ಐಟಿ ವಲಯದಲ್ಲೂ ಕಾರ್ಮಿಕ ಸಂಘಟನೆ ಬೇಡಿಕೆ ಬಂದರೆ ಪರಿಶೀಲನೆ : ಪ್ರಿಯಾಂಕ್ ಖರ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

Priyank-Kharghe

ಬೆಂಗಳೂರು, ಮೇ 1-ಮಾಹಿತಿ ತಂತ್ರಜ್ಞಾನ ವಲಯದಲ್ಲೂ ಕಾರ್ಮಿಕರ ಸಂಘಟನೆಗಳ ಸ್ಥಾಪನೆಗಾಗಿ ಯಾವುದೇ ಬೇಡಿಕೆ ಬಂದರೆ ಅದನ್ನು ಪರಿಶೀಲಿಸುವುದಾಗಿ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಐಟಿ ಕ್ಷೇತ್ರದಲ್ಲೂ ಕಾರ್ಮಿಕ ಒಕ್ಕೂಟಗಳ ಅಗತ್ಯವಿದೆ ಎಂಬ ಬೇಡಿಕೆ ಬಗ್ಗೆ ಸರ್ಕಾರದ ಗಮನಕ್ಕೆ ತಂದರೆ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಬೆಂಗಳೂರಿನಲ್ಲಿ ಮೇ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.   ಇದು ಕಾರ್ಮಿಕ ಸಚಿವರಿಗೆ ಸಂಬಂಧಪಟ್ಟ ವಿಷಯವಾದರೂ, ಐಟಿ ಉದ್ಯಮಕ್ಕೆ ನಾನೊಬ್ಬ ಅಭಿರಕ್ಷಕನಾಗಿದ್ದೇನೆ. ಹೀಗಾಗಿ, ಈ ವಲಯದಲ್ಲೂ ಕಾರ್ಮಿಕ ಸಂಘಟನೆಗಳ ಅಗತ್ಯ ಇದೆ ಎಂಬ ಬಗ್ಗೆ ಬೃಹತ್ ಐಟಿ ಸಂಸ್ಥೆಗಳ ಪ್ರತಿನಿಧಿಗಳು ಬೇಡಿಕೆ ಮುಂದಿಟ್ಟರೆ ಅದನ್ನು ನಾನು ಪರಿಗಣಿಸಲು ಪರಿಶೀಲನೆ ನಡೆಸಬಹುದಾಗಿದೆ ಎಂದು ಅವರು ಹೇಳಿದರು.ಕಾರ್ಮಿಕರೂ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಉತ್ತಮ ಕಾರ್ಯಗಳನ್ನು ಅನುಷ್ಠಾನಗೊಳಿಸಲು ನಾವು ಸದಾ ಸಿದ್ದರಿದ್ದೇವೆ. ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೂ ಮುನ್ನ ಸಂಬಂಧಪಟ್ಟವರೆಲ್ಲರೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಪ್ರಿಯಾಂಕ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin