ಒಕ್ಕಲಿಗ ಮತಗಳನ್ನು ಸೆಳೆಯಲು 6 ಬಿಜೆಪಿ ಶಾಸಕರ ಬ್ರಿಗೇಡ್ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

BJP-Okkaliga

ಬೆಂಗಳೂರು,ಮಾ.16- ಮುಂದಿನ ವಿದಾನಸಭೆ ಚುನಾವಣೆಯಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯಲು ಮುಂದಾಗಿರುವ ಬಿಜೆಪಿ ಇದಕ್ಕಾಗಿ ಆರು ಮಂದಿ ಶಾಸಕರ ನೇತೃತ್ವದಲ್ಲಿ ಕಾರ್ಯತಂತ್ರವೊಂದನ್ನು ಹೆಣೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆಯಂತೆ ಒಕ್ಕಲಿಗ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು 6 ಮಂದಿ ಶಾಸಕರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗಿದೆ.   ಶಾಸಕರಾದ ಮುನಿರಾಜು, ವೈ.ಎ.ನಾರಾಯಣಸ್ವಾಮಿ, ಡಾ.ಅಶ್ವಥ್ ನಾರಾಯಣ, ಸತೀಶ್ ರೆಡ್ಡಿ , ಎಸ್.ಆರ್.ವಿಶ್ವನಾಥ್ ಮತ್ತು ಸುರೇಶ್‍ಗೌಡ ಅವರ ನೇತೃತ್ವದಲ್ಲಿ ಒಕ್ಕಲಿಗ ಬ್ರಿಗೇಡ್ ಕಟ್ಟಲಾಗಿದೆ.

ಈ ಆರು ಮಂದಿ ಶಾಸಕರು ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮತಗಳನ್ನು ಸೆಳೆದು ಹೆಚ್ಚಿನ ಸ್ಥಾನ ಗಳಿಸಲು ಕಾರ್ಯತಂತ್ರ ಹೆಣೆಯಲಾಗಿದೆ.   28 ಕ್ಷೇತ್ರಗಳನ್ನು ಒಳಗೊಂಡಿರುವ ರಾಜಧಾನಿ ಬೆಂಗಳೂರಿಗೆ ದಾಸರಹಳ್ಳಿ ಶಾಸಕ ಎಸ್.ಮುನಿರಾಜು ಮತ್ತು ಡಾ.ಅಶ್ವಥ್ ನಾರಾಯಣ ಅವರನ್ನು ನಿಯೋಜಿಸಲಾಗಿದೆ.   ಹೆಬ್ಬಾಳ ಕ್ಷೇತ್ರದ ಶಾಸಕ ವೈ.ಎ.ನಾರಾಯಣಸ್ವಾಮಿ ಹಾಗೂ ಯಲಹಂಕದ ಎಸ್.ವಿಶ್ವನಾತ್ ಅವರಿಗೆ ಚಿಕ್ಕಬಳ್ಳಾಪುರ-ಕೋಲಾರ, ಸುರೇಶ್ ಗೌಡಗೆ ತುಮಕೂರು ಜಿಲ್ಲೆಯನ್ನು ನೀಡಲಾಗಿದೆ.

ಮಾಜಿ ಶಾಸಕ ಬಚ್ಚೇಗೌಡ ಜೊತೆಗೆ ಸತೀಶ್ ರೆಡ್ಡಿ ಅವರಿಗೆ ಬೆಂಗಳೂರು ಗ್ರಾಮಾಂತರ ನೀಡಿದರೆ ಮಂಡ್ಯ ಮತ್ತು ರಾಮನಗರ ಜಿಲ್ಲೆ ಹೊಣೆಗಾರಿಕೆಯನ್ನು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರಿಗೆ ವಹಿಸಲಾಗಿದೆ.   ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಜಾತಿ, ಪ್ರದೇಶವಾರು ಸಿದ್ಧಪಡಿಸಿರುವ ರಾಷ್ಟ್ರೀಯ ನಾಯಕರು ಒಕ್ಕಲಿಗ ಮತಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಏಕೆಂದರೆ ಲಿಂಗಾಯಿತ ಮತಗಳು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುವುದು ಖಚಿತವಾಗಿದೆ.   ಇದರ ಜೊತೆಗೆ ಒಕ್ಕಲಿಗ ಮತಗಳನ್ನು ಸೆಳೆದರೆ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬಹುದು ಎಂಬ ಲೆಕ್ಕಾಚಾರ ರಾಷ್ಟ್ರೀಯ ನಾಯಕರದ್ದು. ಹೀಗಾಗಿ ಪ್ರತಿಯೊಂದು ಜಾತಿಗಳ ಮತಗಳನ್ನು ಕ್ರೋಢೀಕರಿಸಲು ಸಜ್ಜಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin