ಈ ಸುದ್ದಿಯನ್ನು ಶೇರ್ ಮಾಡಿ

ISIS-Rassia-01

ಮಾಸ್ಕೋ, ಮೇ 10-ಹಿಂಸಾಚಾರ ಪೀಡಿತ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಬಂಡುಕೋರರ ಕ್ರೌರ್ಯ ಮುಂದುವರಿದಿದೆ. ರಷ್ಯಾದ ಅಪಹೃತ ಗುಪ್ತಚರ ಅಧಿಕಾರಿಯೊಬ್ಬರನ್ನು ಭಯೋತ್ಪಾದಕರು ಶಿರಚ್ಛೇದನ ಮಾಡಿರುವ ಭೀಭತ್ಸ ಕೃತ್ಯದ ದೃಶ್ಯಗಳನ್ನು ಐಎಸ್ ಬಿಡುಗಡೆಗೊಳಿಸಿದೆ. ಈ ದೃಶ್ಯವನ್ನು ಅಮೆರಿಕ ಮೂಲದ ಸೈಟ್ ಹೆಸರಿನ ವೆಬ್‍ಸೈಟ್ ಬಿತ್ತರಿಸಿದೆ.
ಆದರೆ, ಇದನ್ನು ತಳ್ಳಿ ಹಾಕಿರುವ ರಷ್ಯಾ ರಕ್ಷಣಾ ಸಚಿವಾಲಯ, ಸಿರಿಯಾದಲ್ಲಿ ತನ್ನ ಯಾವುದೇ ಸೇನಾಧಿಕಾರಿಯನ್ನು ಇಸ್ಲಾಮಿಕ್ ಸ್ಟೇಟ್ ಬಂಡುಕೋರರು ಅಪಹರಿಸಿಲ್ಲ ಮತ್ತು ಕೊಂದಿಲ್ಲ ಎಂದು ಹೇಳಿದೆ. ಹನ್ನೆರಡು ನಿಮಿಷಗಳ ರಷ್ಯಾ ಭಾಷೆಯ ವೀಡಿಯೋದಲ್ಲಿ, ಕಪ್ಪು ಜಂಪ್ ಸೂಟ್ ಧರಿಸಿದ್ದ ವ್ಯಕ್ತಿಯನ್ನು ಮರುಭೂಮಿ ಪ್ರದೇಶದಲ್ಲಿ ಹತ್ಯೆ ಮಾಡಿದ ದೃಶ್ಯಗಳಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin