ಐಸಿಸಿ ಟಿ-20 ರ‍್ಯಾಂಕಿಂಗ್ ಪ್ರಕಟ : ನಂ.1 ಸ್ಥಾನದಲ್ಲಿ ಮುಂದುವರೆದ ವಿರಾಟ್

ಈ ಸುದ್ದಿಯನ್ನು ಶೇರ್ ಮಾಡಿ

Kohli-n

ದುಬೈ,ಸೆ.11- ಐಸಿಸಿ ರ್ಯಾಂಕಿಂಗ್ ನೂತನ ಪಟ್ಟಿ ಬಿಡುಗಡೆಯಾಗಿದ್ದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟ್ವೆಂಟಿ-20 ಮಾದರಿಯಲ್ಲಿ ನಂಬರ್ 1 ಆಟಗಾರನಾಗಿ ಮುಂದುವರೆದಿದ್ದಾರೆ.   ಶ್ರೀಲಂಕಾ ವಿರುದ್ಧ ನಡೆದ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಆಕರ್ಷಕ 145 ರನ್ ಗಳಿಸಿದ್ದಲ್ಲದೆ ಟೂರ್ನಿಯಲ್ಲಿ ಒಟ್ಟು 211 ರನ್‍ಗಳನ್ನು ಕಲೆ ಹಾಕಿದÀ ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಗ್ಲೆನ್‍ಮ್ಯಾಕ್ಸ್‍ವೆಲ್ 16 ಸ್ಥಾನಗಳ ಜಿಗಿತ ಕಂಡು 3ನೆ ಸ್ಥಾನಕ್ಕೇರಿದ್ದಾರೆ.  ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಆರೋನ್ ಪಿಂಚ್ 2ನೆ ಸ್ಥಾನದಲ್ಲಿ ಮುಂದುವರೆದರೆ, ನ್ಯೂಜಿಲೆಂಡ್‍ನ ಮಾರ್ಟಿನ್ ಗುಪ್ಟಿಲ್ 1 ಸ್ಥಾನ ಕುಸಿತ ಕಂಡು 4ನೆ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ನಾಯಕ ಡುಪ್ಲೆಸಿಸ್ ಕೂಡ 4ನೆ ಸ್ಥಾನದಿಂದ 5ನೆ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಟ್ವೆಂಟಿ-20ಯ ಸ್ಪೆಷ್ಟಲಿಸ್ಟ್ ಬ್ಯಾಟ್ಸ್‍ಮೆನ್ ಎಂದೇ ಗುರುತಿಸಿಕೊಂಡಿರುವ ವೆಸ್ಟ್‍ಇಂಡೀಸ್‍ನ ಕ್ರಿಸ್‍ಗೇಲ್ 8ನೆ ಸ್ಥಾನದಿಂದ 10ನೆ ಸ್ಥಾನಕ್ಕೆ ಇಳಿದಿದ್ದಾರೆ.
ಇನ್ನು ಟ್ವೆಂಟಿ-20 ಬ್ಯಾಟ್ಸ್‍ಮನ್‍ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಕೊಹ್ಲಿ ಬಿಟ್ಟರೆ ಯಾವೊಬ್ಬ ಆಟಗಾರ ಕೂಡ ಉತ್ತಮ ಸಾಧನೆ ಪ್ರದರ್ಶಿಸಿಲ್ಲ.

ಬೌಲಿಂಗ್ ವಿಭಾಗದಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ 3ನೆ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇನ್‍ಸ್ಟೇನ್ ನಂಬರ್ 1 ಸ್ಥಾನಕ್ಕೇರಿದರೆ, ಇಂಗ್ಲೆಂಡ್‍ನ ಜೇಮ್ಸ್ ಅಂಡರ್‍ಸನ್ ನಂಬರ್ 1 ಪಟ್ಟ ಕಳೆದುಕೊಂಡು 2ನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.  ಅಲೌಂಡರ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಶೇನ್ ವಾಟ್ಸನ್ ನಂಬರ್ 1 ಆಗಿದ್ದರೆ, ಬಾಂಗ್ಲಾದ ಶಕಿಬ್ ಅಲ್ ಹಸನ್ ಹಾಗೂ ಪಾಕಿಸ್ತಾನದ ಶಹಿದ್ ಆಫ್ರಿದಿ ಕ್ರಮವಾಗಿ ನಂತರ ಸ್ಥಾನಗಳಲ್ಲಿ ಗುರುತಿಸಿಕೊಂಡಿದ್ದಾರೆ. ಭಾರತದ ಯುವರಾಜ್‍ಸಿಂಗ್ 9ನೆ ಸ್ಥಾನವನ್ನು ಅಲಂಕರಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin