ಒಂಟಿ ಮಹಿಳೆ ಕೊಲೆ ಸುಳಿವು ನೀಡಿದ ಶ್ವಾನ : ಕೆಲವೇ ಗಂಟೆಗಳಲ್ಲಿ ಆರೋಪಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

God

ತುಮಕೂರು, ಆ.25-ಒಂಟಿ ಮಹಿಳೆ ಕೊಲೆ ಪ್ರಕರಣ ಭೇದಿಸುವಲ್ಲಿ ಶ್ವಾನವೊಂದು ಪ್ರಮುಖ ಪಾತ್ರವಹಿಸಿದ್ದರಿಂದಲೇ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಲು ಸಹಾಯವಾಗಿದೆ.  ಹೆಬ್ಬೂರು ವ್ಯಾಪ್ತಿಯ ಪನ್ನಸಂದ್ರ ಗ್ರಾಮದ ನಾರಾಯಣಸ್ವಾಮಿ ಅವರ ಪತ್ನಿ ವಿಜಯಲಕ್ಷ್ಮಿಯನ್ನು ಆ.23ರಂದು ದನಮೇಯಿಸಲು ಹೋಗಿದ್ದಾಗ ನಿಗೂಢವಾಗಿ ಕೊಲೆ ಮಾಡಲಾಗಿತ್ತು.  ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರ ಶ್ವಾನ ಎಲ್ಲಾ ಕಡೆ ಸುತ್ತಾಡಿ ಕೊಲೆ ನಡೆದ ಕೆಲವೇ ಅಂತರದಲ್ಲಿ ಗುದ್ದಲಿಯನ್ನು ಪತ್ತೆಹಚ್ಚುವ ಮೂಲಕ ಕೊಲೆಯ ಸುಳಿವು ನೀಡಿತ್ತು.

ಈ ಗುದ್ದಲಿಯಿಂದಲೇ ಈ ಮಹಿಳೆ ಕೊಲೆಯಾಗಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಗುದ್ದಲಿಯ ವಾರಸುದಾರರ ಹುಡುಕಾಟ ನಡೆಸಿದಾಗ ಈ ಗ್ರಾಮದವರಿಂದಲೇ ಹತ್ಯೆನಡೆದಿದೆ ಎಂದು ಖಚಿತ ಪಡಿಸಿಕೊಂಡು ತನಿಖೆ ನಡೆಸಿದಾಗ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣನಾಗಿದ್ದ, ಅಪ್ರಾಪ್ತ ಬಾಲಕನೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.  ಒಟ್ಟಾರೆ ಈ ಘಟನೆಯನ್ನು ಭೇದಿಸುವಲ್ಲಿ ಶ್ವಾನದ ಪಾತ್ರ ಬಹುಮುಖ್ಯ ಪಾತ್ರ ವಹಿಸಿದ್ದು ಈ ಪ್ರಕರಣದಲ್ಲಿ ವಿಶೇಷವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin