ಒಡೆದು ಆಳುವ ನೀತಿಯಲ್ಲಿ ಸಿದ್ದರಾಮಯ್ಯನವರ ಸರ್ಕಾರ ನಂ.1 : ಸದಾನಂದಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Sadanandagowda--01
ಬೆಂಗಳೂರು. ಮಾ. 20: ಪ್ರತ್ಯೇಕ ಲಿಂಗಾಯತ- ವೀರಶೈವ ಧರ್ಮಕ್ಕೆ ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯನವರ ಸರ್ಕಾರ ಶಿಫಾರಸು ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ, ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡುವ ಮೂಲಕ ಕಾಂಗ್ರೆಸ್ ಶವಪೆಟ್ಟಿಗೆಗೆ ಸಿಎಂ ಸಿದ್ದರಾಮಯ್ಯ ಕೊನೆಯ ಮೊಳೆ ಹೊಡೆದಿದ್ದಾರೆ ಎಂದಿದ್ದಾರೆ.

ಎಲ್ಲ ಕಡೆ ಕರ್ನಾಟಕ ಸರ್ಕಾರ ನಂ.1 ಎಂದು ಬೋರ್ಡ್ ಹಾಕಿಕೊಂಡಿದ್ದಾರೆ. ಒಡೆದು ಆಳುವ ನೀತಿಯಲ್ಲಿ ರಾಜ್ಯ ಸರ್ಕಾರ ನಂ.1 ಎಂದು ಹಾಕಿಕೊಳ್ಳ ಬೇಕಿತ್ತು. ವಿಭಜನಕಾರಿ ನೀತಿಯನ್ನು ಜನರೇ ತಿರಸ್ಕರಿಸಲಿಸಲಿದ್ದಾರೆ. ರಾಜ್ಯ ಸರ್ಕಾರ ಕಳಿಸಿದ ಎಲ್ಲ ವಿಚಾರಕ್ಕೂ ಕೇಂದ್ರ ಸರ್ಕಾರ ಸೀಲ್ ಹಾಕಿ ಕಳಿಸಬೇಕೆಂದಿಲ್ಲ. ವಿಚಾರ ವಿಮರ್ಶೆ ನಂತರ ತೀರ್ಮಾನಕ್ಕೆ ಬರಲಾಗುತ್ತದೆ. ಕಾನೂನು ತನ್ನ ಕೆಲಸ ಮಾಡುತ್ತದೆ ಎಂದರು.

Facebook Comments

Sri Raghav

Admin