ಒಡಿಶಾ ರಾಜಧಾನಿ ಭುವನೇಶ್ವರದ ಆಸ್ಪತ್ರೆಯೊಂದರಲ್ಲಿ ಅಗ್ನಿ ದುರಂತ : 22 ಮಂದಿ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

22-Dead ಭುವನೇಶ್ವರ. ಅ.18 : ಒಡಿಶಾ ರಾಜಧಾನಿ ಭುವನೇಶ್ವರದ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ 22 ಮಂದಿ ಸಜೀವ ದಹನವಾಗಿದ್ದಾರೆ. ಭುವನೇಶ್ವರದಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಎಸ್‌ಯುಎಂ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ಡಯಾಲಿಸಿಸ್‌ ವಾರ್ಡ್‌ನಲ್ಲಿ ಕಾಣಿಸಿಕೊಂಡ ಬೆಂಕಿ ತೀವ್ರ ನಿಗಾ ಘಟಕಕ್ಕೂ ವ್ಯಾಪಿಸಿದೆ. ನಿಯಂತ್ರಣಕ್ಕೂ ಬಾರದ ಬೆಂಕಿ ಆಸ್ಪತ್ರೆಯಾದ್ಯಂತ ವ್ಯಾಪಿಸುತ್ತಿದ್ದಂತೆ ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ಜೀವಭಯದಿಂದ ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಓಡಿದರು.

22-Dead-2

ಸ್ಥಳಕ್ಕೆ 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಮತ್ತು 10 ಅಂಬ್ಯುಲೆನ್ಸ್‌ಗಳು ಧಾವಿಸಿ ಕಾರ್ಯಾಚರಣೆ ನಡೆಸಿವೆ. ಗಾಯಾಳುಗಳಲ್ಲಿ 9 ಮಂದಿಯನ್ನು ಭುವನೇಶ್ವರದಲ್ಲಿರುವ ಏಮ್ಸ್‌ಗೆ ದಾಖಲಿಸಲಾಗಿದೆ. ಉಳಿದ 31 ಮಂದಿಯನ್ನು ಬೇರೆ-ಬೇರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಕಲ ವ್ಯವಸ್ಥೆ ಮಾಡುವಂತೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಗೆ ಸೂಚಿಸಿದ್ದಾರೆ. ಅಲ್ಲದೇ ಮೃತರೋಗಿಗಳ ಸಂಬಂಧಿಗಳಿಗೆ ಸಾಂತ್ವನ ಹೇಳಿದ್ದಾರೆ. 2011ರ ಡಿಸೆಂಬರ್‌ನಲ್ಲಿ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿರುವ ಎಎಂಆರ್‌ಐ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ 89 ಮಂದಿ ಬಲಿಯಾಗಿದ್ದರು. ಬೆಂಕಿ ಕಾಣಿಸಿಕೊಂಡ ಬಳಿಕ ಹರಡಿದ ಕಾರ್ಬನ್‌ ಮೊನಾಕ್ಸೈಡ್‌ನಿಂದ ಉಸಿರುಗಟ್ಟಿ ಮೃತಪಟ್ಟಿದ್ದರು.

22-Dead-1

ತನಿಖೆ : ಈ ಘೋರ ದುರಂತ ಬೆನ್ನಲ್ಲೇ ಒಡಿಶಾ ಸರ್ಕಾರ ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ದುರಂತ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ನಿರ್ದೇಶನ ನೀಡಿದೆ.

ಈ ವರೆಗೆ ಸಂಭವಿಸಿದ ಭೀಕರ ಅಗ್ನಿ ದುರಂತಗಳು :

 • ಫೆಬ್ರವರಿ 2013, ಕೋಲ್ಕತ್ತಾ: ಬಹು ಮಹಡಿ ಮಾರ್ಕೆಟ್‌ ಸಂಕೀರ್ಣದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 19 ಮಂದಿ ದುರ್ಮರಣ. ಹಲವಾರು ಮಂದಿಗೆ ಗಾಯ.
 • ಸೆಪ್ಟೆಂಬರ್‌, 2012, ತಮಿಳುನಾಡು: ಪಟಾಕಿಗೆ ಹೆಸರುವಾಸಿಯಾಗಿರುವ ಶಿವಕಾಶಿಯ ಮುಡಲಿಪಟ್ಟಿಯಲ್ಲಿ ಪಟಾಕಿ ಸ್ಫೋಟಗೊಂಡು 54 ಮಂದಿ ಸಾವು. 78 ಮಂದಿ ಗಾಯಗೊಂಡಿದ್ದರು.
 • 9 ಡಿಸೆಂಬರ್‌ 2011, ಕೋಲ್ಕತ್ತಾ: ಕೋಲ್ಕತ್ತಾದಲ್ಲಿರುವ ಎಎಂಆರ್‌ಐ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದಲ್ಲಿ 95 ಮಂದಿ ಬಲಿಯಾದರು. ಬೆಂಕಿ ಕಾಣಿಸಿಕೊಂಡ ಪರಿಣಾಮ ವಿಷಪೂರಿತ ಕಾರ್ಬನ್‌ ಮೊನಾಕ್ಸೈಡ್‌ಗೆ ಉಸಿರುಗಟ್ಟಿ ಸಾವನ್ನಪಿದ್ದರು.
 • 23 ಮಾರ್ಚ್‌ 2010, ಕೋಲ್ಕತ್ತಾ: ಪಾರ್ಕ್‌ಸ್ಟ್ರೀಟ್‌ನಲ್ಲಿರುವ ಐತಿಹಾಸಿಕ ಕಟ್ಟಡ ಸ್ಟೀಫನ್ ಕೋರ್ಟ್‌‌ನಲ್ಲಿ ಅಗ್ನಿ ಅನಾಹುತ ಸಂಭವಿಸಿ 42 ಮಂದಿ ಸಾವು. ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಲ್ಲಿ ಬೇರೆ ಮಾರ್ಗವಿಲ್ಲದ ಕಾರಣ ಉಸಿರುಗಟ್ಟಿ ಹಲವರು ಸಾವು
 • ಏಪ್ರಿಲ್‌ 2006, ಮೀರತ್‌: ಉತ್ತರಪ್ರದೇಶದ ಮೀರತ್‌ ಜಿಲ್ಲೆಯಲ್ಲಿ ಮೀರತ್‌ ವಿಕ್ಟೋರಿಯಾ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಗ್ರಾಹಕ ಮೇಳದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ದುರಂತ ಸಂಭವಿಸಿತು. ದುರಂತದಲ್ಲಿ ಸುಮಾರು 65 ಮಂದಿ ಬಲಿಯಾದರು.
 • ಸೆಪ್ಟೆಂಬರ್‌ 2005, ಬಿಹಾರ: ಬಿಹಾರದ ಖುಸ್ರೋಪುರ್‌ ಎಂಬಲ್ಲಿ ಮೂರು ಪಟಾಕಿ ಕಾರ್ಖಾನೆಗಳಲ್ಲಿ ಬೆಂಕಿ ಕಾಣಿಸಿಕೊಂಡು 35 ಮಂದಿ ಸಜೀವ ದಹನವಾದರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
 • ಜುಲೈ 16, 2004, ತಮಿಳುನಾಡು: ಕುಂಭಕೋಣಂ ದುರಂತವೆಂದೇ ಕುಖ್ಯಾತಿ ಪಡೆದ ದುರಂತವಿದು. ಶ್ರೀಕೃಷ್ಣ ಅನುದಾನಿತ ಹೈಯರ್‌ ಸೆಕೆಂಡರಿ ಶಾಲೆಯ ಅಡುಗೆ ಕೋಣೆಯಲ್ಲಿ ಉರಿದ ಬೆಂಕಿ 94 ಮಂದಿ ಅಮಾಯಕ ಮುದ್ದು ಮುಕ್ಕಳನ್ನು ಆಹುತಿ ಪಡೆಯಿತು.
 • 23 ಜನವರಿ 2004, ಶ್ರೀರಂಗಂ, ತಮಿಳುನಾಡು: ಧಾರ್ಮಿಕ ಕ್ಷೇತ್ರ ಶ್ರೀರಂಗಂನ ಪದ್ಮಪ್ರಿಯಾ ಕಲ್ಯಾಣ ಮಂಟಪದಲ್ಲಿ ವಿಡಿಯೋ ಕ್ಯಾಮೆರಾಕ್ಕೆ ಸಂಪರ್ಕಿಸಿದ್ದ ವೈರ್‌ನಲ್ಲಾದ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಅಗ್ನಿ ದುರಂತ. ವರ ಸೇರಿ 57 ಮಂದಿ ದುರ್ಮರಣ
 • ಜೂನ್‌ 2002, ಆಗ್ರಾ: ಉತ್ತರಪ್ರದೇಶದ ಆಗ್ರಾದಲ್ಲಿರುವ ಶ್ರೀ ಲೀ ಇಂಟರ್‌ನ್ಯಾಷನಲ್‌ ಹೆಸರಿನ ಪಾದರಕ್ಷೆ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 32 ಮಂದಿ ಜೀವ ಕಳೆದುಕೊಂಡರು.
 • ಉಪಹಾರ್‌ ಸಿನಿಮಾ ಅಗ್ನಿ ದುರಂತ, 13 ಜೂನ್ 1997, ದೆಹಲಿ: ದೇಶಾದ್ಯಂತ ಚರ್ಚೆಗೆ ಗ್ರಾಸವಾದ ದುರಂತ ಇದು. ದೆಹಲಿಯಲ್ಲಿರುವ ಗ್ರೀನ್‌ ಪಾರ್ಕ್ ಬಳಿಯ ಉಪಹಾರ್‌ ಸಿನಿಮಾದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ದುರಂತದಲ್ಲಿ 58 ಮಂದಿ ಅಸುನೀಗಿದರು ಮತ್ತು 103 ಮಂದಿ ಗಂಭೀರವಾಗಿ ಗಾಯಗೊಂಡರು.
 • ಫೆಬ್ರವರಿ 1997, ಒಡಿಶಾ: ಬರಿಪಾದ ಎಂಬಲ್ಲಿ ನಿಗಮಾನಂದ ಧಾರ್ಮಿಕ ಸಮ್ಮೇಳನದಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಬರೋಬ್ಬರೀ 206 ಮಂದಿ ಅಮಾಯಕ ಭಕ್ತರು ತಮ್ಮ ಪ್ರಾಣ ಕಳೆದುಕೊಳ್ಳಬೇಕಾಯಿತು.
 • ಡಿಸೆಂಬರ್‌ 1995, ಹರಿಯಾಣ: ಹರಿಯಾಣದ ಮಂಡಿ ದಬ್ವಾಲಿಯಲ್ಲಿ ಘಟಿಸಿದ ಭೀಕರ ದುರಂತವಿದು. ಈ ಅಗ್ನಿ ಅನಾಹುತದಲ್ಲಿ 442 ಮಂದಿ ಸಜೀವ ದಹನವಾದರು. ಅವರಲ್ಲಿ 258 ಮುದ್ದು ಮಕ್ಕಳು ಕೂಡಾ ಸೇರಿದ್ದರು. ಜನರೇಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಕಾಣಿಸಿಕೊಂಡ ಬೆಂಕಿ ಇತರೆಡೆಗೆ ವ್ಯಾಪಿಸಿತು ಮತ್ತು ಈ ವೇಳೆ ನೂಕುನುಗ್ಗಲಿಂದ ಕಾಲ್ತುಳಿತ ಕೂಡಾ ಉಂಟಾಯಿತು.
 • ಏಪ್ರಿಲ್‌, 2016, ಕೊಲ್ಲಂ: ಇದೇ ವರ್ಷದ ಕೇರಳದ ಕೊಲ್ಲಂನಲ್ಲಿ ಪುತ್ತಿಂಗಳ್‌ ದೇವಿ ಪಟಾಕಿ ಉತ್ಸವದಲ್ಲಿ ಉಂಟಾದ ದುರಂತದಲ್ಲಿ ಸುಮಾರು 110 ಮಂದಿ ಸಾವನ್ನಪ್ಪಿದ್ದರು.
 • 1952, ಶಬರಿಮಲ: ಶಬರಿಮಲ ದೇವಸ್ಥಾನದಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ 68 ಮಂದಿ ಬಲಿಯಾದರು.

► Follow us on –  Facebook / Twitter  / Google+

Facebook Comments

Sri Raghav

Admin