ಐಸಿಸಿ ಟಾಪ್ 10 ಬ್ಯಾಟ್ಸ್ಮನ್ ಪಟ್ಟಿಯಲ್ಲಿ ಅಜಿಂಕ್ಯಾ ರಹಾನೆ

ಈ ಸುದ್ದಿಯನ್ನು ಶೇರ್ ಮಾಡಿ

Rahana

ದುಬೈ, ಆ.16-ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಉಪನಾಯಕ ಅಜಿಂಕ್ಯಾ ರಹಾನೆ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಐಸಿಸಿ ನೂತನವಾಗಿ ಬಿಡುಗಡೆ ಮಾಡಿರುವ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಅಗ್ರ ಕ್ರಮಾಂಕ ಬ್ಯಾಟ್ಸ್ಮನ್ ಅಜಿಂಕ್ಯಾ ರಹಾನೆ 11ನೆ ಸ್ಥಾನದಿಂದ 8ನೆ ಸ್ಥಾನಕ್ಕೆ ಜಿಗಿದಿದ್ದಾರೆ. ವೆಸ್ಟ್ ಇಂಡೀಸ್ನ ಮೊದಲ ಟೆಸ್ಟ್ನಲ್ಲಿ ದ್ವಿಶತಕ ಗಳಿಸಿದ್ದರು. ನಂತರ 2 ಮತ್ತು 3ನೆ ಪಂದ್ಯಗಳಲ್ಲಿ ಕಳಪೆ ಫಾರ್ಮ್ನಿಂದ ನಾಯಕ ವಿರಾಟ್ ಕೊಹ್ಲಿ 13ನೆ ಸ್ಥಾನದಿಂದ 16ನೆ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ನಲ್ಲಿ ಉತ್ತಮ ಫಾರ್ಮ್ನಲ್ಲಿರುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅಗ್ರ ಕ್ರಮಾಂಕ ಕಾಪಾಡಿಕೊಂಡಿದ್ದಾರೆ.
ಐಸಿಸಿ ಟೆಸ್ಟ್ ಬೌಲಿಂಗ್ ವಿಭಾಗದಲ್ಲಿ ಉತ್ತಮ ಫಾರ್ಮ್ನಲ್ಲಿರುವ ಭಾರತದ ಸ್ಪಿನ್ನರ್ಗಳಾದ ರವಿಚಂದ್ರನ್, ಅಶ್ವಿನ್ ಮತ್ತು ರವೀಂದ್ರ ಜಡೇಜಾ ಕ್ರಮವಾಗಿ 2 ಮತ್ತು 6ನೆ ಸ್ಥಾನವನ್ನು ಪಡೆದಿದ್ದಾರೆ. ಆಲ್ರೌಂಡ್ ವಿಭಾಗದಲ್ಲಿ ಅಶ್ವಿನ್ ಮತ್ತೆ ಅಗ್ರ ಕ್ರಮಾಂಕವನ್ನು ಉಳಿಸಿಕೊಂಡಿದ್ದಾರೆ.

ಅಗ್ರ 10 ಬ್ಯಾಟ್ಸ್ಮೆನ್ಗಳು:

ಸ್ಟೀವನ್ ಸ್ಮಿತ್, ಜೋ ರೂಟ್, ಕೇನ್ ವಿಲಿಯಂಸನ್, ಹಾಸಿಮ್ ಆಮ್ಲಾ, ಯೂನಿಸ್ಖಾನ್, ಆ್ಯಡಂ ಹೋಗ್ಸ್, ಎ.ಬಿ.ಡಿವಿಲಿಯರ್ಸ್, ಅಜಿಂಕ್ಯಾ ರಹಾನೆ, ರಾಸ್ ಟೇಲರ್ ಮತ್ತು ಆಲಿಸ್ಟೈರ್ ಕುಕ್.
ಅಗ್ರ 10 ಬೌಲರ್ಗಳು: ಜೇಮ್ಸ್ ಅಂಡರ್ಸನ್, ಆರ್.ಅಶ್ವಿನ್, ಡೆಯ್ನ್ಸ್ಟೈನ್, ಸ್ಟುವರ್ಟ್ ಬ್ರಾಡ್, ಯಾಸಿರ್ ಷಾ, ರವೀಂದ್ರ ಜಡೇಜಾ, ಮಿಚೆಲ್ಸ್ಟಾರ್ಕ್, ರಂಗನಾ ಹೆರಾತ್, ಟ್ರೆಂಟ್ ಬೌಲ್ಟ್ , ಜೋಷ್ ಅಸ್ಲೆವುಡ್.
ಅಗ್ರ 5 ಆಲ್ರೌಂಡರ್ : ಆರ್.ಅಶ್ವಿನ್, ಶಕಿಬ್ ಉಲ್ಲಾ ಅಸಿನ್, ಮೊಹಿನ್ ಅಲಿ, ವಿ.ಪಿಲಾಂಡರ್ ಮತ್ತು ಮಿಚೆಲ್ಸ್ಟಾರ್ಕ್.

Facebook Comments

Sri Raghav

Admin