ಐಪಿಎಲ್ ಹರಾಜಿನಲ್ಲಿ ಕನ್ನಡಿಗರ ಕಮಾಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ಬೆಂಗಳೂರು, ಜ.28- ಐಪಿಎಲ್11ರ ರಂಗನ್ನು ಹೆಚ್ಚಿಸಲು ಫ್ರಾಂಚೈಸಿಗಳು ಈ ಬಾರಿ ತಂಡಗಳನ್ನು ಬಲಿಷ್ಠಗೊಳಿಸಿಕೊಳ್ಳಲು ಇಚ್ಚಿಸಿದ್ದು ಹರಾಜಿನ ಎರಡನೇ ದಿನವೂ ಚಿತ್ತ ಹರಿಸಿದ್ದು ಬೌಲರ್‍ಗಳಿಗೆ ಕೋಟಿ ಕೋಟಿಗಳ ಆಫರ್ ನೀಡಿದ್ದಾರೆ. ಇಂದು ಬೌಲರ್‍ಗಳ ಜಮಾನ ಶುರುವಾಗಿದ್ದು ಪೋರ್‍ಬಂದರ್‍ನ ಜಯದೇವ್ ಉನ್ಕಟ್ ಮೂಲ ಬೆಲೆ 1.5 ಕೋಟಿಯಿಂದ ಹರಾಜು ಪ್ರಕ್ರಿಯೆ ಪ್ರಾರಂಭವಾಗಿ 11.5 ಕೋಟಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗುವ ಮೂಲಕ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಭಾರತೀಯ ಅಟಗಾರನೆಂದು ಬಿಂಬಿಸಿಕೊಂಡಿದ್ದಾರೆ. ಕಳೆದ ಬಾರಿ ಪುಣೆ ಜೆಂಟ್ಸ್ ತಂಡವನ್ನು ಫೈನಲ್ಸ್‍ಗೇರುವಲ್ಲಿ ಜಯದೇವ್‍ರ ಪಾತ್ರವಿದ್ದುದನ್ನು ಪರಿಗಣಿಸಿ ಅವರಿಗೆ ಈ ಆಫರ್ ನೀಡಲಾಗಿದೆ.

ಬೆಂಗಳೂರಿನವರೇ ಆದ ಕೃಷ್ಣಪ್ಪ ಗೌತಮ್ 6.2 ಕೋಟಿ ಭರ್ಜರಿ ಆಫರ್‍ನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಕೂಡಿಕೊಂಡಿದ್ದಾರೆ.ಮೂಲತಃ 20 ಲಕ್ಷದ ಮೂಲಬೆಲೆಯಿಂದ ಪ್ರಾರಂಭವಾದ ಹರಾಜು ಪ್ರಕ್ರಿಯೆಯಲ್ಲಿ 6.2 ಕೋಟಿಗೆ ಬಿಕರಿಯಾಗುವ ಮೂಲಕ ಫ್ರಾಂಚೈಸಿಗಳಲ್ಲಿ ದೊಡ್ಡ ಸಪ್ರೈಸ್ ನೀಡಿದ್ದಾರೆ. ಮೊದಲ ದಿನದಲ್ಲಿ ಕನ್ನಡಿಗರಾದ ಕೆ.ಎಲ್.ರಾಹುಲ್, ಮನೀಷ್‍ಪಾಂಡೆ 11 ಕೋಟಿ ಬಿಕರಿಯಾಗಿ ಆಶ್ಚರ್ಯ ಮೂಡಿಸಿದ್ದರೆ, ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕರ್ನಾಟಕದ ಆಟಗಾರರಿಗೆ ಬಂಪರ್ರೋ ಬಂಪರ್.

ಗೇಲ್ ಆರ್‍ಸಿಬಿಯಿಂದ ಔಟ್:
ನಿನ್ನೆ ಬಿಕರಿಯಾಗದೆ ಉಳಿದಿದ್ದ ಸ್ಫೋಟಕ ಬ್ಯಾಟ್ಸ್‍ಮನ್ ಕ್ರಿಸ್‍ಗೇಲ್‍ರನ್ನು ಈ ಬಾರಿ ಆರ್‍ಸಿಬಿ ತಂಡದಿಂದ ಕೈಬಿಟ್ಟಿರುವುದು ಆಶ್ಚರ್ಯ ಮೂಡಿಸಿದೆ. ರೇಟ್ ಟು ಮ್ಯಾಚ್ ಪ್ರಕ್ರಿಯೆಯಲ್ಲಿ ಗೇಲ್ ಆರ್‍ಸಿಬಿ ಅನ್ನು ಕೂಡಿಕೊಳ್ಳಬಹುದೆಂದು ಅಂದಾಜಿಸಲಾಗಿತ್ತಾದರೂ ಕಳೆದ ಬಾರಿ ಅದ್ಭುತ ಪ್ರದರ್ಶನ ನೀಡಿದ್ದ ಪವನ್‍ನೇಗಿಯನ್ನು ಆರ್‍ಸಿಬಿ ತನ್ನಲ್ಲೇ ಉಳಿಸಿಕೊಂಡಿದೆ. ಪವನ್‍ನೇಗಿಯನ್ನು ರಾಜಸ್ಥಾನ್ ರಾಯಲ್ಸ್ 1 ಕೋಟಿಗೆ ಬಿಕರಿ ಮಾಡಿಕೊಂಡಿತ್ತಾದರೂ ನೇಗಿಯನ್ನು ಆರ್‍ಟಿಎಂ ಮೂಲಕ ನೇಗಿಯನ್ನು ಉಳಿಸಿಕೊಂಡು ಗೇಲ್‍ರನ್ನು ಆರ್‍ಸಿಬಿಯಿಂದ ಹೊರದಬ್ಬುವ ಸೂಚನೆ ನೀಡಿದ್ದಾರೆ.

ನಿನ್ನೆ ಇಡೀ ದಿನ ಅಗ್ರಶ್ರೇಷ್ಠ ದೇಶಿಯ ಬ್ಯಾಟ್ಸ್‍ಮನ್‍ಗಳಿಗೆ ಹಾತೊರೆದ ಆರ್‍ಸಿಬಿಯು ಇಂದು ಮನ್‍ದೀಪ್‍ಸಿಂಗ್ (1.4 ಕೋಟಿ)ರನ್ನು ಬಿಕರಿ ಮಾಡಿಕೊಂಡಿತು. ಬೌಲಿಂಗ್ ವಿಭಾಗದಲ್ಲೂ ಆರ್‍ಸಿಬಿ ತಂಡವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ವಾಷಿಂಗ್ಟನ್ ಸುಂದರ್ ( 3.2 ಕೋಟಿ), ಮುರುಗನ್ ಅಶ್ವಿನ್ (2.2 ಕೋಟಿ)ರನ್ನು ಬಿಕರಿ ಮಾಡಿಕೊಂಡಿದೆ. ಸ್ಪಿನ್ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ ಡೆಲ್ಲಿಡೇರ್‍ಡೆವಿಲ್ಸ್ ಶಹಬಾಜ್ ನದೀಮ್‍ರನ್ನು 3.2 ಕೋಟಿಗೆ, ಮುಂಬೈ ಇಂಡಿಯನ್ಸ್ ರಾಹುಲ್ ಚಹಾರ್‍ರಿಗೆ 1.9 ಕೋಟಿ ಕೊಟ್ಟು ತನ್ನ ತಂಡದ ಪಾಲು ಮಾಡಿಕೊಂಡಿದ್ದಾರೆ. ರಾಹುಲ್ ಚಹರ್‍ಗೆ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಭಾರಿ ಪೈಪೋಟಿ ನಡೆಸಿತ್ತಾದರೂ ಕೊನೆಯಲ್ಲಿ ಮುಂಬೈ ಚಹಾರ್‍ರನ್ನು ಕೊಂಡುಕೊಳ್ಳುವಲ್ಲಿ ಯಶಸ್ವಿಯಾಯಿತು.

ಆಟಗಾರರು ಯಾವ ತಂಡಕ್ಕೆ:
ಆರ್‍ಸಿಬಿ:
ಆಸ್ಟ್ರೇಲಿಯಾದ ನಥಾನ್ ಕಂಟ್ರಿನೈಲ್- 2.2 ಕೋಟಿ (ಮೂಲ ಬೆಲೆ 1.5 ಕೋಟಿ).
ಮೊಹಮ್ಮದ್ ಸಿರಾಜ್- 2.6 ಕೋಟಿ (ಮೂಲ ಬೆಲೆ 1 ಕೋಟಿ).
ಚೆನ್ನೈ ಸೂಪರ್ ಕಿಂಗ್ಸ್: ಶಾರ್ದುಲ್ ಠಾಕೂರ್- 2.6 ಕೋಟಿ (ಮೂಲ ಬೆಲೆ 75 ಲಕ್ಷ)
ಡೆಲ್ಲಿ ಡೇರ್‍ಡೆವಿಲ್ಸ್: ನ್ಯೂಜಿಲೆಂಡ್‍ನ ಟ್ರೆಂಟ್ ಬೋಲ್ಟ್- 22 ಕೋಟಿ (ಮೂಲ ಬೆಲೆ 1.5 ಕೋಟಿ)
ಮನ್‍ಜೋತ್ ಕ್ಲಾರಾ -20 ಲಕ್ಷ
ಗುರ್ಕೀತ್‍ಸಿಂಗ್ – 75 ಲಕ್ಷ (ಮೂಲ ಬೆಲೆ 50 ಲಕ್ಷ)
ಜಯಂತ್ ಯಾದವ್- 50 ಲಕ್ಷ
ಆಸ್ಟ್ರೇಲಿಯಾದ ಡೇನಿಯಲ್ ಕ್ರಿಸ್ಟಿಯನ್- 1.5 ಕೋಟಿ ( ಮೂಲ ಬೆಲೆ 1 ಕೋಟಿ)
ಮುಂಬೈ ಇಂಡಿಯನ್ಸ್: ಆಸ್ಟ್ರೇಲಿಯಾದ ಬೆನ್‍ಕಟ್ಟಿಂಗ್ -2.2 ಕೋಟಿ (ಮೂಲ ಬೆಲೆ 1 ಕೋಟಿ)
ಸನ್‍ರೈಸರ್ಸ್ ಹೈದ್ರಾಬಾದ್: ಸಚಿನ್‍ಬೇಬಿ- 20 ಲಕ್ಷ
ಸಂದೀಪ್‍ಶರ್ಮಾ-3 ಕೋಟಿ (ಮೂಲ ಬೆಲೆ 50 ಲಕ್ಷ)
ಮೊಹಮ್ಮದ್ ನಬಿ (ಆಫ್ಘಾನಿಸ್ತಾನ)- 1 ಕೋಟಿ (ಮೂಲ ಬೆಲೆ 50 ಲಕ್ಷ)
ಕಿಂಗ್ಸ್ ಇಲೆವೆನ್ ಪಂಜಾಬ್: ಮುಜಿಬ್ ಜರ್ದಾನ್- 4 ಕೋಟಿ (50 ಲಕ್ಷ) ಮೋಹಿತ್ ಶರ್ಮಾ (ಆರ್‍ಟಿಎಂ)- 2.4 ಕೋಟಿ

ನಿನ್ನೆ ಆಶ್ಚರ್ಯ ಮೂಡಿದಂತೆ ಇಂದು ಕೂಡ ಭಾರತ ತಂಡದ ಶ್ರೇಷ್ಠ ಬೌಲರ್‍ಗಳಾದ ಇಕ್ಬಾಲ್ ಅಬ್ದುಲ್, ಶಿವಿಲ್ ಕೌಶಿಕ್, ಕನ್ನಡಿಗ ಕೆ.ಸಿ.ಕಾರ್ಯಪ್ಪ ಅವರು ಬಿಕರಿಯಾಗದೆ ನಿರಾಸೆ ಅನುಭವಿಸಿದರು.

 

Facebook Comments

Sri Raghav

Admin