ಒಂದೇ ದಿನದಲ್ಲಿ 20 ಜನರನ್ನು ಗಲ್ಲಿಗೇರಿಸಿದ ಇರಾನ್ ಸರ್ಕಾರ
ಈ ಸುದ್ದಿಯನ್ನು ಶೇರ್ ಮಾಡಿ
ಟೆಹರಾನ್,ಆ.4- ವಿವಿಧ ಕೊಲೆಗಳು ಮತ್ತು ರಾಷ್ಟ್ರೀಯ ಭದ್ರತೆ ವಿಷಯಗಳ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದ 20 ಮಂದಿ ಉಗ್ರರನ್ನು ಇರಾನ್ ಸರ್ಕಾರ ಇಂದು ಒಂದೇ ದಿನದಲ್ಲಿ ಗಲ್ಲಿಗೇರಿಸಿದೆ. ಈ ವ್ಯಕ್ತಿಗಳು ದೇಶದಲ್ಲಿ ಅನೇಕ ಮಕ್ಕಳು, ಮಹಿಳೆಯರನ್ನು ಹತ್ಯೆ ಮಾಡಿದ್ದರು. ಅಲ್ಲದೆ ಭದ್ರತಾ ಪಡೆಗಳ ವಿರುದ್ದ ಕೂಡ ಕಾರ್ಯಾಚರಣೆ ನಡೆಸಿ ಕೆಲವು ಮಂದಿ ಯೋಧರನ್ನು ಪತ್ತೆ ಮಾಡಿದ್ದರು. ಕುರ್ದೀಶ್ ಪ್ರಾಂತ್ಯದಲ್ಲಿ ಉಗ್ರರ ಉಪಟಳ ಅಧಿಕವಾಗಿದೆ ಎಂದು ಪ್ರಾಸಿಕ್ಯೂಟರ್ ಜನರಲ್ ಮೊಹಮ್ಮದ್ ಜಾವೇದ್ ತಿಳಿಸಿದ್ದಾರೆ.
Facebook Comments