ಒಂದೇ ರಾತ್ರಿ ಮೂರು ದೇವಾಲಯಗಳಲ್ಲಿ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

ROBBERY
ದಾವಣಗೆರೆ, ಸೆ.28- ಕಳೆದ ರಾತ್ರಿ ತಾಲ್ಲೂಕಿನ ಶ್ಯಾಗಲೆ ಗ್ರಾಮದಲ್ಲಿ ಮೂರು ದೇವಾಲಯಗಳಲ್ಲಿ ಕಳ್ಳತನ ನಡೆದಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.ಗ್ರಾಮದ ಇಂಗಳಾರಮ್ಮ ದೇವಸ್ಥಾನ ಶ್ಯಾಗಲೆ ಕ್ಯಾಂಪ್‍ನಲ್ಲಿ ಗಣೇಶ ದೇವಾಲಯ ಹಾಗೂ ಪಕ್ಕದ ಅಶೋಕ ನಗರದಲ್ಲಿರುವ ಶ್ರೀ ರಾಮ ದೇವಸ್ಥಾನಕ್ಕೆ ನುಗ್ಗಿರುವ ಹುಂಡಿ, ದೇವರ ಆಭರಣಗಳು ಸೇರಿದಂತೆ ಹಲವು ವಸ್ತುಗಳನ್ನು ದೋಚಿದ್ದಾರೆ.ಮೂರು ದೇವಾಲಯಗಳಲ್ಲಿ ಗರ್ಭಗುಡಿಯ ಬೀಗ ಒಡೆದು ದೇವರ ಪೂಜೆಗೆ ಬಳಸುವ ಸಾಮಗ್ರಿಗಳನ್ನು ಕೂಡ ದೋಚಲಾಗಿದೆ. ಕಳೆದ 20 ದಿನಗಳ ಹಿಂದೆಯಷ್ಟೇ ದೇವಾಲಯದ ಕಾವಲುಗಾರನನ್ನು ಕೊಲೆ ಮಾಡಲಾಗಿತ್ತು. ಅಂದಿನಿಂದ ಇಲ್ಲಿ ಆತಂಕದ ವಾತಾವರಣ ಮುಂದುವರೆದಿತ್ತು.

ಆದರೆ ಈಗ ಕಳ್ಳತನ ನಡೆದಿರುವುದು ನೋಡಿದರೆ ಯಾರೋ ಹೊಂಚು ಹಾಕಿ ಈ ದೇವಾಲಯದಲ್ಲಿರುವ ಪುರಾತನ ವಿಗ್ರಹಗಳು ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಒಂದೇ ತಂಡ ಈ ಕೃತ್ಯವನ್ನು ನಡೆಸಿರಬಹುದೆಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಗ್ರಾಮದಲ್ಲೀಗ ಭಯದ ವಾತಾವರಣ ಸೃಷ್ಟಿಯಾಗಿದೆ. ಹದಡಿ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

► Follow us on –  Facebook / Twitter  / Google+

 

 

Facebook Comments

Sri Raghav

Admin