ಐಪಿಎಲ್‍ನ 10ನೆ ಆವೃತ್ತಿ : ಫೆ. 20 ರಂದು ಹರಾಜು, ಬಿಕರಿಗೆ 750 ಆಟಗಾರರ ಪಟ್ಟಿ ಸಿದ್ಧ

ಈ ಸುದ್ದಿಯನ್ನು ಶೇರ್ ಮಾಡಿ

IPL-10

ನವದೆಹಲಿ,ಫೆ.5- ಐಪಿಎಲ್‍ನ 10ನೆ ಆವೃತ್ತಿಗಾಗಿ ಫೆ. 3 ರಂದು ನಡೆಯಬೇಕಾಗಿದ್ದ ಪ್ರಕ್ರಿಯೆಯು ಫೆ.20 ರಂದು ನಡೆಯಲಿದೆ ಎಂದು ಮೂಲಗಳು ದೃಢ ಪಡಿಸಿವೆ.  ಈ ಮುನ್ನ ಫೆ. 20 ರಿಂದ 25ರವರೆಗೆ ಈ ಪ್ರಕ್ರಿಯೆಯನ್ನು ನಡೆಸಲು ಉದ್ದೇಶಿಸಲಾಗಿತ್ತಾದರೂ ನಿನ್ನೆ ನಡೆದ ಸಭೆಯಲ್ಲಿ ಫೆ. 20 ರಂದೇ ಬೆಡ್ಡಿಂಗ್ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.   ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಐಪಿಎಲ್‍ನ ವಿವಾದದಲ್ಲಿ ಸಿಲುಕಿದ ನಂತರ ಆ ತಂಡದ ಆಟಗಾರರು ಬೇರೆ ಬೇರೆ ತಂಡಗಳಿಗೆ ಬಿಕರಿಯಾಗಿದ್ದಾರೆ ಅದು ಕೂಡ ಈ ಆವೃತ್ತಿಯ ಬಿಡ್ಡಿಂಗ್ ನಂತರ ಕೊನೆಗೊಳ್ಳಲಿರುವುದರಿಂದ ಫೆ. 20 ರಂದು ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಬೆಡ್ಡಿಂಗ್‍ನತ್ತ ಈಗ ಎಲ್ಲರ ಚಿತ್ತ ಹರಿದಿದೆ.

ಈ ಬಾರಿ ಬಿಕರಿಗೆ 750 ಆಟಗಾರರ ಪಟ್ಟಿ ಸಿದ್ಧವಾಗಿದ್ದು ಪ್ರತಿಯೊಂದು ತಂಡವು 143. 33 ಕೋಟಿ ರೂ.ಗಳನ್ನು ವ್ಯಯಿಸುವ ಹಾಗೂ 27 ಆಟಗಾರರನ್ನು ಬಿಕರಿ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಇದರಲ್ಲಿ 9 ಮಂದಿ ವಿದೇಶಿ ಆಟಗಾರರಿಗೆ ಕಡ್ಡಾಯವಾಗಿ ಸ್ಥಾನ ಒದಗಿಸಬೇಕೆಂದು ಬಿಸಿಸಿಐ ತಿಳಿಸಿದೆ. ಗರಿಷ್ಠ 76 ಆಟಗಾರರು, 28 ವಿದೇಶಿ ಆಟಗಾರರು ಈಗಾಗಲೇ ಬಿಕರಿಯಾಗಿದ್ದಾರೆ.

ಪ್ರತಿಯೊಂದು ತಂಡದಲ್ಲೂ ಇರುವ ಆಟಗಾರರ ವಿವರ ಹಾಗೂ ಉಳಿದಿರುವ ಹಣದ ವಿವರ:

ಡೆಲ್ಲಿ ಡೇರ್ ಡೆವಿಲ್ಸ್: ಈ ತಂಡವು ಈಗಾಗಲೇ 42.9 ಕೋಟಿ ರೂ.ಗಳನ್ನು ವ್ಯಯಿಸಿ 17 ಆಟಗಾರರನ್ನು ಖರೀದಿಸಿದೆ. ಇದರಲ್ಲಿ 5 ಮಂದಿ ವಿದೇಶಿ ಆಟಗಾರರಿದ್ದಾರೆ, ಈ ತಂಡದ ಬಳಿ ಇನ್ನು 23.1 ಕೋಟಿ ಉಳಿದಿದ್ದು ಉತ್ಕøಷ್ಟ ಆಟಗಾರರನ್ನು ಖರೀದಿಸುವತ್ತ ಹೆಜ್ಜೆ ಹಾಕಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್:  ಪ್ರೀತಿಜಿಂತಾ ಮಾಲೀಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಬಳಿ 23.13 ಕೋಟಿ ಉಳಿದಿದ್ದು ಈಗಾಗಲೇ ಈ ತಂಡವು 42.65 ಕೋಟಿಗಳನ್ನು ವ್ಯಯಿಸಿ 19 ಆಟಗಾರರನ್ನು ಬಿಕರಿ ಮಾಡಿಕೊಂಡಿದ್ದು ಈ ತಂಡದಲ್ಲೂ ಐವರು ವಿದೇಶಿ ಆಟಗಾರರಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್:  ಎರಡು ಬಾರಿ ಐಪಿಎಲ್ ಚಾಂಪಿಯನ್ಸ್ ಆಗಿರುವ ಶಾರುಖ್‍ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಈಗಾಗಲೇ 14 ಆಟಗಾರರು ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು ಇದಕ್ಕಾಗಿ ಶಾರುಖ್ 46.25 ಕೋಟಿ ರೂ.ಗಳನ್ನು ವ್ಯಯಿಸಿದ್ದು ಈಗ ಅವರ ಬಳಿ 19.75 ಕೋಟಿಗಳು ಉಳಿದಿದ್ದು ಎಚ್ಚರಿಕೆಯಿಂದ ಆಟಗಾರರನ್ನು ಬಿಕರಿ ಮಾಡಿಕೊಳ್ಳುವ ಅವಶ್ಯಕತೆ ಇದೆ.

ಮುಂಬೈ ಇಂಡಿಯನ್ಸ್:   2013 ಹಾಗೂ 2015ರ ಆವೃತ್ತಿಯ ಚಾಂಪಿಯನ್ಸ್ ಆಗಿರುವ ಅಂಬಾನಿ ಮಾಲೀಕತ್ವದ ಮುಂಬೈಇಂಡಿಯನ್ಸ್ ತಂಡ ಈಗಾಗಲೇ 54.44 ಕೋಟಿಗಳನ್ನು ವ್ಯಯಿಸಿ 20 ಆಟಗಾರರನ್ನು ಬಿಕರಿ ಮಾಡಿಕೊಂಡಿದೆ. ಇನ್ನು ಆ ತಂಡದಲ್ಲಿ 6 ಮಂದಿ ವಿದೇಶಿ ಆಟಗಾರರಿಗೆ ಸ್ಥಾನ ಕಲ್ಪಿಸಲಾಗಿದೆ. ಈಗ ಆ ತಂಡದ ಮಾಲೀಕರ ಬಳಿ 11.55 ಕೋಟಿಗಳು ಉಳಿದಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು:  ವಿರಾಟ್ ಕೊಹ್ಲಿ ನಾಯಕತ್ವದ ಕಳೆದ ಐಪಿಎಲ್‍ನ ರನ್ನರ್‍ಅಪ್ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕರು ಕೂಡ 53.175 ಕೋಟಿ ರೂ.ಗಳನ್ನು ವ್ಯಯಿಸಿ 20 ಆಟಗಾರರನ್ನು ಬಿಕರಿ ಮಾಡಿಕೊಂಡಿದ್ದರೆ ಈ ತಂಡದಲ್ಲಿ ಎಬಿಡಿ, ಗೇಲ್ ಸೇರಿದಂತೆ 8 ಮಂದಿ ವಿದೇಶಿ ಆಟಗಾರರಿದ್ದಾರೆ, ಈಗ ತಂಡದ ಮಾಲೀಕ ಐಪಿಎಲ್ 10ರ ಆವೃತ್ತಿಯ ಬಿಡ್ಡಿಂಗ್‍ನಲ್ಲಿ 12.825 ಕೋಟಿಗಳನ್ನು ವ್ಯಯಿಸಲು ಅವಕಾಶವಿದೆ.

ಸನ್‍ರೈಸರ್ಸ್ ಹೈದ್ರಾಬಾದ್:  ಕಳೆದ ಬಾರಿಯ ಐಪಿಎಲ್ ಚಾಂಪಿಯನ್ ಆಗಿರುವ ಸನ್‍ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರು ಈಗಾಗಲೇ 20.9 ಕೋಟಿ ರೂ.ಗಳನ್ನು ಬಿಡ್ ಮಾಡಿ 17 ಆಟಗಾರರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಿದ್ದರೆ ಇದರಲ್ಲಿ ನಾಯಕ ಡೇವಿಡ್ ವಾರ್ನರ್ ಸೇರಿದಂತೆ 4 ಮಂದಿ ವಿದೇಶಿಗರಿಗೆ ಸ್ಥಾನ ಭದ್ರಪಡಿಸಿದ್ದಾರೆ. ಇನ್ನು ಉಳಿದಿರುವ 20.9 ಕೋಟಿಗಳಲ್ಲಿ ಆಟಗಾರರನ್ನು 10ನೆ ಆವೃತ್ತಿಗೆ ಖರೀದಿಸಬೇಕಾಗಿದೆ.

ರೈಸಿಂಗ್ ಪುಣೆ ಸೂಪರ್ ಜೈಂಟ್ಸ್: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಪುಣೆ ತಂಡ ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿದ್ದರೂ ಕೂಡ ಐಪಿಎಲ್ 10ನೆ ಆವೃತ್ತಿಯಲ್ಲಿ ಬಲಿಷ್ಠ ತಂಡವಾಗಿ ರೂಪುಗೊಳ್ಳುವ ಲಕ್ಷ ತೋರಿದ್ದು ಆ ತಂಡದ ಮಾಲೀಕರು 17 ಆಟಗಾರರನ್ನು ಭದ್ರಪಡಿಸಿದ್ದಾರೆ . ಇದಕ್ಕೆ ಅವರು 48.5 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದು 5 ವಿದೇಶಿ ಆಟಗಾರರಿಗೆ ಸ್ಥಾನ ಕಲ್ಪಿಸಿದ್ದಾರೆ. ಈ ತಂಡ 17.5 ಕೋಟಿ ರೂ.ಗಳನ್ನು ಬೆಡ್ಡಿಂಗಿಡಬಹುದು.

ಗುಜರಾತ್ ಲಯನ್ಸ್:  ಸುರೇಶ್‍ರೈನಾ ಸಾರಥ್ಯದ ಗುಜರಾತ್ ಲಯನ್ಸ್ ತಂಡದಲ್ಲಿ 16 ಆಟಗಾರರಿಗೆ ರೀಗೈನ್ ಆಗಿದ್ದು ಇದರಲ್ಲಿ 6 ವಿದೇಶಿ ಆಟಗಾರರಿದ್ದಾರೆ. ಇದಕ್ಕಾಗಿ ಆ ತಂಡದ ಮಾಲೀಕರು 51.65 ಕೋಟಿ ರೂ.ಗಳನ್ನು ವ್ಯಯಿಸಿದ್ದು ಈಗ ಆ ತಂಡದ ಮಾಲೀಕರ ಬಳಿ 14.35 ಕೋಟಿ ರೂ.ಗಳಿವೆ.  ಒಟ್ಟಾರೆ ಫೆ. 20 ರಂದು ಬೆಂಗಳೂರಿನಲ್ಲಿ ಬೆಳಗ್ಗೆ 9 ಗಂಟೆಗೆ ನಡೆಯುವ ಬೆಡ್ಡಿಂಗ್ ಪ್ರಕ್ರಿಯೆಯಲ್ಲಿ ಹೊಸದಾಗಿ 750 ಆಟಗಾರರು ತಮ್ಮ ಹೆಸರನ್ನು ನೊಂದಾಯಿಸಿರುವುದು ಎಲ್ಲರ ಚಿತ್ತವನ್ನು ಕೆರಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin