ಐಟಿಬಿಟಿ ಯುವಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಕರೆ

ಈ ಸುದ್ದಿಯನ್ನು ಶೇರ್ ಮಾಡಿ

itbt

ಕೋಲಾರ,ಸೆ.26- ಐಟಿಬಿಟಿ ಯುವಕರು ವೀಕ್ ಎಂಡ್ ಎಂದು ವಿವಿಧ ಬಗೆಯ ಮೋಜು ಮಸ್ತಿ ಮಾಡದೆ ಟ್ರಸ್ಟ್ ಹೆಸರಿನಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಮೆಚ್ಚುವಂತಹುದು ಎಂದು ಅರಾಬಿ ಕೊತ್ತನೂರು ಮುಖ್ಯೋಪಾಧ್ಯಾಯ ಪ್ರದೀಪ್‍ಕುಮಾರ್ ಪ್ರಶಂಸಿಸಿದರು. ತಾಲ್ಲೂಕಿನ ಚಿಕ್ಕ ಅಯ್ಯೂರು ಗ್ರಾಮದ ಗುರುಕುಲ ಬಡಬಕ್ಕಳ ಉಚಿತ ಸೇವಾ ಟ್ರಸ್ಟ್ ಮತ್ತು ಬೆಂಗಳೂರಿನ ಗ್ರಾಮ ಪರಿವರ್ತನಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಗುರುಕುಲ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂತಹ ಕಾರ್ಯಕ್ರಮಗಳು ವಿದ್ಯಾವಂತ ಯುವಕರಿಂದ ನಡೆದರೆ ಮಾದರಿಯಾಗುತ್ತದೆ. ವಿದ್ಯಾವಂತರು ಸರ್ಕಾರಿ ಶಾಲೆಗಳಿಗೆ ಬಂದು ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೂ ವಿವಿಧ ಮನೋವಿಕಾಸದ ಬಗ್ಗೆ ತಿಳುವಳಿಕೆ ನೀಡಿದರೆ ಉಪಯುಕ್ತವಾಗುತ್ತದೆ ಎಂದರು. ಶಾಲೆಗೆ ಬನ್ನಿ ಶನಿವಾರ ಕಲಿಯಲು ನೀಡಿ ಸಹಕಾರ’ ಎಂಬ ಘೋಷಣೆ ಕೂಗಿ ಐಟಿಬಿಟಿ ಯುವಕರನ್ನು ಶಾಲೆಗೆ ಆಹ್ವಾನಿಸಿದರು. ಬೆಂಗಳೂರಿನ ಗ್ರಾಮ ಪರಿವರ್ತನಾ ಟ್ರಸ್ಟ್ ಭರತ್‍ಕುಮಾರ್ ಮಾತನಾಡಿ, ನಾವು ಮಾಡುವ ಕಾರ್ಯಗಳು ಪ್ರೀತಿಯಿಂದ ಮಾಡಿದರೆ ಎಲ್ಲಾ ಕಾರ್ಯಗಳು ಗುರಿ ಮುಟ್ಟುತ್ತವೆ ಎಂದು ಹೇಳಿದರು. ಚಿಕ್ಕ ಅಯ್ಯೂರು ಗ್ರಾಮದ ರವೀಂದ್ರನಾಥ್ ಮಾತನಾಡಿ, ಸಮಾಜ ಸೇವೆ ಹೆಸರಿನಲ್ಲಿ ಎಲ್ಲವನ್ನು ಕೊಡಬಹುದು. ಆದರೆ ವಿದ್ಯಾಶಕ್ತಿ ಕೊಡುವುದು ಅತೀ ಮುಖ್ಯವಾಗಿದ್ದು ಇದರಿಂದ ಬಡವಮಕ್ಕಳ ಏಳಿಗೆಯಾಗುತ್ತದೆ ಎಂದರು.ಗುರುಕುಲ ಟ್ರಸ್ಟ್‍ನ ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿದರ್ಠು. ಪತ್ರಕರ್ತ ವಾಸುದೇವ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin