ಐಟಿ ಸುಳಿಯಲ್ಲಿ ಸಿಲುಕಿರುವ ಡಿಕೆಶಿ ಮೇಲೆ ಇಡಿ ಪ್ರಹಾರ..!?

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ನವದೆಹಲಿ/ಬೆಂಗಳೂರು- ಆದಾಯ ತೆರಿಗೆ ಅಧಿಕಾರಿಗಳ ಖೆಡ್ಡಕ್ಕೆ ಸಿಲುಕಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‍ಗೆ ದಿನದಿಂದ ದಿನಕ್ಕೆ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದ, ಇದೀಗ ಜಾರಿ ನಿದೇರ್ಶನಾಲಯ (ಇಡಿ)ತನಿಖೆ ನಡೆಸಲು ಮುಂದಾಗಿದೆ. ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನಡೆಸುತ್ತಿರುವ ದಾಳಿಯಲ್ಲಿ ಶಿವಕುಮಾರ್ ಅವರ ಸಹೋದರ ಸಂಬಂಧಿ ಕರ ಮನೆ , ಕಚೇರಿಗಳಲ್ಲಿ ಭಾರೀ ಪ್ರಮಾಣದ ನಗದು.ಆಸ್ತೀ, ಬೇನಾಮಿ ಹೆಸರಿನಲ್ಲಿ ಹಣ ಹೂಡಿಕೆ, ನಕಲಿ ಕಂಪನಿಗಳನ್ನು ಸೃಷ್ಟಿಸಿರುವುದು, ಇಂಧನ ಇಲಾಖೆಯಲ್ಲಿ ಭ್ರಷ್ಟಚಾರ ನಡೆಸಿರುವುದು , ನಿಷೇಧಗೊಂಡಿರುವ ಹಖಳೆ ನೋಟುಗಳ ಸಂಗ್ರಹಣೆ ಮಾಡಿರುವುದು ಬೆಳಕಿಗೆ ಬಂದಿದೆ.

ಯಾವುದೇ ವ್ಯಕ್ತಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳೀ ನಡೆಸಿದ ವೇಳೆ 30 ಲಕ್ಷಕ್ಕಿಂತ ಹೆಚ್ಚಿನ ಹಣ ಕಂಡ ಬಂದರೆ ಐಟಿ ನಿಯಮದ ಪ್ರಕಾರ ಈ ಪ್ರಕರಣವನ್ನು ಜಾರಿ ನಿದೇರ್ಶನಾಲಯ ವಿಚಾರಣೆ ನಡೆಸುತ್ತಿದೆ.  ಈ ಹಿಂದೆ ಆಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೈಎಸ್‍ಆರ್ ರಾಜಶೇಖರ ರೆಡ್ಡಿ ಪುತ್ರ ಹಾಗೂ ಹಾಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗಮೋಹನ್‍ರೆಡ್ಡಿ ಮೇಲೆ ಸಿಬಿಐ ದಾಳಿ ನಡೆಸಿದಾಗ ಆಪಾರ ಪ್ರಮಾಣದ ಆಸ್ತೀ, ನಗದು ಹಾಗೂ ಬೇನಾಮಿ ಆಸ್ತೀಯನ್ನು ಪತ್ತೇ ಮಾಡಲಾಗಿತ್ತು.
ಯಾವುದೇ ವ್ಯಕ್ತಿ ಕಾನೂನುಬಾಹಿರವಾಗಿ ಆದಾಯಕ್ಕೀಂತ ಹೆಚ್ಚಿನ ವಾಹಿವಾಟು ನಡೆಸುವುದಾಗಲೀ ಇಲ್ಲವೇ ವಿದೇಶದಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಅದು ಶಿಕ್ಷರ್ಹ ಆಪಾರಧವಾಗುತ್ತದೆ.

ಜೊತೆಗೆ ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿ ಮಾಡಿರುವ ನೂತನ ನಿಯಮದಂತೆ ಬೇನಾಮಿ ಆಸ್ತೀ ಹೊಂದಿರುವುದು ದೃಢವಾದರೆ ಅವರ ಮೇಲೆ 7 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಬುಧವಾರದಿಂದ ಇಂದಿನವರೆಗೂ ಐಟಿ ಅಧಿಕಾರಿಗಳು ನಡೆಸಿರುವ ದಾಳಿಯ ವೇಳೆ ಒಟ್ಟು 11 ಕೋಟಿಗೂ ಅಧಿಕ ನಗದು, ಆಪಾರ ಪ್ರಮಾಣದ ವಜ್ರಭರಣಗಳು, ಕೋಟ್ಯಾಂತರ ರೂ ಬೆಲೆ ಬಾಳುವ ಫ್ಲಾಟ್‍ಗಳು , ಸಹೋದರ , ಸಹೋದರಿ ,ಮಾವ ಆಪ್ತರು ಸೇರಿದಂತೆ ಶಿವಕುಮಾರ್ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹಣೆ ಮಾಡಿದ್ದು ದಾಳಿಯ ವೇಳೆ ಪತ್ತೇಯಾಗಿತ್ತು.

ಇಡಿಗೆ ಮಾಹಿತಿ : 

ಕಳೆದ ಮೂರು ದಿನಗಳಿಂದ ಬೆಂಗಳೂರು , ನವದೆಹಲಿ ಸೇರಿದಂತೆ ದೇಶದ ಒಟ್ಟು 60 ಕಡೆ ದಾಳಿ ನಡೆಸಿದ್ದಾರೆ. ಇತಿಹಾಸದಲ್ಲೇ ಇದು ದಾಖಲೆಯ ದಾಳಿಯಾಗಿದೆ. ಐಟಿ ಅಧಿಕಾರಿಗಳು ಇಡಿಗೆ ಇಂಚಿಂಚೂ ಮಾಹಿತಿ ನೀಡಿದ್ದು, ಶಿವಕುಮಾರ್ ಪ್ರಕರಣವನ್ನು ಅವರಿಗೆ ವರ್ಗಾಯಿಸುವ ಸಾಧ್ಯತೆಯಿದೆ.
ಒಂದು ವೇಳೆ ಇಡಿ ಎಂಟ್ರಿ ಕೊಟ್ಟರೆ ಶಿವಕುಮಾರ್‍ಗೆ ಇನ್ನಷ್ಟು ಕಾನೂನಿನ ಸಂಕಷ್ಟ ಎದುರಾಗಲಿದೆ. ಮೊದಲು ಅವರ ಬ್ಯಾಂಕ್ ಖಾತೆಗಳನ್ನು ಮುಟ್ಟು ಗೋಲು ಹಾಕಿಕೊಂಡು ಬಳಿಕ ಯಾವುದೇ ರೀತಿಯ ವಾಹಿವಾಟು ನಡೆಸದಂತೆ ನಿರ್ಭಂಧ ಹಾಕಲಾಗುತ್ತದೆ. ಕಾನೂನು ಬಾಹಿರವಾಗಿ ವಹಿವಾಟು ನಡೆಸಿರುವುದು ಕಂಡುಬಂದರೆ ಶಿವಕುಮಾರ್ ಸೇರಿದಂತೆ ಇಡೀ ಕುಟುಂಬ ಸದಸ್ಯರ ಆಸ್ತೀಯನ್ನು ಜಪ್ತೀ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಬಂಧನ ಸಾಧ್ಯತೆ? : 

ಶಿವಕುಮಾರ್ ಹೇಳಿ ಕೇಳಿ ಪ್ರಭಾವಿ ರಾಜಕಾರಣಿ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅವರಿಗೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಸಾಕಷ್ಟು ಪ್ರಭಾವಿಗಳ ಸಂಪರ್ಕವನ್ನು ಹೊಂದಿದ್ದಾರೆ. ಒಂದು ವೇಳೆ ತಮಗಿರುವ ಪ್ರಭಾವ ಬಳಸಿಕೊಂಡು ಸಾಕ್ಷದಾರಗಳನ್ನು ನಾಶಪಡಿಸಬಹುದೆಂಬ ಅನುಮಾನ ಇಡಿ ಅಧಿಕಾರಿಗಳಿಗೆ ವ್ಯಕ್ತವಾದರೆ ಕೂಡಲೇ ಶಿವಕುಮಾರ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸುವ ಸಾಧ್ಯತೆಯಿದೆ.
ಇನ್ನು ಇಡಿ ತಂಡ ಯಾವುದೇ ವೇಳೆ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ. ಒಂದು ಮೂಲದ ಪ್ರಕಾರ ಈಗಾಗಲೇ ಒಂದು ತಂಡ ಬೆಂಗಳೂರಿಗೆ ಆಗಮಿಸಿದ್ದು, ಪ್ರತಿಯೊಂದು ಚಲನವಲಗಳನ್ನು ಅವಲೋಕಿಸುತ್ತಿದ್ದು ಐಟಿಯಿಂದ ಸೂಚನೆ ಬರುತ್ತಿದ್ದಂತೆ ತನ್ನ ಕಾರ್ಯಚಾರಣೆ ಪ್ರಾರಂಭಿಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin