ಒಂದೇ ಒಂದು ಸಂಪುಟ ಸಭೆ ನಡೆಸದೇ 50 ನಿರ್ಧಾರ ಕೈಗೊಂಡ ಯೋಗಿ..!

ಈ ಸುದ್ದಿಯನ್ನು ಶೇರ್ ಮಾಡಿ

Yogi-Adityanath

ಲಕ್ನೋ, ಮಾ.27- ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕಠಿಣ ನಿರ್ಧಾರಗಳಿಂದ ಇಡೀ ದೇಶಾದ್ಯಂತ ಸುದ್ದಿಯಾಗಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಈಗ ದಾಖಲೆಯೊಂದಕ್ಕೆ ಮುನ್ನಡಿ ಬರೆಯಲು ಹೊರಟಿದ್ದಾರೆ. ಒಂದೇ ಒಂದು ಸಂಪುಟ ಸಭೈಯನ್ನೂ ನಡೆಸದೇ 50 ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಂಡಿರುವ ಅವರು ಘಟಾನುಘಟಿ ರಾಜಕಾರಣಿಗಳ ಹುಬ್ಬೇರುವಂತೆ ಮಾಡಿದ್ದಾರೆ.   ಸಾರ್ವಜನಿಕ ಸ್ಥಳದಲ್ಲಿ ಬೀದಿ ಕಾಮಣ್ಣರ ನಿಗ್ರಹಕ್ಕೆ ಆಂಟಿ ರೋಮಿಯೋ ದಳ ರಚನೆ, ಅಕ್ರಮ ಕಸಾಯಿಖಾನೆಗಳಿಗೆ ಬೀಗ ಮುದ್ರೆ, ಗೋವು ಕಳ್ಳಸಾಗಣೆ ನಿಷೇಧದ ಮೂಲಕ ಈಗಾಗಲೇ ದೇಶದ ಗಮನಸೆಳೆದಿರುವ ಯೋಗಿ, ಈಗ ಕೈಗೊಂಡಿರುವ 50 ಆಡಳಿತಾತ್ಮಕ ನಿರ್ಧಾರಗಳು ಬಗ್ಗೆ ವಿವಿಧ ವಲಯಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಸರ್ಕಾರಿ ಕಚೇರಿಗಳಲ್ಲಿ ಪಾನ್ ಮಸಾಲ ಮತ್ತು ಪಾಲಿಥಿನ್ ನಿಷೇಧ, ಅಲಹಾಬಾದ್, ಮೀರತ್, ಆಗ್ರಾ, ಗೋರಖ್‍ಪುರ್‍ನಲ್ಲಿ ಮೆಟ್ರೋ ರೈಲು ಯೋಜನೆ, ಕೈಲಾಸ್ ಮಾನಸ ಸರೋವರ್ ಅಭಿವೃದ್ದಿ ಯೋಜನೆ, ಭದ್ರತೆಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ, ಜೂನ್ ವೇಳೆ ರಾಜ್ಯದ ಎಲ್ಲ ರಸ್ತೆಗಳು ಹಳ್ಳ ಮುಕ್ತಗೊಳಿಸುವ ಯೋಜನೆಗಳಿಗೆ ಭಾರೀ ಬೆಂಬಲ ಲಭಿಸಿದ್ದರೂ, ಕೆಲವು ಕಾರ್ಯಕ್ರಮಗಳಿಗೆ ವಿರೋಧಪಕ್ಷಗಳು ಮತ್ತು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಕಸಾಯಿಖಾನೆಗಳಿಗೆ ಬೀಗಮುದ್ರೆ ಜಡಿದಿರುವುದರಿಂದ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದು ಮಾಂಸ ಮಾರಾಟಗಾರರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾವು ಕೈಗೊಂಡಿರುವ ನಿರ್ಧಾರಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಜನಪ್ರತಿನಿಧಿಗಳು ಮತ್ತು ಪೊಲೀಸರು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಯೋಗಿ ಕಟ್ಟಪ್ಪಣೆ ಮಾಡಿದ್ದಾರೆ. ಅಲ್ಲದೇ 20 ಗಂಟೆಗಳ ಕಾಲ ದುಡಿಯುವ ಮಂದಿಯನ್ನು ಸರ್ಕಾರ ಸ್ವಾಗತಿಸುತ್ತದೆ. ಸೋಮಾರಿಗಳಿಗೆ ಇಲ್ಲಿ ಅವಕಾಶ ಇಲ್ಲ ಎಂದೂ ಗುಡುಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin