ಐರೋಪ್ಯ ದೇಶಗಳಲ್ಲಿ ಐಎಸ್ ಉಗ್ರನ ಅಟ್ಟಹಾಸ : ಪ್ಯಾರಿಸ್‍’ನಲ್ಲಿ ಪೊಲೀಸ್ ಅಧಿಕಾರಿ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ISIS-Shooting--01

ಪ್ಯಾರಿಸ್, ಏ.21-ಭಯಾನಕ ಕೃತ್ಯಗಳಿಂದ ಜಗತ್ತಿಗೆ ಕಂಟಕಪ್ರಾಯವಾಗಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಅಟ್ಟಹಾಸ ಐರೋಪ್ಯ ದೇಶಗಳಲ್ಲಿ ಮುಂದುವರಿದಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನ ಚಾಂಪ್ಸ್ ಇಲಿಸೀಸ್‍ನಲ್ಲಿ ಭಯೋತ್ಪಾದಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಆಧಿಕಾರಿ ಮೃತಪಟ್ಟು, ಇನ್ನಿಬ್ಬರು ತೀವ್ರ ಗಾಯಗೊಂಡಿದ್ದಾರೆ. ನಂತರ ನಡೆದ ಕಾರ್ಯಾಚರಣೆಯಲ್ಲಿ ಬಂದೂಕುದಾರಿ ಹಂತಕನನ್ನು ಕೊಲ್ಲಲಾಗಿದೆ.ಫಾನ್ಸ್ ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ನಡೆದಿರುವ ಈ ದಾಳಿ ಮುಂದೆ ಮರುಕಳಿಸಬಹುದಾದ ಮತ್ತಷ್ಟು ಹಿಂಸಾಚಾರಕ್ಕೆ ಮುನ್ಸೂಚನೆಯಾಗಿದೆ. ಪ್ಯಾರಿಸ್‍ನ ವಿಶ್ವವಿಖ್ಯಾತ ಸಾಲು ಮರಗಳ ರಾಜಮಾರ್ಗದಲ್ಲಿ ನಿನ್ನೆ ರಾತ್ರಿ 9 ಗಂಟೆಯಲ್ಲಿ ಪೊಲೀಸ್ ವಾಹನದ ಮೇಲೆ ಶೂಟರ್ ಸ್ವಯಂಚಾಲಿತ ಶಸ್ತ್ರಾಸ್ತ್ರದಿಂದ ಮನಬಂದಂತೆ ಗುಂಡು ಹಾರಿಸಿದ. ಈ ಆಕ್ರಮಣದಲ್ಲಿ ಪೊಲೀಸ್ ಅಧಿಕಾರಿ ಸ್ಥಳದಲ್ಲೇ ಹತರಾದರು. ಇನ್ನಿಬ್ಬರು ಅಧಿಕಾರಿಗಳು ಗಾಯಗೊಂಡರು. ಗುಂಡಿನ ದಾಳಿ ನಡೆಯುತ್ತಿದ್ದಂತೆ ಹೆದರಿ ಕಂಗಲಾದ ಪ್ರವಾಸಿಗರು ದಿಕ್ಕಾಪಾಲಾಗಿ ಓಡಿದರು.
ಇನ್ನೊಂದು ಸುತ್ತಿನ ದಾಳಿಗೆ ಭಯೋತ್ಪಾದಕ ಸಜ್ಜಾಗುತ್ತಿದ್ದರೆ, ಎಚ್ಚೆತ್ತ ಪೊಲೀಸರು ಗುಂಡು ಹಾರಿಸಿ ಆತನನ್ನು ಕೊಂದು ಹಾಕಿದರು. ಈ ದಾಳಿ ಹೊಣೆಯನ್ನು ಐಎಸ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin