ಒಂದೇ ರಾಕೆಟ್’ನಲ್ಲಿ 83 ಉಪಗ್ರಹಗಳನ್ನು ಉಡಾಯಿಸಿ ಹೊಸ ದಾಖಲೆ ಬರೆಯಲು ಇಸ್ರೋ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ISRO-01

ಚೆನ್ನೈ,ಅ.29-ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಮಹತ್ವದ ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಇಸ್ರೋ ಇದೀಗ ಮತ್ತೊಂದು ವಿಶ್ವ ದಾಖಲೆಗೆ ಸಿದ್ಧವಾಗಿದೆ. ಮುಂದಿನ ವರ್ಷ ಒಂದೇ ರಾಕೆಟ್ ಮೂಲಕ ಒಟ್ಟಿಗೆ 83 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಸಿದ್ಧತೆ ನಡೆಸಿದೆ. ಭಾರತದ 2 ಹಾಗೂ ವಿದೇಶದ 81 ಉಪಗ್ರಹಗಳನ್ನು ಒಂದೇ ರಾಕೆಟ್ ಮೂಲಕ ಕಕ್ಷೆಗೆ ಸೇರಿಸುವ ಐತಿಹಾಸಿಕ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು, 2017ರ ಆರಂಭದಲ್ಲಿ ಪೂರ್ಣಗೊಳಿಸಲಿದೆ ಎಂದು ಆಂತ್ರಿಕ್ಸ್ ಕಾರ್ಪೊರೇಷನ್  ಮೂಲಗಳು ತಿಳಿಸಿವೆ.
2017ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸಿಂಗಲ್ ರಾಕೆಟ್ ಮೂಲಕ 83 ಉಪಗ್ರಹ ಉಡಾವಣೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ವಿದೇಶದ ನ್ಯಾನೋ ಸೆಟ್‍ಲೈಟ್‍ಗಳನ್ನೂ ಕೂಡ ಉಡಾವಣೆ ಮಾಡಲಾಗುವುದು ಎಂದು ಆಂತ್ರಿಕ್ಸ್ ಕಾರ್ಪೊರೇಷನ್  ಸಂಸ್ಥೆಯ ಅಧ್ಯಕ್ಷ ರಾಕೇಶ್ ಮಾಹಿತಿ ನೀಡಿದ್ದಾರೆ.

ಇಸ್ರೋದ ಕಮರ್ಷಿಯಲ್ ಅಂಗವೇ ಈ ಆಂತ್ರಿಕ್ಸ್ ಕಾರ್ಪೊರೇಷನ್ . ಒಂದೇ ರಾಕೆಟ್ 83 ಉಪಗ್ರಹಗಳನ್ನು ಒಂದೇ ಕಕ್ಷೆಗೆ ಸೇರಿಸಲಿದೆ. ಪಿಎಸ್‍ಎಲ್‍ವಿ ಪಿಐ ರಾಕೆಟ್ ಮೂಲಕ ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಇಸ್ರೋ ಒಂದೇ ಬಾರಿ ಹಲವು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಆದರೆ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು 83 ಉಪಗ್ರಹಗಳನ್ನು ಉಡಾಯಿಸಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin