ಒಂದೇ ರಾತ್ರಿಯಲ್ಲಿ 83 ಕುಡುಕ ಚಾಲಕರ ಪರವಾನಗಿ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

Drunkಬೆಂಗಳೂರು, ಸೆ.25– ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ಪೊಲೀಸರು ಎಷ್ಟೇ ಬೊಬ್ಬೆ ಹೊಡೆದುಕೊಂಡರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ರಾತ್ರಿ ವೇಳೆ ರಸ್ತೆ-ರಸ್ತೆಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ ಪೊಲೀಸರು ಕುಡಿದು ವಾಹನ ಚಾಲನೆ ಮಾಡುವವರ ತಪಾಸಣೆ ನಡೆಸುತ್ತಿರುವುದು ಮಾಮೂಲು. ಆದರೂ ನಗರದಲ್ಲಿ ಕುಡಿದು ವಾಹನ ಚಲಾಯಿಸುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಅದರಲ್ಲೂ ಮುಖ್ಯವಾಗಿ ವೀಕೆಂಡ್ಗಳಲ್ಲಿ ಪುರುಷರು, ಮಹಿಳೆಯರು ಕುಡಿದು ವಾಹನ ಚಲಾಯಿಸುವುದು, ಪ್ರಶ್ನಿಸಲು ಬಂದ ಪೊಲೀಸರಿಗೆ ಆವಾಜ್ ಹಾಕುವುದು ನಿಂತಿಲ್ಲ.

ನಿನ್ನೆ ರಾತ್ರಿ ನಗರದೆಲ್ಲೆಡೆ ಪೊಲೀಸರು ನಾಕಾಬಂದಿ ಹಾಕಿ ಕುಡಿದು ವಾಹನ ಚಲಾಯಿಸುವವರ ವಾಹನಗಳನ್ನು ತಪಾಸಣೆ ನಡೆಸಿದರು. ನಿನ್ನೆ ರಾತ್ರಿ 118 ಚಾಲಕರ ವಿರುದ್ಧ ಕುಡಿದು ವಾಹನ ಚಲಾಯಿಸಿದ ಪ್ರಕರಣ ದಾಖಲಿಸಿದ್ದರೆ, 83 ಚಾಲಕರ ವಾಹನ ಪರವಾನಗಿ ರದ್ದುಪಡಿಸಲಾಗಿದೆ. 35 ಚಾಲಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕುಡಿದು ವಾಹನ ಓಡಿಸುವವರ ಸಂಖ್ಯೆ ಪ್ರತಿನಿತ್ಯ ಏರುತ್ತಲೇ ಇರುವುದರಿಂದ 3500ರೂ.ಗಳಿದ್ದ ದಂಡದ ಹಣವನ್ನು 10,000ರೂ.ಗಳಿಗೆ ಹೆಚ್ಚಳ ಮಾಡಿದರೂ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗದಿರುವುದು ಪೊಲೀಸರ ನಿದ್ದೆಗೆಡಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin