ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

CHAMPION
ಸಿಡ್ನಿ , ಏ, 20- ಗಾಯದ ಸಮಸ್ಯೆಯಿಂದ ಐಪಿಎಲ್ ಸರಣಿಯಿಂದ ಹೊರಗುಳಿದಿದ್ದ ಮಿಚಲ್ ಸ್ಟ್ರಾಕ್ (ಆರ್‍ಸಿಬಿ) , ಜೇಮ್ಸ್ ಪ್ಯಾಟ್ಸನ್ ಸೇರಿದಂತೆ 15 ಸದಸ್ಯರ ತಂಡವನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಆಯ್ಕೆ ಸಮಿತಿ ಅಧ್ಯಕ್ಷ ಟೆರಿವೋರ್ ಹೋನ್ಸ್ ತಿಳಿಸಿದ್ದಾರೆ.  ತಂಡದ ಸಾರಥ್ಯವನ್ನು ಸ್ಟಿವನ್ ಸ್ಮಿತ್ ವಹಿಸಲಿದ್ದು , ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ವಿಭಾಗಗಳನ್ನು ಬಲಿಷ್ಠಗೊಳಿಸುವ ಸಮತೋಲನ ತಂಡವನ್ನು ಪ್ರಕಟಿಸಿದ್ದು ಮೇ 18 ರಂದು ಇಂಗ್ಲೆಂಡ್‍ನತ್ತ ಪ್ರವಾಸ ಬೆಳೆಸಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಂಡದ ವಿವರ:

ಸ್ಟೀವನ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಪ್ಯಾಟ್ ಕುಮ್ಮಿನ್ಸ್ , ಆರೋನ್ ಪಿಂಚ್, ಜೋನ್ ಹ್ಯಾಸ್ಟಿಂಗ್, ಜೋಸ್ ಹೆಜೆಲ್‍ವುಡ್, ಟ್ರಾವಿಸ್ ಹೆಡ್, ಮೋರಿಸ್ ಹೆನ್ಕುರಿಸ್, ಕ್ರಿಸ್ ಲೆನ್, ಗ್ಲೆನ್ ಮ್ಯಾಕ್ಸ್‍ವೆಲ್, ಜೇಮ್ಸ್ ಪ್ಯಾಟಿಸನ್, ಮಿಚಲ್ ಸ್ಟ್ರಾಕ್, ಮಾರ್ಕಸ್ ಸ್ಟೋನೀಶ್, ಮ್ಯಾಥ್ಯು ವೇಡ್, ಆ್ಯಂಡ ಜಂಪಾ.

ಬಾಂಗ್ಲಾಕ್ಕೆ ಮುಶ್ರಫೆ ಸಾರಥಿ:

ಐಪಿಎಲ್ 10ರಲ್ಲಿ ಮಿಂಚುತ್ತಿರುವ ಕೆಕೆಆರ್‍ನ ಶಕೀಬ್ ಅಲ್ ಹಸನ್ ಹಾಗೂ ಸನ್‍ರೈಸಸ್ ಹೈದ್ರಾಬಾದ್‍ನ ಮುಷ್ತಾಫಿಜುರ್ ರೆಹಮಾನ್‍ಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಕಲ್ಪಿಸಿದ್ದು ತಂಡವನ್ನು ಮುಶ್ರಫೆ ಮೊರ್ಟಾಜಾ ಮುನ್ನಡೆಸಲಿದ್ದಾರೆ.ನುರುಲ್ಲಾ ಹಸನ್, ಸುಭಾಸ್ ರಾಯ್, ಸುವಗಾತಾ ಹೋಮ್‍ಗೆ ಹೊರಗಿಟ್ಟು ಶಾಫಿಹುಲ್ ಇಸ್ಲಾಮ್‍ಗೆ ಸ್ಥಾನವನ್ನು ಕಲ್ಪಿಸಲಾಗಿದೆ.
ತಂಡ: ತಮೀಬ್ ಇಕ್ಬಾಲ್, ಸೌಮ್ಯ ಸರ್ಕಾರ್, ಇಮ್ರೂಲ್ ಕಯಾಸ್, ಮುಷ್ತಾಫ್ಕಿರ್ ರಹೀಮ್ (ವಿಕೆ), ಶಕಿಬ್ ಅಲ್ ಹಸನ್‍ಷ ಶಬ್ಬೀರ್ ರೆಹಮಾನ್, ಮೊಹಮಾದುಲ್ಲಾ , ಮೋಸಾದಿಕ್ ಹುಸೇನ್, ಮುಶ್ರಫೆ ಮೋರ್ಟಾಜಾ, ಮುಷ್ತಾಫಿಜುರ್ ರೆಹಮಾನ್, ರುಬೆಲ್ ಹುಸೇನ್, ಟಸ್ಕಿನ್ ಅಹ್ಮದ್, ಶುನ್‍ಜಾಮುಲ್ ಇಸ್ಲಾಮ್, ಮೆಹದಿ ಹಸನ್, ಶಾಫಿಹುಲ್ ಇಸ್ಲಾಮ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin