ಐಟಿ ಇಲಾಖೆಯಿಂದ ಆಪರೇಷನ್ ಕ್ಲೀನ್ ಮನಿ-2 ಕಾರ್ಯಾಚರಣೆ : 60,000 ಜನರ ವಿರುದ್ಧ ತನಿಖೆ

ಈ ಸುದ್ದಿಯನ್ನು ಶೇರ್ ಮಾಡಿ

Income-Tax

ನವದೆಹಲಿ, ಏ.14- ನೋಟು ಅಮಾನ್ಯಗೊಂಡ ನಂತರ ಕ್ರೋಢೀಕರಣಗೊಂಡಿರುವ ಕಾಳಧನದ ಪತ್ತೆಗಾಗಿ ಇಂದು ಎರಡನೇ ಹಂತದ ಆಪರೇಷನ್ ಕ್ಲೀನ್ ಮನಿ ಕಾರ್ಯಾಚರಣೆ ಆರಂಭಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 60,000ಕ್ಕೂ ಹೆಚ್ಚು ಜನರನ್ನು ತನಿಖೆಗೆ ಒಳಪಡಿಸಲಿದೆ. ಇದರೊಂದಿಗೆ ಭಾರೀ ಪ್ರಮಾಣದ ಗೌಪ್ಯ ಆದಾಯದ ಅಕ್ರಮಗಳು ಬಹಿರಂಗಗೊಳ್ಳಲಿದೆ.  ಕೇಂದ್ರ ಸರ್ಕಾರವು ಕಳೆದ ವರ್ಷ ನ.9ರಂದು 500 ರೂ. ಮತ್ತು 1,000 ರೂ.ಗಳ ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ ಬಳಿಕ ಈ ವರ್ಷದ ಫೆಬ್ರವರಿ 28ರವರೆಗೆ 9,334 ಕೋಟಿ ರೂ.ಗಳ ಬಹಿರಂಗಗೊಳ್ಳದ ಅಕ್ರಮ ವರಮಾನವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇಲಾಖೆಯ ನೀತಿ ರೂಪಿಸುವ ಅಂಗಸಂಸ್ಥೆಯಾದ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಈ ಬಗ್ಗೆ ಮಾಹಿತಿ ನೀಡಿದೆ.

ನೋಟು ಅಮಾನೀಕರಣದ ವೇಳೆ ಅತ್ಯಧಿಕ ನಗದು ವಹಿವಾಟು ನಡೆಸಿರುವ ದೂರುಗಳ ಹಿನ್ನೆಲೆಯಲ್ಲಿ 1,300 ದೊಡ್ಡ ಕುಳಗಳೂ ಸೇರಿದಂತೆ 60,000ಕ್ಕೂ ಹೆಚ್ಚು ಜನರನ್ನು ವಿಚಾರಣೆಗಾಗಿ ಗುರುತಿಸಲಾಗಿದೆ. ಅವರನ್ನು ಕೂಲಂಕಷ ವಿಚಾರಣೆಗೆ ಒಳಪಡಿಸುವುದಾಗಿ ಅವರು ಸಿಬಿಡಿಟಿ ಅಧಿಕಾರಿಗಳು ಹೇಳಿದ್ದಾರೆ.
ಅತ್ಯಧಿಕ ಮೌಲ್ಯದ ಆಸ್ತಿ ಖರೀದಿಸಿರುವ 6,000ಕ್ಕೂ ಹೆಚ್ಚು ವ್ಯವಹಾರಗಳು ನಡೆದಿವೆ. ಅಲ್ಲದೇ, ದೊಡ್ಡ ಮೊತ್ತದ ಹಣ ಪಾವತಿಸಿರುವ 6,600 ಪ್ರಕರಣಗಳಿವೆ. ಇವುಗಳ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು (ಆಪರೇಷನ್ ಕ್ಲೀನ್ ಮನಿ-2 ಕಾರ್ಯಾಚರಣೆ ಅಡಿ) ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಕಟ್ಟುನಿಟ್ಟಿನ ಸೂಚನೆ ನಡುವೆಯೂ ಗೋಪ್ಯ ಹಣವನ್ನು ಬಹಿರಂಗಗೊಳಿಸದಿರುವ ಮತ್ತು ನಿರ್ದೇಶನಕ್ಕೆ ಪ್ರತ್ಯುತ್ತರ ನೀಡದಿರುವ ಎಲ್ಲ ಪ್ರಕರಣಗಳನ್ನೂ ಕೂಡ ಕೂಲಂಕಷ ತನಿಖೆಗೆ ಒಳಪಡಿಸಲಾಗುವುದು.

ಈ ವರ್ಷ ಜನವರಿ 31ರಂದು ಆರಂಭಿಸಲಾದ ಆಪರೇಷನ್ ಕ್ಲೀನ್ ಮನಿ ಮೊದಲ ಹಂತದಲ್ಲಿ 17.92 ಲಕ್ಷ ಜನರಿಗೆ ಇಲಾಖೆಯು ಆನ್‍ಲೈನ್ ವಿಚಾರಣೆಗಳನ್ನು ನಡೆಸಿ ತನಿಖೆಗೆ ಒಳಪಡಿಸಲಾಗಿದೆ. 9.46 ಲಕ್ಷ ಜನರು ಈ ಸಂಬಂಧ ಇಲಾಖೆಗೆ ಪ್ರತ್ಯುತ್ತರ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin