ಐಪಿಎಲ್ ಟಿ20ಗೆ ಆಟಗಾರರ ಹರಾಜಿನಲ್ಲಿ ಯಾರು, ಎಷ್ಟಕ್ಕೆ ಸೇಲ್ ಆದರು..?

ಈ ಸುದ್ದಿಯನ್ನು ಶೇರ್ ಮಾಡಿ

IPL-18--1

ಬೆಂಗಳೂರು, ಜ.27- ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡುವ ಇಂಡಿಯನ್ ಪ್ರೀಮಿ ಯರ್ ಲೀಗ್(ಐಪಿಎಲ್) ಟಿ-20ಗೆ ಆಟಗಾ ರರ ಹರಾಜು ಪ್ರಕ್ರಿಯೆ ಉದ್ಯಾನನಗರಿ ಯಲ್ಲಿ ಇಂದಿನಿಂದ ಆರಂಭವಾಗಿದೆ. ಭಾರತದ ಆರಂಭಿಕ ಬ್ಯಾಟ್ಸ್‍ಮನ್ ಕನ್ನಡಿಗರಾದ ಕೆ.ಎಲ್. ರಾಹುಲ್ ಮತ್ತು ಮನಿಷ್ ಪಾಂಡೆ 11 ಕೋಟಿ ರೂ.ಗಳಿಗೆ ಖರೀದಿಯಾಗಿದ್ದಾರೆ. ಇಂಗ್ಲೆಂಡ್‍ನ ವಿವಾದಿತ ಆಲ್ ರೌಂಡರ್ ಬೆನ್ ಸ್ಟೋಕ್ಸ್ ರಾಜಸ್ತಾನ್ ರಾಯಲ್ಸ್‍ಗೆ 12.50 ಕೋಟಿ. ರೂ.ಗಳಿಗೆ ಬಿಕರಿಯಾಗಿದ್ದಾರೆ.  ಈ ಬಾರಿ ಐಪಿಎಲ್ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ ಆದ್ಯತೆಯ ಮಣೆ ಹಾಕಲಾಗಿದ್ದು, ರಾಹುಲ್ ಹೊರತುಪಡಿಸಿದರೆ ಭಾರತದ ಇತರ ಆಟಗಾರರು ನಿರೀಕ್ಷಿತ ಮೌಲ್ಯಕ್ಕೆ ಮಾರಾಟವಾಗಿಲ್ಲ.

ವೆಸ್ಟ್ ಇಂಡೀಸ್‍ನ ಸ್ಫೋಟಕ ಬ್ಯಾಟ್ಸ್‍ಮನ್ ಕ್ರಿಸ್‍ಗೇಲ್ ಅವರನ್ನು ಈವರೆಗೂ ಯಾರೂ ಖರೀದಿಸಲು ಮುಂದೆ ಬರದಿರುವುದು ಅಚ್ಚರಿ ಮೂಡಿಸಿದೆ. ಇಂಗ್ಲೆಂಡ್‍ನ ಟೆಸ್ಟ್ ನಾಯಕ ಜೋ ರೂಟ್ ಅವರೂ ಸಹ ಮಾರಾಟವಾಗದೇ ಉಳಿದಿದ್ದಾರೆ.  ಎರಡು ದಿನಗಳ ಐಪಿಎಲ್ ಹರಾಜು ಪ್ರಕ್ರಿಯೆಯ ಮೊದಲ ದಿನವಾದ ಇಂದು ಮುಂಚೂಣಿ ಆಟಗಾರರ ಪರವಾಗಿ ಬಿಡ್ಡುಗಳ ಭರಾಟೆ ಇತ್ತು. ಕಳೆದ ಐಪಿಎಲ್‍ನಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ಪರವಾಗಿ ಆಡಿದ್ದ ಸ್ಟೋಕ್ಸ್ 14.5 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದರು. ಆದರೆ ಈ ಬಾರಿ 2 ಕೋಟಿ ರೂ. ಕಡಿಮೆ ಬಿಡ್ಡಿಂಗ್‍ನಲ್ಲಿ ರಾಜಸ್ತಾನ್ ರಾಯಲ್ಸ್ ಖರೀದಿಸಿದೆ.

ಆಸ್ಟ್ರೇಲಿಯಾದ ವೇಗಿ ಮಿಚ್ಚೆಲ್ ಸ್ಟಾರ್ಕ್‍ನನ್ನು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) 9.40 ಕೋಟಿ ರೂ.ಗಳಿಗೆ ಖರೀದಿ ಮಾಡಿದೆ. ಕಿಂಗ್ಸ್ ಇಲವೆನ್ ಪಂಜಾಬ್ (ಕೆ11ಪಿ) ಭಾರತದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರಿಗೆ 7.60 ಕೋಟಿ ರೂ. ತೆತ್ತು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
50 ಲಕ್ಷ ರೂ.ಗಳ ಮೂಲ ಬೆಲೆ ಹೊಂದಿದ್ದ ಭಾರತ ಪ್ರತಿಭಾವಂತ ಬ್ಯಾಟ್ಸ್‍ಮನ್ ಕರುಣ್ ನಾಯರ್‍ಗೆ ಹರಾಜಿನಲ್ಲಿ ಅದೃಷ್ಟ ಖುಲಾಯಿಸಿದೆ. ಅವರು ಕಿಂಗ್ಸ್ ಇಲೆವನ್ ಪಂಜಾಬ್‍ಗೆ 5.60 ಕೋಟಿ ರೂ.ಗಳಿಗೆ ಮಾರಾಟವಾಗಿದ್ದಾರೆ.

ಇಂದಿನ ಬಿಡ್‍ನಲ್ಲಿ ಬಿಕರಿಯಾದ ಮತ್ತೊಬ್ಬ ಪ್ರಮುಖ ಆಟಗಾರನೆಂದರೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‍ವೆಲ್. ಐದು ವರ್ಷಗಳ ಬಳಿಕ ಅವರನ್ನು ತನ್ನ ಪಾಳೆಯಕ್ಕೆ ಸೆಳೆದುಕೊಳ್ಳಲು ಡೆಲ್ಲಿ ಡೇರ್‍ಡೆವಿಲ್ಸ್ 9.40 ಕೋಟಿ ರೂ.ಗಳನ್ನು ತೆತ್ತಿದೆ.  ಡೆಲ್ಲಿ ಡೇರ್‍ಡೆವಿಲ್ಸ್ ಅಗ್ಗದ ಬೆಲೆಗೆ ಅಂದರೆ 2.80 ಕೋಟಿ ರೂ.ಗಳಿಗೆ ತನ್ನ ಸಂಭವನೀಯ ನಾಯಕ ಗೌತಮ್ ಗಂಭೀರ್‍ಗೆ ಗಾಳ ಹಾಕುವಲ್ಲಿ ಸಫಲವಾಗಿದೆ. ಇನ್ನು ಬೌಲರ್ ಹರ್‍ಭಜನ್ ಸಿಂಗ್ ನಿರೀಕ್ಷೆಯಂತೆ ತನ್ನ ಮೂಲ ಬೆಲೆ 2 ಕೋಟಿ ರೂ.ಗಳಿಗೆ ಚೆನ್ನೈ ಸೂಪರ್ ಕಿಂಗ್(ಸಿಎಸ್‍ಕೆ)ಗೆ ಮಾರಾಟಗೊಂಡಿದ್ದಾರೆ.   ಹಾಗೆಯೇ ಹಿರಿಯ ಆಟಗಾರ ಯುವರಾಜ್ ಸಿಂಗ್‍ಗೆ ಕಿಂಗ್ಸ್ ಇಲೆವೆನ್ ಪಂಜಾಬ್ 2 ಕೋಟಿ ನೀಡಿದೆ. ವೆಸ್ಟ್ ಇಂಡೀಸ್ ಡ್ವೆಯ್ನ್ ಬ್ರಾವೋ 6.40 ಕೋಟಿ ರೂ.ಗಳಿಗೆ ಸಿಎಸ್‍ಕೆ ಪಾಲಾಗಿದ್ದಾರೆ.   ವೆಸ್ಟ್ ಇಂಡೀಸ್‍ನ ಮತ್ತೊಬ್ಬ ದಾಂಢಿಗ ಕೀರನ್ ಪೋಲಾರ್ಡ್ ಅವರನ್ನು ಕೊಳ್ಳಲು ಮುಂಬೈ ಇಂಡಿಯನ್ಸ್ 5.40 ಕೋಟಿ ರೂ.ಗಳಿಗೆ ವ್ಯವಹಾರ ಕುದುರಿಸಿದೆ. ಭಾರತದ ಆಕ್ರಮಣಕಾರಿ ಬ್ಯಾಟ್ಸ್‍ಮನ್ ಶಿಖರ್ ಧನ್‍ರನ್ನು ಸನ್‍ರೈಸರ್ಸ್ ಹೈದರಾಬಾದ್ 5.2 ಕೋಟಿ ರೂ. ನೀಡಿ ತನ್ನ ಪಾಳೆಯಕ್ಕೆ ಸೇರಿಸಿಕೊಂಡಿದೆ.

ಮತ್ತೆ ಐಪಿಎಲ್‍ಗೆ ಮರಳಿರುವ ದಕ್ಷಿಣ ಆಫ್ರಿಕಾದ ಫಫ್ ಡು ಫ್ಲೆಸಿಸ್ ಅವರನ್ನು ಸಿಎಸ್‍ಕೆ ಉಳಿಸಿಕೊಂಡಿದ್ದು, ಕೇವಲ 1.60 ಕೋಟಿ ನೀಡಿದ್ದರೆ, ರಾಜಸ್ತಾನ್ ರಾಯಲ್ಸ್ ಭಾರತದ ಪ್ರತಿಭೆ ಅಂಜಿಕ್ಯಾ ರಹಾನೆಯನ್ನು 4 ಕೋಟಿ ರೂ.ಗಳಿಗೆ ಖರೀದಿಸಿದೆ.  ನ್ಯೂಜಿಲೆಂಡ್‍ನ ಕೇನ್ ವಿಲಿಯಮ್ಸ್ ಅವರು 3 ಕೋಟಿ ರೂ.ಗಳಿಗೆ ಸನ್‍ರೈಸರ್ಸ್ ಹೈದರಾಬಾದ್ ಕ್ಯಾಂಪ್‍ಗೆ ಮತ್ತೆ ಜಿಗಿದಿದ್ದಾರೆ.   ಎರಡನೆ ದಿನವಾದ ನಾಳೆಯೂ ಸಹ ಹರಾಜು ಪ್ರಕ್ರಿಯೆ ಮುಂದುವರಿಯಲಿದ್ದು, ಮತ್ತಷ್ಟು ಆಟಗಾರರು ಹರಾಜು ಮೂಲಕ ಖರೀದಿಗೆ ಒಳಗಾಗಲಿದ್ದಾರೆ.

ಯಾರಿಗೆ ಎಷ್ಟು..? : 
ಮನಿಷ್‍ಪಾಂಡೆ 11 ಕೋಟಿ
ಶೇನ್‍ವ್ಯಾಟ್ಸನ್ 4 ಕೋಟಿ
ಗಂಭೀರ್ 2.8 ಕೋಟಿ
ಸ್ಟೋನೀಸ್ 6.2 ಕೋಟಿ
ಕೇದಾರ್‍ಜಾಧವ್ 7.8 ಕೋಟಿ
ಕ್ರಿಸ್‍ವೋಕ್ಸ್ 7.4 ಕೋಟಿ

ಮಾರಾಟವಾಗದವರು : 
ಕ್ರಿಸ್ ಗೇಲ್- ವೆಸ್ಟ್‍ಇಂಡೀಸ್
ಜೋ ರೂಟ್ – ಇಂಗ್ಲೆಂಡ್
ಗುಪ್ಟಿಲ್- ನ್ಯೂಜಿಲ್ಯಾಂಡ್
ಜೇಮ್ಸ್‍ಫ್ಲೋಕ್ನರ್ – ಆಸ್ಟ್ರೇಲಿಯಾ

Facebook Comments

Sri Raghav

Admin