ಐಟಿ ದಾಳಿವೇಳೆ ಸಿಕ್ಕಿರುವುದು 41 ಲಕ್ಷ ಅಲ್ಲ,ಕೇವಲ 41 ಸಾವಿರ ರೂ. ಸಾವಿರ ಮಾತ್ರ
ಬೆಂಗಳೂರು, ಜ.25-ತಮ್ಮ ಮನೆ ಮೇಲೆ ನಡೆದಿರುವ ಐಟಿ ಅಧಿಕಾರಿಗಳ ದಾಳಿಯಲ್ಲಿ ದೊರೆತಿರುವುದು ಕೇವಲ 41 ಸಾವಿರ ರೂ. ಮಾತ್ರ 41 ಲಕ್ಷ ಅಲ್ಲ ಎಂದು ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿ ಹೊಳಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ 16 ಮನೆಗಳ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ಇಲಾಖೆ ಮೇಲೆ ತಮಗೆ ವಿಶ್ವಾಸವಿದೆ. ಆದರೂ ಇಲ್ಲದ ಆಸ್ತಿ ವಿಚಾರದ ಬಗ್ಗೆ ಏಕೆ ಪ್ರಚಾರವಾಗುತ್ತಿದೆಯೋ ಗೊತ್ತಿಲ್ಲ ಎಂದು ಹೇಳಿದರು.
ತಾವು ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿದ್ದು, ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಈಗಾಗಲೇ ವರದಿ ಆಗಿರುವ ಪ್ರಮಾಣದಲ್ಲಿ ನಗದಾಗಲಿ, ಚಿನ್ನವಾಗಲಿ ಇಲ್ಲ. ಒಂದು ವೇಳೆ 2 ಸಾವಿರ ಮುಖಬೆಲೆಯ 41 ಲಕ್ಷ ರೂ. ಹಣ ದೊರೆತಿರುವುದು ನಿಜವಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ನಮ್ಮ ಮನೆಯಲ್ಲಿ ಕನಿಷ್ಠ 5 ಲಕ್ಷ ರೂ. ಸಿಕ್ಕಿದ್ದರೂ ರಾಜೀನಾಮೆ ನೀಡುವುದಾಗಿ ಹೇಳಿದರು. ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜೀನಾಮೆ ಬಯಸಿದರೆ ರಾಜೀನಾಮೆ ನೀಡಲು ಸಿದ್ಧ. ಆದರೆ ಈವರೆಗೆ ರಾಜೀನಾಮೆ ಕೇಳಿಲ್ಲ. ಕೇಳುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ವರದಿ ಆಗಿರುವಂತೆ ಅಷ್ಟೊಂದು ಅಕ್ರಮ ಹಣ ನನ್ನ ಬಳಿ ಪತ್ತೆಯಾಗಿಲ್ಲ. ಐಟಿ ಅಧಿಕಾರಿಗಳು ಅಂಥ ಮಾಹಿತಿ ನೀಡಿದ್ದರೆ ತಪ್ಪು ಎಂದು ಹೇಳಿದರು. ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವೆ ಅಸಮಾಧಾನ ಇರುವಂತೆ ಎಲ್ಲ ಪಕ್ಷಗಳಲ್ಲೂ ಇದ್ದೇ ಇರುತ್ತದೆ. ಅದೇ ರೀತಿ ನಮ್ಮ ಪಕ್ಷದಲ್ಲೂ ಅಂಥ ಪಿತೂರಿ ನಡೆದಿರಬಹುದು ಎಂದು ಹೇಳಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS