ಐಪಿಎಲ್ : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬ್ಲಾಕ್‍ನಲ್ಲಿ ಟಿಕೆಟ್ ಮಾರುತ್ತಿದ್ದ ಮೂವರು ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Chinaswamy-Stadum

ಬೆಂಗಳೂರು, ಏ.15- ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಕ್ಕೆ ಬ್ಲಾಕ್‍ನಲ್ಲಿ ಟಿಕೆಟ್ ಮಾರುತ್ತಿದ್ದ ಮೂವರನ್ನು ಅಭಿಮಾನಿಗಳೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಾಳಿನ ಪಂದ್ಯಕ್ಕೆ ಇಂದು ಟಿಕೆಟ್ ವಿತರಿಸಲಾಗಿದ್ದು, ಬೆಳಗ್ಗಿನಿಂದ ಸಾಲಿನಲ್ಲೇ ನಿಂತು ಟಿಕೆಟ್ ಸಿಗದೆ ನಿರಾಸೆಗೊಂಡಿದ್ದ ಅಭಿಮಾನಿಗಳ ಬಳಿಗೆ ಮೂವರು ಬ್ಲಾಕ್‍ನಲ್ಲಿ ಟಿಕೆಟ್ ಮಾರಲು ಯತ್ನಿಸಿದ್ದಾರೆ. ಎಂಟು ನೂರು ರೂಪಾಯಿಯ ಟಿಕೆಟ್‍ಗಳನ್ನು 3 ಸಾವಿರ ರೂ.ಗೆ ಮಾರಲು ಯತ್ನಿಸುತ್ತಿದ್ದ ಮೂವರನ್ನು ಕ್ರಿಕೆಟ್ ಅಭಿಮಾನಿಗಳೇ ಹಿಡಿದು ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.  ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin