ಐಶ್ವರ್ಯ @43 : ಸಾರ್ವಜನಿಕರೆದುರೇ ಐಶ್-ಅಭಿ ಲಿಪ್ ಲಾಕ್

ಈ ಸುದ್ದಿಯನ್ನು ಶೇರ್ ಮಾಡಿ

Aishwarya-Rai

ಮುಂಬೈ, ನ.1- ಬಾಲಿವುಡ್ ಖ್ಯಾತ ಅಭಿನೇತ್ರಿ ಮತ್ತು ಮಾಜಿ ಭುವನ ಸುಂದರಿ ಐಶ್ವರ್ಯ ರೈಗೆ ಇಂದು ಹುಟ್ಟುಹಬ್ಬದ ಸಡಗರ-ಸಂಭ್ರಮ. ಮುಂಬೈನಲ್ಲಿಂದು ತಮ್ಮ ಕುಟುಂಬದ ಸದಸ್ಯರು, ಬಂಧು-ಮಿತ್ರರು ಮತ್ತು ಆಪ್ತರೊಂದಿಗೆ 43ನೆ ಜನ್ಮದಿನವನ್ನು ಆಚರಿಸಿಕೊಂಡರು. ನಿನ್ನೆಯಷ್ಟೇ ದೀಪಾವಳಿ ಶುಭ ಸಂದರ್ಭದಲ್ಲಿ ಬಾಲಿವುಡ್ ಬಿಗ್ ಬಿ ಮನೆಯಲ್ಲಿ ದೊಡ್ಡದೊಂದು ಪಾರ್ಟಿ ಏರ್ಪಡಿಸಲಾಗಿತ್ತು. ಪಾರ್ಟಿಗೆ ಬಾದ್ ಶಾ ಶಾರುಕ್ ಖಾನ್, ಪತ್ನಿ ಗೌರಿ ಖಾನ್ ಸೇರಿದಂತೆ ಅನೇಕ ನಟ-ನಟಿಯರು ಆಗಮಿಸಿದ್ದರು.

ಸಾರ್ವಜನಿಕರೆದುರೇ ಲಿಪ್ ಲಾಕ್ :

ಬಿಗ್ ಬಿ ಮನೆಯಲ್ಲಿ ಮನೆಯಲ್ಲಿ ನಡೆದ ದೀಪಾವಳಿ ಪಾರ್ಟಿ ವೇಳೆ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಅತಿಥಿಗಳ ಸ್ವಾಗತಕ್ಕೆ ನಿಂತಿದ್ದರು.  ಪಾರ್ಟಿಯಲ್ಲಿ ಅತಿಥಿಗಳನ್ನು ಸ್ವಾಗತಿಸುತ್ತಿದ್ದ ಅಭಿಷೇಕ್ ಹಾಗೂ ಐಶ್ ತುಂಬಾ ಹತ್ತಿರ ಬಂದಿದ್ದಲ್ಲದೆ ಲಿಪ್ ಲಾಕ್ ಮಾಡಿಕೊಂಡ್ರು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಡಿವಂತಿಕೆಯ ಕುಟುಂಬಗಳಲ್ಲಿ ಬಚ್ಚನ್ ಕುಟುಂಬ ಕೂಡ ಒಂದು.

Facebook Comments

Sri Raghav

Admin