ಒಂಭತ್ತು ಹೋರಾಟಗಾರರಿಗೆ ಬಿಡುಗಡೆ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

nine

ಇಳಕಲ್,ಸೆ.26- ಸ್ಥಳೀಯ ನಗರಸಭೆಯ ಸ್ವಯಂ ಘೋಷಿತ ಆಸ್ತಿ ತೆರಿಗೆ ವಸೂಲಿಯಲ್ಲಿಯ ತಪ್ಪುಗಳನ್ನು ಸಂಪೂರ್ಣವಾಗಿ ಸರಿಪಡಿಸುವಂತೆ ಒತ್ತಾಯಿಸಿ ಬಂಧನಕ್ಕೊಳಗಾಗಿದ್ದ ಒಂಭತ್ತು ಹೋರಾಟಗಾರರು ಒಂಭತ್ತು ದಿನ ಜೈಲುವಾಸ ಅನುಭವಿಸಿ ಬಿಡುಗಡೆ ಭಾಗ್ಯ ಹೊಂದಿದ್ದಾರೆ. ಬಿಡುಗಡೆಯಾಗಿ ನಗರಕ್ಕೆ ಬಂದ ಪ್ರಯುಕ್ತ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.ನಿನ್ನೆ ಬಿಡುಗಡೆಯಾದ ನಾಗರಾಜ ಹೊಂಗಲ್, ಯಲ್ಲಪ್ಪ ಪೂಜಾರಿ, ಮಲ್ಲು ಮಡಿವಾಳರ, ಮಹಾಂತೇಶ ಸಮಾಳದ, ತುಕಾರಾಂ ಭಂಜತ್ರಿ, ಜಗದೀಶ ಸರಾಫ್, ಪ್ರಲಾದ ವೀರಾಪೂರ, ನಾಗರಾಜ ನಗರಿ ಅವರನ್ನು ನಗರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಕಂಚಿನ ಪುತ್ಥಳಿಗೆ ಮತ್ತು ಕಂಠಿ ವೃತ್ತದ ಎಸ್.ಆರ್. ಕಂಠಿ ಮೂರ್ತಿಗೆ ಮಾಲೆ ಹಾಕಿದ ನಂತರ ಶ್ರೀಮಠಕ್ಕೆ ಬಂದು ಅಲ್ಲಿ ಡಾ. ಮಹಾಂತ ಶ್ರೀಗಳ, ಗುರುಮಹಾಂತ ಶ್ರೀಗಳ ಆರ್ಶೀವಾದ ಪಡೆದರು.

ಅಲ್ಲಿ ನಾಗರಾಜ ಹೊಂಗಲ, ಮಲ್ಲು ಮಡಿವಾಳ, ಯಲ್ಲಪ್ಪ ಪೂಜಾರಿ ಇತರರು ನಿಮ್ಮಗಳ ಆರ್ಶೀವಾದ ಹಾಗೂ ಶ್ರೀರಕ್ಷೆ ನ್ಯಾಯಯುತ್ತ ಹೋರಾಟಗಾರರ ಮೇಲೆ ಇರಲಿ ಎಂದಾಗ ಶ್ರೀಗಳು ಬಸವಾದಿ ಪ್ರಮಥರ ಹಾಗೂ ವಿಜಯ ಮಹಾಂತ ಶಿವಯೋಗಿಗಳ ಆರ್ಶೀವಾದ ಸದಾ ಕಾಲ ನಿಮ್ಮಗಳ ಮೇಲೆ ಇದೆ ಎಂದು ನುಡಿದರು. ಬಸವೇಶ್ವರ ವೃತ್ತದಲ್ಲಿ ಹೋರಾಟಗಾರನ್ನು ಬೆಂಬಲಿಸಿ ಅವರ ಬೆಂಬಲಿಗರು ಆಪಾರ ಸಂಖ್ಯೆಯಲ್ಲಿ ಸೇರಿ ಹೋರಾಟಗಾರರಿಗೆ ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಭವ್ಯವಾಗಿ ಸ್ವಾಗತಿಸಿದರು.ಬಂಧಿತರಲ್ಲಿ ಒಬ್ಬರಾದ ರವಿ ಅಂಗಡಿ ಎಂಬಾತನನ್ನು ಬಿಡುಗಡೆಯಾದ ನಂತರ ಕುಟುಂಬದವರು ನೇರವಾಗಿ ತಮ್ಮ ನಿವಾಸಕ್ಕೆ ಕರೆದುಕೊಂಡು ಹೊದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin