ಒಂದಂಕಿ ಲಾಟರಿ ಹಗರಣ : ಸಿಬಿಐ ಬಲೆಗೆ ಇನ್ನಷ್ಟು ಖಾಕಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Lottery

ಬೆಂಗಳೂರು, ಆ.11- ಒಂದಂಕಿ ಲಾಟರಿ ಪ್ರಕರಣ ರಾಜ್ಯದ ಹಲವು ಪೊಲೀಸ್ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.   ಗೃಹಮಂತ್ರಿಗಳ ಸಲಹೆಗಾರರಾದ ಕೆಂಪಯ್ಯ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರ ಹೇಳಿಕೆಯನ್ನು ಸಿಬಿಐ ಮೊನ್ನೆಯಷ್ಟೇ ದಾಖಲಿಸಿಕೊಂಡಿತ್ತು. ಇದೀಗ ಸಿಬಿಐ, ಡಿವೈಎಸ್ಪಿ ಚಲಪತಿ, ಸೆಲ್ವಂ, ಪುಟ್ಟಮಾದಯ್ಯ, ಇನ್ಸ್‍ಪೆಕ್ಟರ್ ಬಾಲಕೃಷ್ಣ ಮತ್ತು ಎಸ್‍ಐ ಪರಮೇಶ್ವರ್ ಅವರನ್ನು ವಿಚಾರಣೆಗೆ ಒಳಪಡಿಸಲಿದೆ.  ಒಟ್ಟು 33 ಅಧಿಕಾರಿಗಳ ಮೊಬೈಲ್ ಸಂಖ್ಯೆಗಳು ಒಂದಂಕಿ ಲಾಟರಿ ಹಗರಣದ  ಪ್ರಮುಖ ಆರೋಪಿ ಪಾರಿರಾಜನ್‍ನ ಕಾಲ್ ಡೀಟೇಲ್ ರೆಕಾಡ್ರ್ಸ್‍ನಲ್ಲಿ ಸಿಕ್ಕಿದ್ದು, ಒಬ್ಬರಾದ ಮೇಲೊಬ್ಬರ ಹೇಳಿಕೆಗಳನ್ನು ಸಿಬಿಐ ದಾಖಲಿಸುತ್ತಿದೆ. ಈಗಾಗಲೇ 12 ಪೊಲೀಸ್ ಅಧಿಕಾರಿಗಳ ವಿಚಾರಣೆ ಮುಗಿದಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಜತೆಗೆ ಇನ್ನೂ ಕೆಲವು ಐಜಿಪಿ ಮತ್ತು ಎಡಿಜಿಪಿ ದರ್ಜೆಯ ಅಧಿಕಾರಿಗಳಿಗೆ ಕೂಡ ನೊಟೀಸ್ ಜಾರಿಗೊಳಿಸಿದ್ದು, ದೆಹಲಿಯ ಕೇಂದ್ರ ಕಚೇರಿಗೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin