ಒತ್ತಾಯ ಪೂರ್ವಕವಾಗಿ ಬಾಲ್ಯ ವಿವಾಹ : ತನ್ನದೇ ಮದುವೆ ತಡೆದ ಬಾಲಕಿ

ಈ ಸುದ್ದಿಯನ್ನು ಶೇರ್ ಮಾಡಿ

childwood

ತಿಪಟೂರು, ಮಾ.15- ಒತ್ತಾಯ ಪೂರ್ವಕವಾಗಿ ವಿವಾಹ ಮಾಡುತ್ತಿದ್ದಾರೆಂದು ವಿವಾಹ ನಿಶ್ಚಯವಾಗಿದ್ದ ಬಾಲಕಿಯೇ ತನ್ನ ಸಂಬಂಧಿಕರೊಂದಿಗೆ ತಾಲ್ಲೂಕಿನ ಗೋವಿನಪುರದಲ್ಲಿರುವ ಮಕ್ಕಳ ಸಹಾಯವಾಣಿ (1098) ಕಚೇರಿಗೆ ದೂರು ನೀಡಿ ದಿಟ್ಟತನ ಮೆರೆದಿದ್ದಾಳೆ.ತಾಲ್ಲೂಕಿನ ಹಾಲೇನಹಳ್ಳಿ ಗ್ರಾಮದ 9ನೇ ತರಗತಿ ಓದುತ್ತಿರುವ ಬಾಲಕಿಗೆ ತನ್ನ ತಾಯಿಯೇ ಕೈದಾಳ ಮೂಲದ 28 ವರ್ಷದ ಲಾರಿ ಡ್ರ್ಯೆವರ್‍ನೊಂದಿಗೆ ವಿವಾಹ ನಿಶ್ಚಯ ಮಾಡಿದ್ದಾರೆ. ನಾನು 15 ದಿನಗಳಿಂದ ಶಾಲೆಗೆ ಹೋಗುತ್ತಿಲ್ಲ. ಅವರು ನನ್ನನ್ನು ಬಲವಂತವಾಗಿ ವಿವಾಹ ಮಾಡಿಸುತ್ತಾರೆ ಎಂದು ಹೆದರಿ ತನ್ನ ಸಂಬಂಧಿಕರ ಮನೆಯಲ್ಲಿ ಇದ್ದೇನೆ. ನನಗೆ ಓದಲು ಇಷ್ಟ ನನಗೆ ಪರಿಕ್ಷೆ ಬರೆಯಲು ನೆರವು ನೀಡಿ ಮತ್ತು ನಾನು ಈಗಲೇ ಮದುವೆ ಆಗುವುದಿಲ್ಲ. ನನ್ನ ವಿವಾಹವನ್ನು ನಿಲ್ಲಿಸಿ ಎಂದು ದೂರು ನೀಡಿದ್ದಾಳೆ.

ತಕ್ಷಣ ಕಾರ್ಯಪ್ರವೃತ್ತರಾದ ಮಕ್ಕಳ ಸಹಾಯವಾಣಿ ನಿರ್ದೇಶಕ ಬಿ.ಎಸ್.ನಂದಕುಮಾರ್ ಹಾಗೂ ಸಿಬ್ಬಂದಿಗಳು, ತಾಲ್ಲೂಕಿನ ಸಿ.ಡಿ.ಪಿ.ಓ ಮತ್ತು ಬಿ.ಇ.ಓ, ಹೊನವಳ್ಳಿ ಹಾಗೂ ನೊಣವಿನಕರೆ ಆರಕ್ಷಕ ಉಪ ನಿರೀಕ್ಷರೊಂದಿಗೆ ಚರ್ಚಿಸಿ ಎರಡು ಠಾಣಾ ವ್ಯಾಪ್ತಿಯ ಬಾಲಕಿಯ ಪೋಷಕರ ಮನೆಗೆ ಭೇಟಿ ನೀಡಿ ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ತಿಳುವಳಿಕೆ ನೀಡಿ ಅವರಿಂದ ಮಚ್ಚಳಿಕೆ ಬರೆಸಿಕೊಂಡಿದ್ದಾರೆ.ಬಾಲಕಿಗೆ 18 ವರ್ಷ ತುಂಬುವವರೆಗೂ ಪ್ರತಿ 3 ತಿಂಗಳಿಗೊಮ್ಮೆ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಕಚೇರಿಗೆ ಅಥವಾ ಪೋಲಿಸ್ ಠಾಣೆಗೆ ಖುದ್ದು ಹಾಜರಾಗಿ ಲಿಖಿತ ಹೇಳಿಕೆ ನೀಡಬೇಕು. ಉಲ್ಲಂಘಿಸಿದರೆ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿ ಮದುವೆ ನಿಲ್ಲಿಸಿದ್ದಾರೆ.ಮಕ್ಕಳ ಸಹಾಯವಾಣಿ ನಿರ್ದೇಶಕ ಬಿ.ಎಸ್.ನಂದಕುಮಾರ್ ಮತ್ತು ಸಿಬ್ಬಂದಿಗಳು, ಹೊನವಳ್ಳಿ ಮತ್ತು ನೊಣವಿನಕರೆ ಆರಕ್ಷಕ ಉಪ ನಿರೀಕ್ಷರಾದ ಲಕ್ಷ್ಮೀಕಾಂತ್, ಮುದ್ದಯ್ಯ, ಮಹಿಳಾ ಮಕ್ಕಳ ಮೇಲ್ವಿಚಾರಕಿ ಗೌರಮ್ಮ, ಶಾಲಾ ಮುಖ್ಯ ಶಿಕ್ಷಕಿ ವರಲಕ್ಷ್ಮೀ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin