ಒಎನ್‌ಜಿಸಿ ದೆಹಲಿ ತಂಡಕ್ಕೆ ಮೇಯರ್ ಕಪ್ ಕಬಡ್ಡಿ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

meyar-cup
ಬೆಂಗಳೂರು, ಆ.29- ಪ್ರೋ ಕಬಡ್ಡಿ ತಂಡದ ಆಟಗಾರನ್ನೊಳಗೊಂಡ ದೆಹಲಿ ಒಎನ್‌ಜಿಸಿ ತಂಡ ಮೇಯರ್ ಕಪ್ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.  ಬಿಟಿಎಂ ಬಡಾವಣೆಯ ಆಟದ ಮೈದಾನದಲ್ಲಿ ಕಳೆದ 4 ದಿನಗಳಿಂದ ನಡೆದ ಹೊನಲು ಬೆಳಕಿನ ಮೇಯರ್ ಕಪ್ ಕಬಡ್ಡಿ ಪಂದ್ಯಾವಳಿಯ ಫೈನಲ್‌ನಲ್ಲಿ ಡೆಲ್ಲಿ ಒಎನ್‌ಜಿಸಿ ಮತ್ತು ಪ್ರಬಲ ಏರ್ ಇಂಡಿಯಾ ತಂಡಗಳ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ ಒಎನ್‌ಜಿಸಿ ತಂಡ ಗೆಲುವು ಸಾಸಿತು.  ದ್ವಿತೀಯ ಸ್ಥಾನ ಪಡೆದ ಏರ್ ಇಂಡಿಯಾ ತಂಡ 2 ಲಕ್ಷ ನಗದು, 3ನೆ ಸ್ಥಾನ ಪಡೆದ ಎಸ್‌ಬಿಎಂ ಬೆಂಗಳೂರು ಹಾಗೂ 4ನೆ ಸ್ಥಾನ ಪಡೆದ ಹೈಟೆಕ್ ಚೆನ್ನೈ ತಂಡ 1 ಲಕ್ಷ ರೂ.ಗಳ ನಗದು ಬಹುಮಾನ ಪಡೆದುಕೊಂಡವು.

ಸೌತ್ ಸೆಂಟ್ರಲ್ ರೈಲ್ವೇಸ್ ಮತ್ತು ವೆಸ್ಟರ್ನ್ ರೈಲ್ವೇಸ್ ಮಹಿಳಾ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಸೌಂತ್ ಸೆಂಟ್ರಲ್ ರೈಲ್ವೇಸ್ ಪ್ರಥಮ ಸ್ಥಾನ ಪಡೆಯುವ ಮೂಲಕ 2.5 ಲಕ್ಷ ಬಹುಮಾನ ಪಡೆದುಕೊಂಡರೆ ವೆಸ್ಟರ್ನ್ ರೈಲ್ವೇಸ್ 1.5 ಲಕ್ಷದೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಮೂರನೆ ಸ್ಥಾನ ಪಡೆದುಕೊಂಡ ಗುರುಕುಲ್ ಹರಿಯಾಣ ಹಾಗೂ 4 ನೆ ಸ್ಥಾನ ಪಡೆದ ಎಸ್‌ಎಂಸಿ ದಿಂಡಗಲ್ ತಂಡ ತಲಾ 1 ಲಕ್ಷ ರೂ.ಗಳ ಬಹುಮಾನವನ್ನು ತನ್ನದಾಗಿಸಿಕೊಂಡವು. ಕಳೆದ 25 ರಿಂದ ಆರಂಭಗೊಂಡ ಮೇಯರ್ ಕಪ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ರಾಷ್ಟ್ರದ 10 ಪ್ರಬಲ ತಂಡಗಳು ಸೇರಿದಂತೆ 34 ಪುರುಷ ತಂಡಗಳು, 30 ಮಹಿಳಾ ತಂಡಗಳು ಪಾಲ್ಗೊಂಡಿದ್ದವು. 4 ದಿನಗಳ ಕಾಲ ನಡೆದ ರೋಚಕ ಹಣಾಹಣಿಯಿಂದ ಕೂಡಿದ ಪಂದ್ಯಾವಳಿ ಗಳು ಈ ಭಾಗದ ಜನರಿಗೆ ಕ್ರೀಡೆಯ ರಸದೌತಣ ಉಣಬಡಿಸುವಲ್ಲಿ ಯಶಸ್ವಿಯಾಯಿತು.  ವಿಜೇತ ತಂಡಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಮಂಜುನಾಥ ರೆಡ್ಡಿಬಹುಮಾನ ವಿತರಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin