ಐವರು ಮಹಿಳೆಯರೂ ಸೇರಿದಂತೆ 6 ಜನರನ್ನು ಕೊಂದ ಸೀರಿಯಲ್ ಕಿಲ್ಲರ್ ಡಾಕ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

Doctor

ಸತಾರ, ಆ.16- ಐವರು ಮಹಿಳೆಯರೂ ಸೇರಿದಂತೆ ಆರು ಜನರನ್ನು ಕಗ್ಗೊಲೆ ಮಾಡಿದ ಆರೋಪದ ಮೇಲೆ ಬಂಧಿತನಾಗಿರುವ ಮಹಾರಾಷ್ಟ್ರದ ಸತಾರ ಜಿಲ್ಲೆಯ ವಾಯ್ ಪಟ್ಟಣದ ಹಂತಕ ವೈದ್ಯ ಸಂತೋಷ್ಪೂಲ್ ದಿಗ್ಭ್ರಮೆಗೊಳಿಸುವ ಸಂಗತಿಗಳನ್ನು ಬಯಲು ಮಾಡಿದ್ದಾನೆ. ಓರ್ವ ಅಂಗನವಾಡಿ ಕಾರ್ಯಕರ್ತೆಯ ಅಪಹರಣ ಮತ್ತು ಹತ್ಯೆ ಸಂಬಂಧ ಕಳೆದ ಶನಿವಾರ ಬಂಧಿತನಾದ ಈತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆತನ ತೋಟ ಮನೆಯಲ್ಲಿ ಐದು ಶವಗಳನ್ನು ಪತ್ತೆ ಮಾಡಿದ್ದಾರೆ.   ಮಹಾರಾಷ್ಟ್ರ ಪೂರ್ವ ಪ್ರಾಥಮಿಕ ಶಿಕ್ಷಣ ಸೇವಿಕ ಸಂಘ (ಎಂಪಿಪಿಎಸ್ಎಸ್) ಅಧ್ಯಕ್ಷೆ 49 ವರ್ಷದ ಮಂಗಳಾ ಜೆಥೆ ನಿಗೂಢ ಕಣ್ಮರೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಹತ್ಯಾಕಾಂಡದ ಘೋರ ವೃತ್ತಾಂತವೇ ಪತ್ತೆಯಾಯಿತು. ಸಂತೋಷ್ ಜೊತೆ ಸಂಬಂಧ ಹೊಂದಿದ್ದ ಮಂಗಳಾ ಮನಸ್ತಾಪದಿಂದಾಗಿ ಆತನ ಕ್ರಿಮಿನಲ್ ಕುಕೃತ್ಯಗಳನ್ನು ಬಯಲಿಗೆಳೆಯುವುದಾಗಿ ಬೆದರಿಕೆವೊಡ್ಡಿದ್ದಳು.

ಇದರಿಂದ ಆತಂಕಗೊಂಡ ವೈದ್ಯನು ವಾಯ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಂಗಳಾಳನ್ನು ತನ್ನ ನರ್ಸ್ ಜ್ಯೋತಿ ಮಂಡ್ರೆ ಸಹಾಯದಿಂದ ಅಪಹರಿಸಿ, ತೋಟದ ಮನೆಯಲ್ಲಿ ಕೂಡಿಟ್ಟು ಮಾರಕ ಔಷಧದ ಓವರ್ ಡೋಸ್ ನೀಡಿ ಕೊಂದರು.  ಮಂಗಳಾ ನಿಗೂಢ ಕಣ್ಮರೆಯ ಜಾಡು ಹಿಡಿದ ಪೊಲೀಸರಿಗೆ ಸುಳಿವು ಲಭಿಸಿ ಜ್ಯೋತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ತಲೆಮರೆಸಿಕೊಂಡಿದ್ದ ಸಂತೋಷ್ನನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಇದುವರೆಗೂ ಐವರು ಮಹಿಳೆಯರೂ ಸೇರಿದಂತೆ ಆರು ಜನರನ್ನು ಅಪಹರಿಸಿ ಓವರ್ಡೋಸ್ ಔಷಧಿ ನೀಡಿ ಕೊಂದು ಫಾರ್ಮ್ ಹೌಸ್ನಲ್ಲಿ ಹೂತು ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ವಾಯ್ ಪೊಲೀಸ್ ಠಾನೆ ಇನ್ಸ್ಪೆಕ್ಟರ್ ಪದ್ಮಕರ್ ಘಾನ್ವತ್ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin