ಒಂದೇ ದಿನ ಪ್ರಾಣ ಬಿಟ್ಟ ಅಮ್ಮ-ಮಗಳು : ಮಗಳ ಶವ ನೋಡಿ ತಾಯಿ ಹೃದಯಾಘಾತದಿಂದ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

Mother--01
ಕೊಪ್ಪಳ, ಏ.7- ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ಮಗಳ ಶವವನ್ನು ಮನೆಗೆ ತರುತ್ತಿದ್ದಂತೆ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕ ಬೆಣಕಲ್‍ನ ಈರವ್ವ (55) ಮತ್ತು ಹುಚ್ಚವ್ವ (85) ಮೃತಪಟ್ಟವರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಈರವ್ವ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ, ಚಿಕಿತ್ಸೆ ಫಲಿಸದೆ ಈರವ್ವ ಮೃತಪಟ್ಟಿದ್ದಾರೆ. ರಾತ್ರಿ ಮಗಳ ಶವದೊಂದಿಗೆ ತಾಯಿ ಹುಚ್ಚವ್ವ ಮನೆಗೆ ಬರುತ್ತಿದ್ದಂತೆ ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಒಂದೇ ದಿನ ತಾಯಿ-ಮಗಳನ್ನು ಕಳೆದುಕೊಂಡ ಕುಟುಂಬವರ್ಗದವರ ರೋದನ ಮನಕಲಕುವಂತಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin