ಐಟಿ ದಾಳಿಯಿಂದ ಡಿಕೆಶಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ : ಶಾಸಕ ಸುರೇಶ್‍ಬಾಬು

ಈ ಸುದ್ದಿಯನ್ನು ಶೇರ್ ಮಾಡಿ

Suresh-Babu--02

ಬಳ್ಳಾರಿ, ಫೆ.6-ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಕಂಪ್ಲಿ ಶಾಸಕ ಸುರೇಶ್‍ಬಾಬು ಟೀಕಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಐಟಿ ದಾಳಿ ನಂತರ ಡಿ.ಕೆ.ಶಿವಕುಮಾರ್ ಸಂಪೂರ್ಣ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಅದಕ್ಕೆ ನಾನು ಬೇರೆ ಪಕ್ಷ ಸೇರುತ್ತಿರುವುದಾಗಿ ಪುಕಾರು ಹಬ್ಬಿಸುತ್ತಿದ್ದಾರೆ ಎಂದು ಗುಡುಗಿದರು. ನನ್ನ ರಾಜಕೀಯ ಬೆಳವಣಿಗೆ ಪ್ರಾರಂಭವಾಗಿದ್ದು ಬಿಜೆಪಿಯಲ್ಲೇ. ನಾನು ನನ್ನ ಮಾತೃ ಪಕ್ಷಕ್ಕೆ ಎಂದಿಗೂ ದ್ರೋಹ ಬಗೆಯುವುದಿಲ್ಲ. ನನ್ನ ಬಗ್ಗೆ ಯಾರೂ ಏನೇ ಹೇಳಿದರೂ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ನಂಬುವುದಿಲ್ಲ ಎಂದು ತಿಳಿಸಿದರು.

ಗಾಲಿಜನಾರ್ಧನರೆಡ್ಡಿ ಹಾಗೂ ಶ್ರೀರಾಮುಲು ನನ್ನ ಎರಡು ಕಣ್ಣುಗಳು. ನನ್ನ ಉಸಿರು ಇರುವತನಕ ಬಿಜೆಪಿಯಲ್ಲೇ ಇರುತ್ತೇನೆ. ಇನ್ನಾದರೂ ನನ್ನ ಬಗ್ಗೆ ಪುಕಾರು ಹಬ್ಬಿಸುವುದನ್ನು ನಿಲ್ಲಿಸಲಿ. ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡಬಾರದು ಎಂದು ಆಗ್ರಹಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin