ಐಪಿಎಲ್ 2017 : ಮುಂಬೈ ವಿರುದ್ಧ ಗೆದ್ದು ಬೀಗಿದ ಪುಣೆ

ಈ ಸುದ್ದಿಯನ್ನು ಶೇರ್ ಮಾಡಿ

Pune--01

ಪುಣೆ. ಎ.07 : ಐಪಿಎಲ್10 ನೇ ಸರಣಿಯ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್   ವಿರುದ್ಧ ಪುಣೆ ಸೂಪರ್ ಜೈಂಟ್ಸ್ ಭರ್ಜರಿ ಜಯಗಳಿಸಿ ಮೊದಲ ಪಂದ್ಯದಲ್ಲಿಯೇ ಭರ್ಜರಿ ಶುಭಾರಂಭ ಮಾಡಿದೆ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿ ಮುಂಬೈ ಇಂಡಿಯನ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಪಾರ್ಥಿವ್ ಪಟೇಲ್ 19, ಜೋಸ್ ಬಟ್ಲರ್ 38, ನಿತೀಶ್ ರಾಣಾ 34, ಕೀರನ್ ಪೋಲಾರ್ಡ್ 27, ಹಾರ್ದಿಕ್ ಪಾಂಡ್ಯ ಅಜೇಯ 35 ರನ್ ಗಳಿಸಿದ್ದಾರೆ. 185 ರನ್ ಗೆಲುವಿನ ಗುರಿ ಬೆನ್ನತ್ತಿದ ಪುಣೆ ಇನ್ನೊಂದು ಎಸೆತ ಬಾಕಿ ಇರುವಾಗಲೇ 187 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ಪುಣೆ ತಂಡದ ಪರವಾಗಿ, ಸ್ಟೀವನ್ ಸ್ಮಿತ್ 54 ಎಸೆತಗಳಲ್ಲಿ 3 ಸಿಕ್ಸರ್, 7 ಬೌಂಡರಿ ಸೇರಿದಂತೆ ಅಜೇಯ 84 ರನ್ ಗಳಿಸಿದರೆ, ಅಜಿಂಕ್ಯಾ ರೆಹಾನೆ 60 ಗಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin