ಐಪಿಎಲ್ -10 : ಫೈನಲ್‍ಗೇರಲು ಕೆಕೆಆರ್- ಮುಂಬೈ ಇಂಡಿಯನ್ಸ್ ನಡುವೆ ಬಿಗ್‍ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

ipl
ಬೆಂಗಳೂರು, ಮೇ 19- ಉದ್ಯಾನನಗರಿಯಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದ ಜನತೆ ಹರ್ಷಗೊಂಡಿದ್ದಾರೆ. ಆದರೆ ಅದೇ ಮಳೆ ಐಪಿಎಲ್ 10ರ ಫೈನಲ್‍ಗೇರಲು ಹಾತೊರೆಯುತ್ತಿರುವ ರೋಹಿತ್‍ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಗೌತಮ್‍ಗಂಭೀರ್ ಸಾರಥ್ಯದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೆ ತಲೆನೋವಾಗಿದೆ.ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ಮುಂದಾಳತ್ವದ ಆರ್‍ಪಿಎಸ್ ತಂಡದ ಎದುರು 10 ರನ್‍ಗಳ ಅಂತರದಿಂದ ಸೋಲುವ ಮೂಲಕ ನಿರಾಸೆ ಅನುಭವಿಸಿದ್ದ ರೋಹಿತ್ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಫೈನಲ್‍ಗೇರಲು ಹಾತೊರೆಯುತ್ತಿದ್ದರೆ ಮತ್ತೊಂದೆಡೆ ಮೂರನೇ ಬಾರಿಗೆ ಚಾಂಪಿಯನ್ಸ್ ಆಗುವ ಆಸೆ ಹೊತ್ತಿರುವ ಗಂಭೀರ್ ನೇತೃತ್ವದ ಕೆಕೆಆರ್ ಎಲಿಮಿನೇಟರ್ ಪಂದ್ಯದಲ್ಲಿ ಮಳೆಯ ಅಡ್ಡಿಯಿಂದಾಗಿ ಡರ್ಕ್‍ವರ್ತ್ ಲೂಯಿಸ್ ನಿಯಮದಡಿ ಸನ್‍ರೈಸಸ್ ವಿರುದ್ಧ ವೀರೋಚಿತ ಗೆಲುವು ಸಾಧಿಸಿದ್ದು ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವ ಮೂಲಕ ಫೈನಲ್‍ನಲ್ಲಿ ಆರ್‍ಪಿಎಸ್ ತಂಡವನ್ನು ಎದುರಿಸಲು ತಂತ್ರ ಹೆಣೆದಿದ್ದರೂ ವರುಣನ ಕಾಟ ತಂಡವನ್ನು ಕಾಡುತ್ತಿದೆ.

 
ಮುಂಬೈ ಸ್ಟ್ರಾಂಗ್:
ಐಪಿಎಲ್10ರ ಲೀಗ್ ಹಂತದಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣ ಹಾಗೂ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಎರಡೂ ಪಂದ್ಯಗಳಲ್ಲೂ ರೋಹಿತ್ ಬಳಗ 4 ವಿಕೆಟ್ ಹಾಗೂ 9 ರನ್‍ಗಳ ಅಂತರದಿಂದ ಗೆದ್ದಿದ್ದು ಈ ಪಂದ್ಯವನ್ನು ಗೆಲ್ಲುವ ಹುಮ್ಮನಸ್ಸಿದೆ. ಆದರೆ ಹಿಂದಿನ ಪಂದ್ಯಗಳ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಕೆಕೆಆರ್ ಕೂಡ ಹಾತೊರೆಯುತ್ತಿದೆ.

ಪ್ಲಸ್ ಪಾಯಿಂಟ್:
ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟಿಂಗ್ ಪಿಚ್ ಆಗಿರುವುದರಿಂದ ಎರಡು ತಂಡಗಳು ಈ ಪಿಚ್ ಅದೃಷ್ಟದಾಯಕವಾಗಿದೆ. ಮುಂಬೈ ತಂಡದ ಆರಂಭಿಕ ಆಟಗಾರ ರಾದ ಲಿಂಡ್ಲೆ ಸಿಮನ್ಸ್ ಹಾಗೂ ಪಾರ್ಥಿವ್ ಪಾಟೀಲ್ ಉತ್ತಮ ರನ್ ಗಳಿಸುತ್ತಿದ್ದು ಮಾಧ್ಯಮ ಕ್ರಮಾಂಕದಲ್ಲಿ ನಾಯಕ ರೋಹಿತ್ ಶರ್ಮಾ, ಅಂಬಟಿ ರಾಯುಡು, ಪಾಂಡ್ಯಾ ಬ್ರದರ್ಸ್, ಪೊಲಾರ್ಡ್ ರನ್ ವೇಗ ಕುಸಿಯದಂತೆ ನೋಡಿಕೊಂಡಿದ್ದಾರೆ. ಇನ್ನು ಡೆತ್ ಓವರ್‍ನಲ್ಲಿ ಜಸ್‍ಪ್ರೀತ್ ಬೂಮ್ರಾ ಎದುರಾಳಿ ಬ್ಯಾಟ್ಸ್‍ಮನ್‍ಗಳ ರನ್‍ದಾಹಕ್ಕೆ ಬ್ರೇಕ್ ಹಾಕುವ ಚಾಕಚಕ್ಯತೆಯನ್ನು ಹೊಂದಿದ್ದಾರೆ.

 

ಮುಂಬೈ ಇಂಡಿಯನ್ಸ್ ನಂತೆಯೇ ಕೆಕೆಆರ್‍ನ ಆರಂಭಿಕ ಆಟಗಾರರಾದ ಸುನೀಲ್ ನರೇನ್, ಕ್ರಿಸ್ ಲೀನ್ ವೇಗವಾಗಿ ರನ್ ಗಳಿಸುತ್ತಿರುವುದಲ್ಲದೆ ಇದಕ್ಕೆ ಬೆಂಬಲವಾಗಿ ನಾಯಕ ಗೌತಮ್‍ಗಂಭೀರ್, ರಾಬಿನ್ ಉತ್ತಪ್ಪ ರ ಬ್ಯಾಟ್‍ನಿಂದ ರನ್ ಹೊಳೆ ಹರಿದು ಬರುತ್ತಿದೆ. ಆದರೆ ಯೂಸಫ್‍ಪಠಾಣ್‍ರ ಕಳಪೆ ಬ್ಯಾಟಿಂಗ್ ಪ್ರದರ್ಶನ ತಂಡಕ್ಕೆ ದುಬಾರಿಯಾಗಿದೆ.ಬೌಲಿಂಗ್ ವಿಭಾಗದಲ್ಲಿ ಕೌಲ್ಟರ್ ನೈಟ್ , ಟ್ರೆಂಡ್ ಬೋಲ್ಡ್ ಎದು ರಾಳಿ ಆಟಗಾರರಿಗೆ ಕಬ್ಬಿಣದ ಕಡಲೆಯಂತಾ ಗಿದ್ದಾರೆ.ಆದರೆ ಎರಡು ತಂಡಗಳು ಗೆಲ್ಲುವ ಒತ್ತಡದಲ್ಲಿರುವುದರಿಂದ ಮುಂಬೈ ಇಂಡಿಯನ್ಸ್‍ನ ನಾಯಕ ರೋಹಿತ್ ಮತ್ತು ಕೆಕೆಆರ್‍ನ ನಾಯಕ ಗಂಭೀರ್‍ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

 

ಡಕ್‍ವರ್ತ್ ನಿಯಮದ ಮೂಲಕ ಗೆಲುವು:
ವರುಣನ ಆರ್ಭಟ ಇಂದು ಕೂಡ ಮುಂದುವರೆದರೆ ಮುಂಬೈ ಅಥವಾ ಕೆಕೆಆರ್ ಫೈನಲ್‍ಗೇರಲು ಡಕ್‍ವರ್ತ್ ನಿಯಮವೇ ಗೆಲುವಿಗೆ ಮೂಲ ಆಧಾರವಾಗುತ್ತದೆ. ಎಲಿಮಿನೇಟರ್ ಪಂದ್ಯದಲ್ಲೂ ಕೂಡ ಡಕ್‍ವರ್ತ್ ನಿಯಮದಿಂದ ಗೆಲುವನ್ನು ನಿರ್ಧರಿಸಲಾಗಿತ್ತು. ಒಂದು ವೇಳೆ ಒಂದು ಓವರ್ ಆಟಕ್ಕೂ ಮಳೆ ಅನುವು ಮಾಡಿಕೊಳ್ಳಲಿದ್ದರೆ ಸೂಪರ್ ಓವರ್‍ನ ತಂತ್ರ ಅಳವಡಿಸಲಾಗುತ್ತದೆ. ಸೂಪರ್ ಓವರ್ ಕೂಡ ನಡೆಯದಿದ್ದರೆ ಲೀಗ್‍ನಲ್ಲಿ ಮುಂಬೈ, ಕೆಕೆಆರ್ ವಿರುದ್ಧ 2 ಪಂದ್ಯಗಳಲ್ಲೂ ಜಯ ಸಾಧಿಸಿರುವುದು ಹಾಗೂ ಪಾಯಿಂಟ್ಸ್ ಪಟ್ಟಿಯಲ್ಲಿ ಟಾಪ್ 1 ತಂಡವಾಗಿದ್ದರಿಂದ ನೇರವಾಗಿ ಫೈನಲ್ ಅನ್ನು ಪ್ರವೇಶಿಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin