ಐವರು ಮನೆಗಳ್ಳರ ಬಂಧನ , 38.66 ಲಕ್ಷ ರೂ.. ಚಿನ್ನಾಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

Arrested--01

ಬೆಂಗಳೂರು, ಫೆ.10-ಮನೆ, ಅಂಗಡಿಗಳ ಬೀಗ ಮುರಿದು ಹಾಗೂ ಬಸ್‍ಗಳಲ್ಲಿ ಪ್ರಯಾಣಿಕರ ದೋಚುತ್ತಿದ್ದ ಐವರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿ 38.66 ಲಕ್ಷ ರೂ. ಬೆಲೆಯ 1.450 ಕೆಜಿ ಚಿನ್ನಾಭರಣ, 96 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.  ಜಿಗಣಿಯ ಮನುಕುಮಾರ್ ಅಲಿಯಾಸ್ ಮನು (29), ವೆಂಕಟೇಶ್ (30), ಮಳವಳ್ಳಿಯ ನಾಗರಾಜ್ (40), ಆನೇಕಲ್‍ನ ರವಿ ಅಲಿಯಾಸ್ ಕೊತ್ತತ್ತಿ ರವಿ (45), ಟಿ.ನರಸೀಪುರ ತಾಲೂಕಿನ ರಮೇಶ್ (25) ಬಂಧಿತ ಕಳ್ಳರು.  ಆರೋಪಿಗಳು ಹಗಲು ಮತ್ತು ರಾತ್ರಿ ವೇಳೆ ಮನೆ, ಅಂಗಡಿಗಳ ಬೀಗ ಮುರಿದು ನಗನಾಣ್ಯ ದೋಚುತ್ತಿದ್ದರು. ಅಲ್ಲದೆ ಬಸ್‍ಗಳಲ್ಲಿ ಪ್ರಯಾಣಿಕರ ಬ್ಯಾಗ್‍ನಲ್ಲಿದ್ದ ನಗನಾಣ್ಯ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಜಿ.ರಸ್ತೆಯಲ್ಲಿನ ಲಕ್ಷ್ಮೀರಾಮ್ ಅಪೇರಲ್ಸ್ ಅಂಗಡಿಯ ರೋಲಿಂಗ್ ಷಟರ್ ಮುರಿದು ಹಣ ಕಳವು ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.  ಇವರ ಬಂಧನದಿಂದ 17 ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತರಿಂದ 38.66 ಲಕ್ಷ ರೂ. ಮೌಲ್ಯದ 1 ಕೆಜಿ 450 ಗ್ರಾಂ ಚಿನ್ನಾಭರಣ ಹಾಗೂ 96 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.  ಡಿಸಿಪಿ ಎಂ.ಎನ್.ಅನುಚೇತ್, ಎಸಿಪಿ ನಿರಂಜನರಾಜ್ ಅರಸ್ ಅವರ ಮಾರ್ಗದರ್ಶನ, ಉಪ್ಪಾರಪೇಟೆ ಇನ್ಸ್‍ಪೆಕ್ಟರ್ ಯು.ಡಿ.ಕೃಷ್ಣಕುಮಾರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin